Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರುಷ್ಕಾ ರಿಸೆಪ್ಷನ್ ಪಾರ್ಟಿಯಲ್ಲಿ ಕ್ರಿಕೆಟ್-ಬಾಲಿವುಡ್ ಸಮ್ಮಿಲನ

ಮುಂಬೈ, ಡಿಸೆಂಬರ್ 27: ಮಂಗಳವಾರ ಸಂಜೆ (ಡಿ.26) ಮುಂಬೈನಲ್ಲಿ ನಡೆದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ವಿವಾಹ ಆರತಕ್ಷತೆ ಪಾರ್ಟಿ ಕ್ರಿಕೆಟ್ ಮತ್ತು ಬಾಲಿವುಡ್ ಸಮ್ಮಿಲನವಾಗಿತ್ತು.

ಕ್ರಿಕೆಟರ್ ಹಾಗೂ ಬಾಲಿವುಡ್ ನಟ-ನಟಿಯರ ದಂಡೇ ವಿರುಷ್ಕಾ ರಿಸೆಪ್ಷನ್ ಪಾರ್ಟಿಯಲ್ಲಿ ಪಾಲ್ಗೊಂಡು ನವ ಜೋಡಿಗಳಿಗೆ ಶುಭ ಹಾರೈಸಿದರು. ಮಹೇಂದ್ರ ಸಿಂಗ್ ಧೋನಿ, ವಿವಿಎಸ್ ಲಕ್ಷ್ಮಣ್, ಸುನೀಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಹಾಲಿ ಹಾಗೂ ಮಾಜಿ ಕ್ರಿಕೆರ್ಸ್ ಗಳು ತಮ್ಮ ಪತ್ನಿಯೊಂದಿಗೆ ಆಗಮಿಸಿರುವುದು ವಿಶೇಷವಾಗಿತ್ತು.

ವರೈಟಿ ಡ್ರೆಸ್ ನಲ್ಲಿ ಮಿಂಚಿದ ವಿರಾಟ್- ಅನುಷ್ಕಾ ಜೋಡಿ ಹಾಡಿಗೆ ಸಖತ್ ಸ್ಟೆಪ್ ಹಾಕಿದರು. ಈ ವೇಳೆ ಪಾರ್ಟಿಯಲ್ಲಿ ನೆರದಿದ್ದ ಅತಿಥಿಗಳು ಸಹ ಅವರ ಜೊತೆ ಕುಣಿದು ಕುಪ್ಪಳಿಸಿದರು.

ಮತ್ತೊಂದು ವಿಶೇಷವೆನೆಂದರೆ ವಿರಾಟ್ ಹಾಗೂ ಅನುಷ್ಕಾ ಶರ್ಮಾ ಮದುವೆ ಘೋಷಣೆ ಟ್ವೀಟ್ ಅನ್ನು ಗೋಲ್ಡನ್ ಟ್ವೀಟ್ ಆಫ್ ದಿ ಇಯರ್ ಎಂದು ಟ್ವಿಟ್ಟರ್ ಸಂಸ್ಥೆ ಘೋಷಣೆ ಮಾಡಿದೆ.

ವಿರುಷ್ಕಾ ಆರಕ್ಷತೆಗೆ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದರು. ಆ ಗೆಸ್ಟ್‌ಗೆ ವಿರಾಟ್‌ ಅವರು ಖುದ್ದಾಗಿ ಆಹ್ವಾನಿಸಿದ್ದು, ಆ ಗೆಸ್ಟ್ ಯಾರು ಎನ್ನುವುದನ್ನು ಮುಂದೆ ನೋಡಿ.

ವಿಶೇಷ ಅತಿಥಿಯಾಗಿ ಲಂಕಾದ ಗಯಾನ್ ಸೇನನಾಯಕೆ

ವಿಶೇಷ ಅತಿಥಿಯಾಗಿ ಲಂಕಾದ ಗಯಾನ್ ಸೇನನಾಯಕೆ

ಮಂಗಳವಾರ ಮುಂಬೈನಲ್ಲಿ ಮತ್ತೊಂದು ಆರತಕ್ಷತೆ ಹಮ್ಮಿಕೊಂಡಿದ್ದರು. ಈ ಆರತಕ್ಷತೆ ಕಾರ್ಯಕ್ರಮದಲ್ಲಿ ವಿರಾಟ್‌ ಕೊಹ್ಲಿ ಅವರ ಶ್ರೀಲಂಕಾದ ಅಭಿಮಾನಿ ಗಯಾನ್ ಸೇನನಾಯಕೆಯನ್ನು ಆರತಕ್ಷತೆಗೆ ಆಹ್ವಾನ ನೀಡಿದ್ದರು. ಅದರಂತೆ ಆರತಕ್ಷತೆ ಆಗಮಿಸಿದ ಗಯಾನ್ ನವ ದಂಪತಿ ಶುಭ ಕೋರಿದರು. ಈ ವೇಳೆ ವಿರುಷ್ಕಾ ದಂಪತಿ ಗಯಾನ್ ಸೇನಾಯಕೆ ಜೊತೆಗಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..

ಶುಭ ಹಾರೈಸಿದ ಕಿಂಗ್ ಖಾನ್ ಶಾರುಖ್ ಖಾನ್

ಶುಭ ಹಾರೈಸಿದ ಕಿಂಗ್ ಖಾನ್ ಶಾರುಖ್ ಖಾನ್

ಮುಂಬೈನಲ್ಲಿ ನಡೆದ ವಿರುಷ್ಕಾ ಎರಡನೇ ಅರತಕ್ಷತೆ ಪಾರ್ಟಿಯಲ್ಲಿ ಬಾಲಿವುಡ್ ನಟ ಕಿಂಗ್ ಖಾನ್ ಶಾರುಖ್ ಖಾನ್ ಪಾಲ್ಗೊಂಡು, ನವ ಜೋಡಿಗಳಿಗೆ ಶುಭ ಹಾರೈಸಿದರು.

