For Quick Alerts
ALLOW NOTIFICATIONS  
For Daily Alerts
 

ಆರೆಂಜ್‌ ಕ್ಯಾಪ್‌ ಮೇಲೆ ವಿರಾಟ್, ಪರ್ಪಲ್‌ ಕ್ಯಾಪ್‌ ಮೇಲೆ ಜೋಶ್‌ ಕಣ್ಣು

ಶುಕ್ರವಾರ ಲಕ್ನೋನ ಏಕನಾ ಮೈದಾನದಲ್ಲಿ ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ತಂಡಗಳು ಫೈಟ್ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ರಜತ್‌ ಪಟಿದಾರ್‌ ಪಡೆ ಇತಿಹಾಸ ನಿರ್ಮಿಸುವ ಕನಸು ಕಂಡಿದ್ದಾರೆ. ಆರ್‌ಸಿಬಿ ಈ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ, ತವರಿನಾಚೆ ಒಂದೇ ಲೀಗ್‌ನಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದ ದಾಖಲೆಯನ್ನು ತನ್ನದಾಗಿಸಿಕೊಳ್ಳಲಿದೆ. ಈ ವೇಳೆ ಆರ್‌ಸಿಬಿ ಆಟಗಾರರು ಸಹ ವಿಶಿಷ್ಠ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

ಲಕ್ನೋ ಸೂಪರ್‌ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಜಯ ಸಾಧಿಸಿದ್ದೇ ಆದಲ್ಲಿ ಪ್ಲೇ ಆಫ್‌ಗೆ ಅರ್ಹತೆ ಪಡೆಯಬಹುದಾಗಿದೆ. ಇನ್ನು ಎಲ್‌ಎಸ್‌ಜಿಗೂ ಉಳಿದ ಮೂರು ಪಂದ್ಯಗಳು ಸಹ ಮಹಹತ್ವದಾಗಿದೆ. ಈ ಮೂರು ಪಂದ್ಯಗಳಲ್ಲಿ ಎಲ್‌ಎಸ್‌ಜಿ ಗೆಲುವು ದಾಖಲಿಸಿದರೆ, ಮುಂದಿನ ಹಂತಕ್ಕೆ ಕ್ವಾಲಿಫೈ ಆಗಬಹುದು.

Virat Kohli and Josh Hazlewood Aim for Orange and Purple Caps as RCB Target Historic Win Against LSG

ಈ ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರು ಪ್ರಸಕ್ತ ಲೀಗ್‌ನಲ್ಲಿ ರನ್‌ ಗಳನ್ನು ಕಲೆ ಹಾಕಿ ತಂಡಕ್ಕೆ ಆಧಾರವಾಗುತ್ತಿದ್ದಾರೆ. ಈ ಪಂದ್ಯದಲ್ಲಿ ಇವರು ಸ್ಥಿರ ಬ್ಯಾಟಿಂಗ್ ನಡೆಸಿದ್ದೇ ಆದಲ್ಲಿ ಮತ್ತೊಮ್ಮೆ ಆರೆಂಜ್‌ ಕ್ಯಾಪ್‌ ತನ್ನ ತಲೆಗೆ ಇಟ್ಟುಕೊಳ್ಳಬಹುದು. ಆರ್‌ಸಿಬಿ ಸ್ಟಾರ್ ಆಟಗಾರ ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಆರು ರನ್‌ಗಳನ್ನು ಕಲೆ ಹಾಕಿದ್ದೇ ಆದಲ್ಲಿ ಮತ್ತೊಮ್ಮೆ ಆರೆಂಜ್‌ ಕ್ಯಾಪ್‌ ಪಡೆಯಬಹುದಾಗಿದೆ.

ಜಸ್ಟ್‌ 6 ರನ್‌

ವಿರಾಟ್‌ ಕೊಹ್ಲಿ ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಆರು ರನ್‌ ಬಾರಿಸಿದ್ದೇ ಆದಲ್ಲಿ, ಆರೆಂಜ್‌ ಕ್ಯಾಪ್‌ ಪಡೆಯಬಹುದಾಗಿದೆ. ಸದ್ಯ ಆರೆಂಜ್‌ ಕ್ಯಾಪ್‌ ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್‌ ಯಾದವ್ ಬಳಿ ಇದೆ. ಸೂರ್ಯ 510 ರನ್‌ ಕಲೆ ಹಾಕಿದ್ದರೆ, ವಿರಾಟ್ 505 ರನ್‌ ಸಿಡಿಸಿದ್ದಾರೆ.

