Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಬೆಂಗಳೂರಿನ ಸಿಟಿಆರ್ ಹೋಟೆಲ್‌ನಲ್ಲಿ ಮಸಾಲೆ ದೋಸೆ ಸವಿದ ಕೊಹ್ಲಿ - ಅನುಷ್ಕಾ

Virat Kohli and Anushka Sharma visited Bengalurus CTR hotel and tasted masala dosa there

ಸದ್ಯ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೆಲ ಪಂದ್ಯಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿವೆ. ಅದರಂತೆ ಇಂದು ( ಏಪ್ರಿಲ್ 23 ) ಚಿನ್ನಸ್ವಾಮಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ.

ಈ ಸಲುವಾಗಿ ವಿರಾಟ್ ಕೊಹ್ಲಿ ಸಿಲಿಕಾನ್ ಸಿಟಿಗೆ ಎರಡು ದಿನ ಮುಂಚಿತವಾಗಿಯೇ ಆಗಮಿಸಿ ಪಂದ್ಯಕ್ಕಾಗಿ ಅಭ್ಯಾಸ ನಡೆಸಿದ್ದಾರೆ. ಅಭ್ಯಾಸ ನಡೆಸುತ್ತಿರುವ ಸಂದರ್ಭದಲ್ಲಿಯೇ ಕೆಲ ಸಮಯ ಬಿಡುವು ಮಾಡಿಕೊಂಡಿರುವ ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಊರಿನಲ್ಲಿ ಸುತ್ತಾಡಿದ್ದಾರೆ. ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಸಾಥ್ ನೀಡಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸಿಟಿಆರ್ ಶ್ರೀ ಸಾಗರ್ ಸೆಂಟ್ರಲ್ ಹೋಟೆಲ್‌ಗೆ ಭೇಟಿ ನೀಡಿದ್ದಾರೆ. ರುಚಿಕರವಾದ ತಿಂಡಿ ತಿನಿಸುಗಳಿಗೆ ಖ್ಯಾತಿಯನ್ನು ಪಡೆದಿರುವ ಸಿಟಿಆರ್ ಹೋಟೆಲ್‌ನಲ್ಲಿ ವಿರುಷ್ಕಾ ದಂಪತಿ, ಅವರ ಸ್ನೇಹಿತರು ಹಾಗೂ ಕುಟುಂಬಸ್ಥರು ಮಸಾಲೆ ದೋಸೆ, ಕೇಸರಿಬಾತ್, ಗೋಲಿ ಬಜೆ ಹಾಗೂ ಐಸ್‌ಕ್ರೀಂಗಳನ್ನು ಸವಿದಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ಮಲ್ಲೇಶ್ವರದ ಸಿಟಿಆರ್‌ಗೆ ಬಂದಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಹೋಟೆಲ್ ಬಾಗಿಲ ಬಳಿ ಅಭಿಮಾನಿಗಳು ಜಮಾಯಿಸಿದ್ದರು. ಕೊಹ್ಲಿ ಮಸಾಲೆ ದೋಸೆ ಸವಿದು ಹೊರಬರುತ್ತಿದ್ದಂತೆಯೇ ಕೊಹ್ಲಿ.. ಕೊಹ್ಲಿ... ಆರ್‌ಸಿಬಿ.. ಆರ್‌ಸಿಬಿ.. ಎಂದು ಅಭಿಮಾನಿಗಳು ಘೋಷಣೆಯನ್ನು ಕೂಗಿದ್ದಾರೆ.

ಅಲ್ಲದೇ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸಿಟಿಆರ್‌ನಲ್ಲಿ ದೋಸೆ ಸವಿದಿದ್ದರ ಅನುಭವವನ್ನು ಅಲ್ಲಿನ ಬೋರ್ಡ್ ಮೇಲೆ ಬರೆದು ಸಹಿ ಹಾಕಿದ್ದಾರೆ. ಈ ಫೋಟೊವನ್ನು ಸಿಟಿಆರ್ ಹೋಟೆಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಕುಟುಂಬ ಹಾಗೂ ಸ್ನೇಹಿತರ ಜತೆ ಕುಳಿತು ಇಲ್ಲಿ ಆಹಾರ ಸೇವಿಸುವ ಮೂಲಕ ಅದ್ಭುತ ಸಮಯ ಕಳೆದಿದ್ದೇವೆ. ನಿಮ್ಮ ಆತಿಥ್ಯಕ್ಕೆ ಧನ್ಯವಾದಗಳು. ಆಹಾರ ತುಂಬಾ ರುಚಿಕರವಾಗಿತ್ತು ಎಂದು ವಿರುಷ್ಕಾ ಜೋಡಿ ಬರೆದುಕೊಂಡಿದೆ.

