Yashasvi Jaiswal: ಯಶ್ವಸ್ವಿ ಜೈಸ್ವಲ್‌ಗೆ ಗುರು ಮಂತ್ರ ಬೋಧಿಸಿದ ವಿರಾಟ್, ಗೌತಮ್
ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶ ನಡುವಣ ಮೊದಲ ಟೆಸ್ಟ್ ಪಂದ್ಯ ಗುರುವಾರ ನಡೆಯಲಿದೆ. ಈ ಪಂದ್ಯಕ್ಕೆ ಉಭಯ ತಂಡಗಳು ಮೈದಾನದಲ್ಲಿ ತಾಲೀಮು ನಡೆಸಿವೆ. ಈ ವೇಳೆ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಸಹ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಈ ವೇಳೆ ಯುವ ಆಟಗಾರನಿಗೆ ಗುರು ಮಂತ್ರ ಬೊಧಿಸಲಾಯಿತು.
ಅಭ್ಯಾಸದ ವೇಳೆ ಎಲ್ಲರ ಕಣ್ಣುಗಳು ಸಹ ಯಶಸ್ವಿ ಜೈಸ್ವಾಲ್ ಅವರ ಮೇಲೆ ನೆಟ್ಟಿದ್ದವು. ಇವರು ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಹೊತ್ತು ಕೊಳ್ಳಲಿದ್ದಾರೆ. ಯಶಸ್ವಿ ಇಂಗ್ಲೆಂಡ್ ವಿರುದ್ಧದ ನೀಡಿರುವ ಅಮೋಘ ಪ್ರದರ್ಶನವನ್ನು ಮುಂದುವರೆಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ವೇಳೆ ಯುವ ಆಟಗಾರನಿಗೆ ಅನುಭವಿ ವೇಗದ ಬೌಲರ್‌ಗಳು ಸವಾಲು ಹಾಕಿ ಕಾಟ ನೀಡಿದರು.

ಯಶಸ್ವಿಗೆ ಗುರು ಮಂತ್ರ
ಅಭ್ಯಾಸದ ವೇಳೆ ಯಶಸ್ವಿ ಜೈಸ್ವಾಲ್ ಅವರಿಗೆ, ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಬೌಲಿಂಗ್ ನಡೆಸಿದರು. ವೇಗದ ದಾಳಿಯನ್ನು ಎದುರಿಸಲು ಯಶಸ್ವಿ ತಡಬಡಾಯಿಸಿದರು. ಇದನ್ನು ಕಂಡು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಅವರ ಬಳಿಗೆ ಬಂದು ಕೆಲವು ಕಿವಿ ಮಾತು ತಿಳಿಸಿದರು. ನೆಟ್ಸ್ ಪಕ್ಕದಲ್ಲಿ ಜೈಸ್ವಾಲ್ ಬ್ಯಾಟಿಂಗ್ ನೋಡುತ್ತಿದ್ದ ವಿರಾಟ್, ಕೆಲವು ಟಿಪ್ಸ್ ನೀಡಿದರು. ಎಡಗೈ ಆಟಗಾರರ ವೇಗದ ಬೌಲರ್‌ಗಳಿಗೆ ಪದೆ ಪದೇ ಬೀಟ್ ಆಗುತ್ತಿದ್ದರು. ವೇಗಿಗಳ ವೇರಿಯಷನ್ ಪತ್ತೆ ಹಚ್ಚುವಲ್ಲಿ ಯಶಸ್ವಿ ಎಡವುತ್ತಿದ್ದರು.
ಗಂಭೀರ್ ಸಲಹೆ
ಚೆಂಡನ್ನು ಬಿಡುವಾಗ ಏನು ಮಾಡಬೇಕು?, ಸರಿಯಾದ ಲೆಂಥ್‌ನಲ್ಲಿ ಚೆಂಡು ಬಿದ್ದಾಗ ಹೇಗೆ ಉತ್ತರಿಸಬೇಕು? ಎಂಬ ಮಂತ್ರವನ್ನು ವಿರಾಟ್ ಕೊಹ್ಲಿ, ಗೌತಮ್ ಗಂಬೀರ್ ಯಶಸ್ವಿ ಜೈಸ್ವಾಲ್ ಅವರಿಗೆ ತಿಳಿಸಿದರು. ಇದಾದ ಬಳಿಕ ಮತ್ತೆ ಯಶಸ್ವಿ ಗಾರ್ಡ್ ಪಡೆದ ಬ್ಯಾಟಿಂಗ್‌ಗೆ ಬಂದರು. ಆದರೆ ಮತ್ತೆ ಸೇಮ್ ಪ್ರಾಂಬ್ಲಮ್ ಫೇಸ್ ಮಾಡಿದರು. ಇವರ ಬ್ಯಾಟಿಂಗ್ ನೆಟ್ಸ್ ಪಕ್ಕದಲ್ಲಿ ನೋಡುತ್ತಾ ನಿಂತಿದ್ದ ಗೌತಮ್ ಗಂಭೀರ್ ಸಹ ಯಶಸ್ವಿಗೆ ಕೆಲವು ಸಲಹೆ ನೀಡಿದರು.
ಇಂಗ್ಲೆಂಡ್ ವಿರುದ್ಧ ಆರ್ಭಟ
ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಈ ಸರಣಿಯಲ್ಲಿ ಯಶಸ್ವಿ 712 ರನ್‌ಗಳ ಅಮೋಘ ಇನಿಂಗ್ಸ್ ಕಟ್ಟಿದ್ದರು. ಆದರೆ ಇವರ ಭರ್ಜರಿ ಫಾರ್ಮ್ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿಲ್ಲ. ಈಗ ಬಾಂಗ್ಲಾ ವಿರುದ್ಧ ಯಶಸ್ವಿ ಆರ್ಭಟಿಸುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.
ಯಶಸ್ವಿ ಜೈಸ್ವಾಲ್ ಬರೀ ಬುಮ್ರಾ ಬೌಲಿಂಗ್ ಎದುರಿಸಲು ಕಷ್ಟ ಪಡಲಿಲ್ಲ. ಬದಲಿಗೆ ಟೀಮ್ ಇಂಡಿಯಾದ ಯುವ ಬೌಲರ್ ಆಕಾಶ್ ದೀಪ್, ಯಶ್ ದಯಾಳ್, ಜಮ್ಮು ಕಾಶ್ಮೀರದ ಬೌಲರ್ ಯಧುವಿರ್ ಸಿಂಗ್ ಅವರ ಎಸೆತವನ್ನು ಎದುರಿಸಲು ಸಹ ಕಷ್ಟ ಪಟ್ಟರು. ವೇಗದ ಬೌಲಿಂಗ್ ವಿರುದ್ಧ ಆಡುವ ಸಮಸ್ಯೆಯನ್ನು ಯಶಸ್ವಿ ಬಗೆ ಹರಿಸಿಕೊಳ್ಳದೇ ಇದ್ದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯ ವೇಳೆ ದೊಡ್ಡ ಸಮಸ್ಯೆಯನ್ನು ಮಾಡಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications