Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಪ್ಯುಮ' ಕಂಪನಿ ಜತೆ ವಿರಾಟ್ ಕೊಹ್ಲಿ 100 ಕೋಟಿ ರು. ಡೀಲ್!

ನವದಹೆಲಿ, ಫೆಬ್ರವರಿ 20: ಜಗತ್ತಿನ ಕ್ರೀಡಾ ಸಾಮಗ್ರಿ ತಯಾರಿಕಾ ಬ್ರಾಂಡ್ ಕಂಪನಿಯಾದ , ಜರ್ಮನಿಯ 'ಪ್ಯುಮ' ಜತೆಗೆ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 100 ಕೋಟಿ ರು. ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ.

ಈ ಮೂಲಕ, ಕಂಪನಿಯೊಂದರ ಜತೆಗೆ ಶತಕೋಟಿ ಒಪ್ಪಂದಕ್ಕೆ ಸಹಿ ಹಾಕಿದ ಭಾರತದ ಮೊಟ್ಟ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.[ಯಶಸ್ವಿ ರನ್ ಚೇಸ್ : ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ!]

ಇದು ಎಂಟು ವರ್ಷಗಳ ಒಪ್ಪಂದವಾಗಿದ್ದು, ಆನಂತರವೂ ವಿರಾಟ್ ಕೊಹ್ಲಿಯವರ ಸಂಪೂರ್ಣ ವೃತ್ತಿಜೀವನದಲ್ಲೂ ಇದನ್ನು ಮುಂದುವರಿಸಿಕೊಂಡು ಹೋಗುವ ಇರಾದೆ ಪ್ಯುಮ ಕಂಪನಿಗಿದೆ.

Virat Kohli and Puma agree to Rs 100 crore deal

ಜಾಗತಿಕ ರಾಯಭಾರಿ: ಈ ಒಪ್ಪಂದದ ಪ್ರಕಾರ, ವಿರಾಟ್ ಕೊಹ್ಲಿಯವರು ಪ್ಯುಮ ಕಂಪನಿಯ ಜಾಗತಿಕ ರಾಯಭಾರಿಗಳಲ್ಲೊಬ್ಬರಾಗಿ ಸೇವೆ ಸಲ್ಲಿಸಲಿದ್ದಾರೆ. ಈ ಮೂಲಕ, ಇದೇ ಕಂಪನಿಯ ಜಾಗತಿಕ ರಾಯಭಾರಿಗಳೆನಿಸಿರುವ ವಿಶ್ವದ ಶರವೇಗದ ಓಟಗಾರ ಉಸೇನ್ ಬೋಲ್ಟ್, ಜಮೈಕಾದ ಮತ್ತೊಬ್ಬ ವೇಗದ ಓಟಗಾರ ಅಸಾಫಾ ಪೊವೆಲ್, ಫ್ರಾನ್ಸ್ ನ ವೃತ್ತಿಪರ ಫುಟ್ಬಾಲಿಗರಾದ ಥಿಯೆರಿ ಡೇನಿಯಲ್ ಹೆನ್ರಿ ಹಾಗೂ ಒಲಿವರ್ ಗಿರೋಡ್ ಅವರ ಸಾಲಿಗೆ ಕೊಹ್ಲಿ ಸೇರ್ಪಡೆಗೊಂಡಿದ್ದಾರೆ.[ನಿಶ್ಚಿತಾರ್ಥ ಸುದ್ದಿ ಅಲ್ಲಗೆಳೆದ ವಿರಾಟ್ ಕೊಹ್ಲಿ]

ಪ್ಯುಮ ಕಂಪನಿಯ ಉತ್ಪನ್ನಗಳ ಎಲ್ಲಾ ಬಗೆಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದರ ಜತೆಗೆ, ಸ್ವತಃ ಆ ಕಂಪನಿಯ ಉಡುಗೆ, ತೊಡುಗೆಗಳನ್ನು ತೊಡುವ ಮೂಲಕ ಹಾಗೂ ಆ ಕಂಪನಿಯ ಉತ್ಪನ್ನಗಳನ್ನು ಬಳಸುವ ಮೂಲಕ ಕೊಹ್ಲಿ ಆ ಕಂಪನಿಗೆ ಪ್ರಚಾರ ಕೊಡಬೇಕಿದೆ.

ಸಂಭಾವನೆ ಹೇಗೆ?: ಕರಾರಿನಂತೆ, ಕೊಹ್ಲಿಗೆ ಪ್ರತಿ ವರ್ಷಕ್ಕೆ ಇಂತಿಷ್ಟು ಸಂಭಾವನೆಯನ್ನು ಪ್ಯುಮ ಕಂಪನಿ ನೀಡುತ್ತದೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ, ಕಂಪನಿಯು ವಾರ್ಷಿಕವಾಗಿ 12ರಿಂದ 14 ಕೋಟಿಯಷ್ಟು ಹಣ ಸಿಗಲಿದೆ. ಇದನ್ನು ತಿಂಗಳಿನ ಲೆಕ್ಕದಲ್ಲಿ ಅಥವಾ ವಾರ್ಷಿಕ ಲೆಕ್ಕದಲ್ಲಿ ಕೊಹ್ಲಿ ಪಡೆಯಬಹುದು.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+