WPL ಹರಾಜಿನಲ್ಲಿ 1.30 ಕೋಟಿ ರೂಪಾಯಿ ಪಡೆದ ಕನ್ನಡತಿ ವೃಂದಾ ದಿನೇಶ್‌ಗೆ ಈ ಸ್ಟಾರ್‌ಗಳೇ ಸ್ಫೂರ್ತಿ!
ಕರ್ನಾಟಕ ಮಹಿಳಾ ತಂಡದ ಬ್ಯಾಟರ್ ವೃಂದಾ ದಿನೇಶ್‌ಗೆ ಶನಿವಾರ, ಡಿಸೆಂಬರ್ 9ರಂದು ವಿಶೇಷ ದಿನವಾಗಿತ್ತು. ಮಹಿಳಾ ಪ್ರೀಮಿಯರ್ ಲೀಗ್ (WPL) ಹರಾಜಿಗೂ ಮುನ್ನ 22 ವರ್ಷದ ಆಟಗಾರ್ತಿಯ ಬಗ್ಗೆ ಯಾರಿಗೂ ಅಷ್ಟೊಂದು ಗೊತ್ತಿರಲಿಲ್ಲ.
ಆದರೆ ಹರಾಜಿನ ನಂತರ, ಯುವ ಆಟಗಾರ್ತಿ ಇದೀಗ ಸಾಕಷ್ಟು ಗಮನ ಸೆಳೆದಿದ್ದಾಳೆ. ಯುಪಿ ವಾರಿಯರ್ಜ್ ಫ್ರಾಂಚೈಸಿ 1.30 ಕೋಟಿ ರೂಪಾಯಿಗಳಿಗೆ ಖರೀದಿಸಿ ನಂತರ, ವೃಂದಾ ದಿನೇಶ್ 2024ರ ಮಿನಿ ಹರಾಜಿನ ಮೂರನೇ ಅತ್ಯಂತ ದುಬಾರಿ ಆಟಗಾರ್ತಿಯಾದಳು.
ಭಾರತದ ಲೆಜೆಂಡರಿ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ ಅವರನ್ನು ವೃಂದಾ ದಿನೇಶ್ ಸ್ಫೂರ್ತಿಯಾಗಿ ನೋಡುತ್ತಾಳೆ.

ಆದಾಗ್ಯೂ, ಆಸ್ಟ್ರೇಲಿಯಾದ ಮತ್ತೋರ್ವ ಆಟಗಾರ್ತಿ ಅಲಿಸ್ಸಾ ಹೀಲಿಯನ್ನು ತನ್ನ ಪ್ರಸ್ತುತ ನೆಚ್ಚಿನ ಬ್ಯಾಟರ್ ಎಂದು ವೃಂದಾ ದಿನೇಶ್ ಹೆಸರಿಸಿದಳು. ಕುತೂಹಲಕಾರಿಯಾಗಿ, ಡಬ್ಲ್ಯುಪಿಎಲ್‌ನ ಎರಡನೇ ಆವೃತ್ತಿಯಲ್ಲಿ ಅಲಿಸ್ಸಾ ಹೀಲಿ ಅವರ ನಾಯಕತ್ವದಲ್ಲಿ ಆಡಲಿದ್ದಾರೆ.
ಆಸ್ಟ್ರೇಲಿಯಾ ಮಹಿಳಾ ನಾಯಕಿಯಾಗಿ ಹೊಸದಾಗಿ ನೇಮಕಗೊಂಡ ಅಲಿಸ್ಸಾ ಹೀಲಿ ಅವರ ಸ್ಟ್ರೋಕ್-ಮೇಕಿಂಗ್ ಮತ್ತು ವಿನಾಶಕಾರಿ ಬ್ಯಾಟಿಂಗ್‌ಗಾಗಿ ಕನ್ನಡತಿ ವೃಂದಾ ದಿನೇಶ್ ಶ್ಲಾಘಿಸಿದಳು.

"ನಾನು ವಿರಾಟ್ ಕೊಹ್ಲಿ ಮತ್ತು ಮೆಗ್ ಲ್ಯಾನಿಂಗ್ ಅವರ ಆಟವನ್ನು ನೋಡಿದ್ದೇನೆ. ಆದರೆ ಅಲಿಸ್ಸಾ ಹೀಲಿ ನನ್ನ ಹೊಸ ನೆಚ್ಚಿನ ಆಟಗಾರ್ತಿ. ಅವಳು ಬ್ಯಾಟಿಂಗ್ ಮಾಡುವ ರೀತಿ ಮತ್ತು ಅವಳು ಎಷ್ಟು ಆಕ್ರಮಣಕಾರಿ ಎಂದು ನಾನು ಇಷ್ಟಪಡುತ್ತೇನೆ," ಎಂದು ವೃಂದಾ ದಿನೇಶ್ ಅವರು ಡಿಸೆಂಬರ್ 10ರಂದು ಇಂಡಿಯಾ ಟುಡೇಗೆ ಹೇಳಿದ್ದಾರೆ.
ಕಠಿಣ ಪರಿಶ್ರಮದ ನಂತರ ಬಹುಮಾನ ಪಡೆದ ವೃಂದಾ
ಕರ್ನಾಟಕದ ವೃಂದಾ ದಿನೇಶ್ ಉದಯೋನ್ಮುಖ ಏಷ್ಯಾ ಕಪ್‌ನಲ್ಲಿ ಭಾರತ ಮಹಿಳಾ ತಂಡದ ಪರ ಆಡಿದರು. ಅಲ್ಲಿ ವೇಗದ ಬೌಲರ್ ಎಸ್ ಯಶಸ್ರಿಗೆ ಬದಲಿಯಾಗಿ ಆಯ್ಕೆಯಾದರು.
ಆದಾಗ್ಯೂ, ಮಹಿಳಾ ಹಿರಿಯರ ಟಿ20 ಟ್ರೋಫಿಯಲ್ಲಿ ವೃಂದಾ ದೊಡ್ಡ ಶಾಟ್‌ಗಳನ್ನು ಆಡುವ ಸಾಮರ್ಥ್ಯದಿಂದ ಎಲ್ಲರ ಗಮನ ಸೆಳೆದಿದ್ದಳು. ವೃಂದಾ ದಿನೇಶ್ ಪಂದ್ಯಾವಳಿಯಲ್ಲಿ ಕರ್ನಾಟಕದ ಪರವಾಗಿ ಎಂಟು ಪಂದ್ಯಗಳನ್ನು ಆಡಿದರು ಮತ್ತು 35.17ರ ಸರಾಸರಿಯಲ್ಲಿ ಮತ್ತು 154.01ರ ಸ್ಟ್ರೈಕ್-ರೇಟ್‌ನಲ್ಲಿ 211 ರನ್ ಗಳಿಸಿದರು.

ಕಳೆದ ಎರಡು ವರ್ಷಗಳಿಂದ ಕಠಿಣ ಪರಿಶ್ರಮವು ತನಗೆ ಲಾಭಾಂಶವನ್ನು ನೀಡಿದೆ ಎಂದು ಬಲಗೈ ಬ್ಯಾಟರ್ ವೃಂದಾ ದಿನೇಶ್ ಹೇಳಿದ್ದು, "ನಾನು ಈಗ ಆಡುತ್ತಿರುವ ಹಂತಕ್ಕೆ ಬರಲು, ಎರಡು ವರ್ಷಗಳ ಕಾಲ ದಿನವಿಡೀ ಅಭ್ಯಾಸ ನಡೆಸಬೇಕಾಗಿತ್ತು," ಎಂದರು.
"ನಾನು ನನ್ನ ಸ್ಟ್ರೋಕ್‌ಗಳಲ್ಲಿ ಕೆಲಸ ಮಾಡಲು ಮತ್ತು ಹೆಚ್ಚಿನ ಶಾಟ್‌ಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿದೆ. ಅದು ನನ್ನನ್ನು ಇಂದು ಇಲ್ಲಿಗೆ ಕರೆತಂದಿದೆ ಎಂದು ನಾನು ಭಾವಿಸುತ್ತೇನೆ," ಎಂದು ವೃಂದಾ ದಿನೇಶ್ ತಿಳಿಸಿದಳು.
ಅಂತರ್-ರಾಜ್ಯಗಳ ಟಿ20 ಟ್ರೋಫಿಯ ನಂತರ, ವೃಂದಾ ದಿನೇಶ್ ಆಟ ನಿಲ್ಲಲಿಲ್ಲ ಮತ್ತು ಮಹಿಳಾ ಸೀನಿಯರ್ ಏಕದಿನ ಟ್ರೋಫಿಯಲ್ಲಿ ಕರ್ನಾಟಕ ಪರ ಆಡಿದ ಆರು ಪಂದ್ಯಗಳಿಂದ ಎರಡು ಶತಕ ಮತ್ತು ಎರಡು ಅರ್ಧಶತಕಗಳೊಂದಿಗೆ 348 ರನ್ ಗಳಿಸಿದರು.
ಡಬ್ಲ್ಯುಪಿಎಲ್‌ನಲ್ಲಿ ಆಡುವ ಮಟ್ಟಿಗೆ, ಅಲಿಸ್ಸಾ ಹೀಲಿ, ಗ್ರೇಸ್ ಹ್ಯಾರಿಸ್, ಡ್ಯಾನಿ ವ್ಯಾಟ್ ಮತ್ತು ಸೋಫಿ ಎಕ್ಲೆಸ್ಟೋನ್ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ಮತ್ತು ಕ್ರಿಕೆಟಿಗಳಾಗಿ ಮತ್ತಷ್ಟು ಬೆಳೆಯಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications