Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನನಗಿಂತ ಹೆಚ್ಚು ವಿವಾದಗಳನ್ನು ನೀವು ಎದುರಿಸಿದ್ದೀರಿ... ವಿರಾಟ್‌ ಕೊಹ್ಲಿ, ಗೌತಮ್ ಗಂಭೀರ್‌ ವಿಡಿಯೋ ವೈರಲ್..

ಟೀಮ್ ಇಂಡಿಯಾ ಗುರುವಾರದಿಂದ ಚೆನ್ನೈನಲ್ಲಿ ಮೊದಲ ಟೆಸ್ಟ್‌ ಪಂದ್ಯವನ್ನು ಆಡಲಿದೆ. ಈ ಟೆಸ್ಟ್‌ ಪಂದ್ಯಕ್ಕೂ ಮುನ್ನ ಬಿಸಿಸಿಐ ವಿಡಿಯೋ ಒಂದನ್ನು ತನ್ನ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಮೈದಾನದಲ್ಲಿ ಈ ಮೊದಲು ಫೈಟ್‌ ಮಾಡುತ್ತಿದ್ದ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್‌ ಅವರನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

ವಿರಾಟ್‌ ಕೊಹ್ಲಿ ಈ ವಿಡಿಯೋದಲ್ಲಿ ಸಂದರ್ಶಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಲುಕ್ ಹಾಗೂ ಸ್ಟೈಲ್‌ಗೆ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ. 2011 ಏಕದಿನ ವಿಶ್ವಕಪ್‌ ವಿಜೇತ ತಂಡದ ಆಟಗಾರರಿಬ್ಬರು ಮನಬಿಚ್ಚಿ ಮಾತನಾಡಿದ್ದಾರೆ. ಅಂದಹಾಗೆ ಈ ಇಬ್ಬರೂ ಸೂಪರ್‌ ಸ್ಟಾರ್‌ಗಳು ಈಗ ಟೀಮ್ ಇಂಡಿಯಾದಲ್ಲಿ ತಮ್ಮದೇ ಆದ ರೋಲ್‌ಗಳನ್ನು ನಿಭಾಯಿಸುತ್ತಿದ್ದಾರೆ.

Virat Kohli and Gautam Gambhir Put Rivalry Rumors to Rest in Lively Interview

2011ರ ಏಕದಿನ ವಿಶ್ವವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಗೌತಮ್‌ ಗಂಭೀರ್, ಈಗ ಟೀಮ್ ಇಂಡಿಯಾದ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಅಂದು ಯುವ ಆಟಗಾರನಾಗಿ ತಂಡದ ಪರ ಬ್ಯಾಟ್ ಮಾಡಿದ್ದ ವಿರಾಟ್‌ ಇಂದು ಅನುಭವಿ ಬ್ಯಾಟರ್‌ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ನಡುವಣ ಸಂದರ್ಶನವೂ 2011ರ ಏಕದಿನ ವಿಶ್ವಕಪ್‌ ದೃಶ್ಯದಿಂದಲೇ ಆರಂಭವಾಗುತ್ತದೆ.

ಆಸೀಸ್‌ ವಿರುದ್ಧ ಬ್ಯಾಟಿಂಗ್ ಸ್ಮರಿನಿದ ಗೌತಮ್

ಸಂದರ್ಶನವನ್ನು ಆರಂಭಿಸಿದ ಗೌತಮ್ ಗಂಭೀರ್, "ಆಸ್ಟ್ರೇಲಿಯಾದಲ್ಲಿ ನೀವು ಬಂಪರ್ ಸರಣಿಯನ್ನು ಆಡಿದ್ದೀರಿ. ಅಲ್ಲಿ ಅಂದು ನೀವು ಆಡಿದ ಆ ಧಾಟಿಗೆ ಇಂದು ನೀವು ಈ ಸ್ಥಾನದಲ್ಲಿ ಕುಳಿತಿದ್ದೀರಿ. ನನಗೂ ಸಹ ನಾನು ನೇಪಿಯರ್‌ನಲ್ಲಿ ಆಡಿದಾಗ ಇದೇ ರೀತಿ ಆಗಿತ್ತು. ಆಗಿನಿಂದಲೂ ನಾನು ಹಿಂತಿರುಗಿ ನೋಡಲೇ ಇಲ್ಲ ಎಂದು ತಿಳಿಸಿದ್ದಾರೆ.

ವಿರಾಟ್‌ ಆಟವನ್ನು ಕೊಂಡಾಡಿದ ಗಂಭೀರ್‌, ಕ್ರಿಕೆಟ್‌ ಜಗತ್ತಿನಲ್ಲಿ ನಿಮ್ಮ ಸಾಧನೆ ಬೇರೆಯವರಿಗೆ ಮಾದರಿ. ನಿಮ್ಮ ಭಾವನೆಗಳನ್ನು ನೀವು ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಮಾಡುವುದಿಲ್ಲ. ನಾನು ಸಹ ಹಾಗೇ ಇರುವೆ ಎಂದಿದ್ದಾರೆ.

Virat Kohli and Gautam Gambhir Put Rivalry Rumors to Rest in Lively Interview

ಇನ್ನು ವಿರಾಟ್‌ ಕೊಹ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದು, ಕೋಚ್‌ ನೀವು ಬ್ಯಾಟಿಂಗ್ ಮಾಡುವಾಗ ಎದುರಾಳಿಗಳೊಂದಿಗೆ ವಾಗ್ವಾದ ನಡೆಸಿದ್ದೀರಿ. ಈ ಕಾರಣದಿಂದಲೇ ನೀವು ಕ್ರಿಕೆಟ್‌ ಅಂಗಳದಿಂದ ದೂರ ಉಳಿಯುತ್ತೀರಿ ಎಂಬ ಮಾತಗಳು ಕೇಳಿ ಬಂದಿದ್ದವು. ನಿಮ್ಮ ಬಗ್ಗೆಯೂ ಟೀಕೆಗಳು ಕೇಳಿ ಬಂದಿವೆ. ನನಗಿಂತ ಹೆಚ್ಚು ವಿವಾದಗಳನ್ನು ನೀವು ಎದುರಿಸಿದ್ದೀರಿ ಎಂದು ವಿರಾಟ್‌ ತಿಳಿಸಿದ್ದಾರೆ.

ಮೈದಾನದಲ್ಲಿ ಫೈಟ್‌

ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಐಪಿಎಲ್ ವೇಳೆ ಎರಡು ಬಾರಿ ಮೈದಾನದಲ್ಲೇ ಕಾದಾಟ ನಡೆಸಿದ್ದಾರೆ. 2013 ರಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್‌ ಪಂದ್ಯದ ವೇಳೆ ವಾಗ್ವಾದ ನಡೆದಿತ್ತು. ವಿರಾಟ್ ಮತ್ತು ಗಂಭೀರ್ ನಡುವೆ ಕ್ರೀಡಾಂಗಣದಲ್ಲಿ ಗಲಾಟೆ ನಡೆದಿತ್ತು. ಇದಾದ ನಂತರ ಐಪಿಎಲ್ 2023ರಲ್ಲಿ ವಿರಾಟ್ ಮತ್ತು ಗಂಭೀರ್ ಮೈದಾನದ ಮಧ್ಯೆ ದೊಡ್ಡ ವಿವಾದ ಮಾಡಿಕೊಂಡಿದ್ದರು. ಆದರೆ ಐಪಿಎಲ್ 2024 ಮತ್ತು ಗಂಭೀರ್ ಟೀಮ್ ಇಂಡಿಯಾದ ಕೋಚ್ ಆದ ನಂತರ, ಇಬ್ಬರ ನಡುವೆ ಹಳೆಯ ದ್ವೇಷ ಮಾಯವಾಗಿದೆ.

Story first published: Wednesday, September 18, 2024, 17:05 [IST]
Other articles published on Sep 18, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+