ಕೊಹ್ಲಿ ಅರತಕ್ಷತೆಯಲ್ಲಿ ಬಚ್ಚನ್ ಕುಟುಂಬ

ಕೊಹ್ಲಿ ಅರತಕ್ಷತೆಯಲ್ಲಿ ಬಚ್ಚನ್ ಕುಟುಂಬ

ಕೊಹ್ಲಿ ಅರತಕ್ಷತೆಯಲ್ಲಿ ಅಮಿತಾಬ್ ಬಚ್ಚನ್ ಅವರ ಕುಟುಂಬ ಪಾಲ್ಗೊಂಡಿತ್ತು. ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ ಪತ್ನಿ ಐಶ್ವರ್ಯ ರೈ ರಿಸೆಪ್ಷನ್ ಪಾರ್ಟಿಯಲ್ಲಿ ಪಾಲ್ಗೊಡಿದ್ದರು. ವಿಶೇಷ ಅಂದ್ರೆ ಬಚ್ಚನ್ ಕುಟುಂಬ ಒಟ್ಟಿಗೆ ನವಜೋಡಿಗಳ ಜತೆ ಫೋಟೋಗೆ ಫೋಸ್ ನೀಡಿದ್ದಾರೆ. ಆ ಫೋಟೋಗಳು ಇದೀಗ ವೈರಲ್ ಆಗಿದೆ.

ವಿರುಷ್ಕಾ ಅರತಕ್ಷತೆಯಲ್ಲಿ ಕ್ರಿಕೆಟರ್ಸ್

ವಿರುಷ್ಕಾ ಅರತಕ್ಷತೆಯಲ್ಲಿ ಕ್ರಿಕೆಟರ್ಸ್

ಮಹೇಂದ್ರ ಸಿಂಗ್ ಧೋನಿ, ವಿವಿಎಸ್ ಲಕ್ಷ್ಮಣ್, ಸುನೀಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಹಾಲಿ ಹಾಗೂ ಮಾಜಿ ಕ್ರಿಕೆರ್ಸ್ ಗಳು ತಮ್ಮ ಪತ್ನಿಯೊಂದಿಗೆ ವಿರುಷ್ಕಾ ಅರತಕ್ಷತೆಗೆ ಆಗಮಿಸಿ ಶುಭ ಹಾರೈಸಿದರು.

ವಿರುಷ್ಕಾ ರಿಸೆಪ್ಷನ್ ನಲ್ಲಿ ಬಾಲಿವುಡ್ ದಂಡು

ವಿರುಷ್ಕಾ ರಿಸೆಪ್ಷನ್ ನಲ್ಲಿ ಬಾಲಿವುಡ್ ದಂಡು

ವಿರುಷ್ಕಾ ರಿಸೆಪ್ಷನ್ ಗೆ ಇಡೀ ಬಾಲಿವುಡ್ ದಂಡೇ ಹರಿದುಬಂದಿತ್ತು, ಶಾರುಖ್, ಅಮಿತಾಬ್ ಬಚ್ಚನ್ ಫ್ಯಾಮಿಲಿ, ಸಿಂಗರ್ ಎಆರ್ ರೆಹಮನ್, ರಣಬೀರ್ ಕಪೂರ್, ಕತ್ರೀನಾ ಕೈಫ್, ಮಾಧುರಿ ದಿಕ್ಷೀತ್, ಕಂಗನಾ ರೇಖಾ ಸೇರಿದಂತೆ ಹಲವು ಬಾಲಿವುಡ್ ನಟ-ನಟಿಯರು ಕೊಹ್ಲಿ-ಅನುಷ್ಕಾ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದರು.

ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಕೊಹ್ಲಿ-ಅನುಷ್ಕಾ

ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಕೊಹ್ಲಿ-ಅನುಷ್ಕಾ

ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸೆಂಬರ್‌ 11ರಂದು ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಹನಿಮೂನಿಗೆಂದು ಯೂರೋಪ್ ಗೆ ತರಳಿದ್ದರು. ನಂತರ ಡಿಸೆಂಬರ್ 21ರಂದು ದೆಹಲಿಯಲ್ಲಿ ಧಾಮ್..ಧೂಮ್..ಆಗಿ ವಿರುಷ್ಕಾ ಆರತಕ್ಷತೆ ನಡೆದಿತ್ತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಮಂಗಳವಾರ ಮುಂಬೈನಲ್ಲಿ ಎರಡನೇ ಅರತಕ್ಷತೆ ಅದ್ದೂರಿಯಾಗಿ ನಡೆಯಿತು.

ಗೋಲ್ಡನ್ ಟ್ವೀಟ್ ಆಫ್ ದಿ ಇಯರ್

ಗೋಲ್ಡನ್ ಟ್ವೀಟ್ ಆಫ್ ದಿ ಇಯರ್

ವಿರಾಟ್ ಹಾಗೂ ಅನುಷ್ಕಾ ಶರ್ಮಾ ಮದುವೆ ಘೋಷಣೆ ಟ್ವೀಟ್ ಅನ್ನು ಗೋಲ್ಡನ್ ಟ್ವೀಟ್ ಆಫ್ ದಿ ಇಯರ್ ಎಂದು ಟ್ವಿಟ್ಟರ್ ಸಂಸ್ಥೆ ಘೋಷಣೆ ಮಾಡಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+