Virat Kohli and Josh Hazlewood Aim for Orange and Purple Caps as RCB Target Historic Win Against LSG

ಐಪಿಎಲ್‌ನಲ್ಲಿ ಗರಿಷ್ಠ ರನ್‌ ಸಾಧಕರು

ಸೂರ್ಯಕುಮಾರ್ ಯಾದವ್, ಮುಂಬೈ, 12 ಪಂದ್ಯ, 510 ರನ್‌
ಸಾಯಿ ಸುದರ್ಶನ್‌, ಗುಜರಾತ್ ಟೈಟನ್ಸ್, 11 ಪಂದ್ಯ, 509 ರನ್‌
ಶುಭಮನ್‌ ಗಿಲ್‌, ಗುಜರಾತ್ ಟೈಟನ್ಸ್‌, 11 ಪಂದ್ಯ, 508 ರನ್‌
ವಿರಾಟ್‌ ಕೊಹ್ಲಿ, ಆರ್‌ಸಿಬಿ, 11 ಪಂದ್ಯ, 505 ರನ್‌
ಜೋಸ್‌ ಬಟ್ಲರ್‌, ಗುಜರಾತ್ ಟೈಟನ್ಸ್, 11 ಪಂದ್ಯ, 500 ರನ್‌

ಕಳೆದ ಪಂದ್ಯದ ವೇಳೆ ಗಾಯದ ಕಾರಣದಿಂದ ಮೈದಾನಕ್ಕೆ ಇಳಿಯದೇ ಇರುವ ಜೋಶ್‌ ಹ್ಯಾಜಲ್‌ವುಡ್ ಈಗ ಫಿಟ್ ಆಗಿದ್ದಾರೆ ಎಂಬ ಮಾಹಿತಿ ಬಂದಿದೆ. ಇವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೈದಾನ ಪ್ರವೇಶಿಸುವು ಬಹುತೇಕ ಫಿಕ್ಸ್‌ ಎಂದು ಹೇಳಲಾಗುತ್ತದೆ. ಈ ಪಂದ್ಯದಲ್ಲಿ ಜೋಶ್‌ ಹ್ಯಾಜಲ್‌ವುಡ್‌ ಮೂರು ವಿಕೆಟ್‌ಗಳನ್ನು ಪಡೆದಿದ್ದೇ ಆದಲ್ಲಿ ಪರ್ಪಲ್‌ ಕ್ಯಾಪ್‌ ಪಡೆಯಬಹುದಾಗಿದೆ. ಆಡಿರುವ 10 ಪಂದ್ಯಗಳಲ್ಲಿ ಜೋಶ್‌ ಹ್ಯಾಜಲ್‌ವುಡ್‌ 18 ವಿಕೆಟ್‌ ಕಬಳಿಸಿದ್ದಾರೆ. ಇನ್ನು ಮೂರು ವಿಕೆಟ್‌ ಕಬಳಿಸಿದರೆ ಇವರು ಪರ್ಪಲ್‌ ಕ್ಯಾಪ್ ಪಡೆಯಬಹುದು. ಸದ್ಯ ಪರ್ಪಲ್‌ ಕ್ಯಾಪ್‌ ಕರ್ನಾಟಕದ ಆಟಗಾರ ಗುಜರಾತ್ ಟೈಟನ್ಸ್ ಪರ ಆಡುವ ಪ್ರಸಿದ್ಧ್ ಕೃಷ್ಣ ಬಳಿ ಇದೆ. ಇವರು ಒಟ್ಟು 20 ವಿಕೆಟ್‌ ಕಬಳಿಸಿದ್ದಾರೆ.

ಗರಿಷ್ಠ ವಿಕೆಟ್‌ ಸಾಧನೆ

ಪ್ರಸಿದ್ಧ್ ಕೃಷ್ಣ, ಗುಜರಾತ್‌ ಟೈಟನ್ಸ್‌, 11 ಪಂದ್ಯ, 20 ವಿಕೆಟ್‌
ನೂರ್‌ ಅಹ್ಮದ್‌, ಚೆನ್ನೈ ಸೂಪರ್ ಕಿಂಗ್ಸ್‌, 12 ಪಂದ್ಯ, 20 ವಿಕೆಟ್‌
ಜೋಶ್ ಹ್ಯಾಜಲ್‌ವುಡ್‌, ಆರ್‌ಸಿಬಿ, 10 ಪಂದ್ಯ, 18 ವಿಕೆಟ್‌
ಟ್ರೆಂಟ್‌ ಬೌಲ್ಟ್‌, ಮುಂಬೈ ಇಂಡಿಯನ್ಸ್‌, 12 ಪಂದ್ಯ, 18 ವಿಕೆಟ್‌
ವರುಣ್‌ ಚಕ್ರವರ್ತಿ, ಕೆಕೆಆರ್‌, 12 ಪಂದ್ಯ, 17 ವಿಕೆಟ್‌

Story first published: Friday, May 9, 2025, 10:07 [IST]
Other articles published on May 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+