ಇನ್ನು ಈ ಹಿಂದೊಮ್ಮೆ ಬೆಂಗಳೂರಿನ ಥಾಮ್ಸ್ ಬೇಕರಿಗೂ ಸಹ ವಿರಾಟ್ ಕೊಹ್ಲಿ ಪಫ್ ತಿನ್ನಲು ತೆರಳಿದ್ದರು.ಆದರೆ ಈ ರೀತಿ ಬಹಿರಂಗವಾಗಿ ಆ ಬಾರಿ ಕೊಹ್ಲಿ ಹೋಗಿರಲಿಲ್ಲ. ಬೆಂಗಳೂರಿನ ಫ್ರೇಜರ್ ಟೌನ್ ಎಂದೇ ಕರೆಯಲ್ಪಡುವ ಪುಲಿಕೇಶಿ ನಗರದಲ್ಲಿರುವ ಥಾಮ್ಸ್ ಎಂಬ ಪ್ರಸಿದ್ಧ ಬೇಕರಿಗೆ ವಿರಾಟ್ ಕೊಹ್ಲಿ ಪಫ್ ಖರೀದಿಸಲು ಒಬ್ಬಂಟಿಯಾಗಿ ತೆರಳಿದ್ದರು. ಈ ವಿಚಾರವನ್ನು ಆರ್‌ಸಿಬಿ ಇನ್‌ಸೈಡರ್‌ನಲ್ಲಿ ಕೊಹ್ಲಿ ಬಿಚ್ಚಿಟ್ಚಿದ್ದರು. ಪತ್ನಿ ಅನುಷ್ಕಾ ಶರ್ಮಾ ಬಾಯಲ್ಲಿ ಯಾವಾಗಲೂ ಈ ಬೇಕರಿಯ ಕುರಿತು ಒಳ್ಳೆಯ ವಿಮರ್ಶೆ ಬರುತ್ತಿದ್ದ ಕಾರಣ ಈ ಬೇಕರಿಯಲ್ಲಿಯೇ ಪಫ್ ತಿನ್ನಬೇಕೆಂದು ಹೊರಟದ್ದೆ ಎಂದು ಕೊಹ್ಲಿ ತಿಳಿಸಿದ್ದರು. ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಕ್ತಾಯವಾದಾಗ ಕೊಹ್ಲಿ ಆ ಬೇಕರಿಗೆ ಒಬ್ಬಂಟಿಯಾಗಿ ತೆರಳಿದ್ದರಂತೆ.

ಇನ್ನು ಫ್ರೇಜರ್ ಟೌನ್‌ನಲ್ಲಿನ ಈ ಬೇಕರಿ ಯಾವಾಗಲೂ ಜನರ ಗುಂಪಿನಿಂದ ಕೂಡಿರುವ ಸ್ಥಳವಾದ್ದರಿಂದ ವಿರಾಟ್ ಕೊಹ್ಲಿ ಸಾಮಾನ್ಯರಂತೆ ತೆರಳುವುದು ಕಷ್ಟವಾಗಿತ್ತು. ಹೀಗಾಗಿ ಕೊಹ್ಲಿ ಮುಖ ಕಾಣದ ಹಾಗೆ ಮಾಸ್ಕ್ ಧರಿಸಿ ಮತ್ತು ತಲೆಗೆ ಟೋಪಿ ಧರಿಸಿ ಬೇಕರಿಗೆ ಎಂಟ್ರಿ ಕೊಟ್ಟಿದ್ದರು. ಇನ್ನು ತಮ್ಮ ಡ್ರೈವರ್‌ನನ್ನು ಕಾರಿನಲ್ಲಿಯೇ ಇರುವಂತೆ ಹೇಳಿ ಬೇಕರಿಗೆ ಹೋದ ತಮ್ಮನ್ನು ಅಲ್ಲಿನ ಜನ ಕಂಡು ಹಿಡಿಯಲಿಲ್ಲ ಅಷ್ಟರ ಮಟ್ಟಿಗೆ ಅಲ್ಲಿ ಜನಸಂದಣಿ ಇತ್ತು ಎಂದು ಕೊಹ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.

Story first published: Sunday, April 23, 2023, 9:59 [IST]
Other articles published on Apr 23, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+