For Quick Alerts
ALLOW NOTIFICATIONS  
For Daily Alerts
 

IND vs AUS: ನಂಬರ್-1 ಆಗಲು ರೋಹಿತ್-ವಿರಾಟ್ ನಡುವೆ ಪೈಪೋಟಿ!

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನವೆಂಬರ್ 22 ರಿಂದ ಅಲ್ಲಿ ಪ್ರಾರಂಭವಾಗಲಿದೆ. ಉಭಯ ತಂಡಗಳ ನಡುವೆ 5 ಟೆಸ್ಟ್ ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಟೀಮ್ ಇಂಡಿಯಾಗೆ ಅಗ್ನಿ ಪರೀಕ್ಷೆಗಿಂತ ಕಡಿಮೆಯಿಲ್ಲ. ನ್ಯೂಜಿಲೆಂಡ್ ವಿರುದ್ಧ ಸತತ 3 ಟೆಸ್ಟ್ ಪಂದ್ಯಗಳನ್ನು ಸೋತ ನಂತರ ರೋಹಿತ್ ಶರ್ಮಾ ಮೇಲೆ ಸಾಕಷ್ಟು ಒತ್ತಡವಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (ಡಬ್ಲ್ಯೂಟಿಸಿ) ಫೈನಲ್‌ಗೆ ತಲುಪುವ ಹಾದಿ ಭಾರತಕ್ಕೆ ಕಷ್ಟಕರವಾಗಿದೆ. ಇದೀಗ ಪ್ರಶಸ್ತಿ ಸುತ್ತಿಗೆ ತಲುಪಲು ಭಾರತ ಅದ್ಭುತ ಪ್ರದರ್ಶನ ನೀಡಬೇಕಿದೆ.

Virat Kohli and Rohit Sharma battle it out to be WTC No 1 batsman

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳು ಆಸ್ಟ್ರೇಲಿಯಾದಲ್ಲಿ ಫಾರ್ಮ್‌ಗೆ ಮರಳುವ ನಿರೀಕ್ಷೆಯಿದೆ. ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತವರು ನೆಲದಲ್ಲಿ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. ಕಳೆದ 5 ಟೆಸ್ಟ್ ಪಂದ್ಯಗಳು ರೋಹಿತ್ ತಮ್ಮ ಖದರ್ ತೋರಿಸುವಲ್ಲಿ ವಿಫಲವಾಗಿದ್ದಾರೆ. 10 ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧಶತಕ ನೆರವಿನಿಂದ 133 ರನ್ ಕಲೆ ಹಾಕಿದ್ದಾರೆ. ಆದರೆ, ವಿರಾಟ್ ಕೊಹ್ಲಿ 5 ಪಂದ್ಯಗಳಲ್ಲಿ 192 ರನ್ ಗಳಿಸಿದ್ದಾರೆ.

ಇದೀಗ ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮ ಫಾರ್ಮ್‌ಗೆ ಮರಳುವ ಸಾಧ್ಯತೆಯಿದೆ. ಇದರೊಂದಿಗೆ ಹಲವು ದಾಖಲೆಗಳೂ ಅವರ ಗುರಿಯಲ್ಲಿರುತ್ತವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸ್ಥಾನ ಪಡೆದಿದ್ದಾರೆ. ಡಬ್ಲ್ಯೂಟಿಸಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ರೋಹಿತ್. ಅವರು 37 ಟೆಸ್ಟ್ ಪಂದ್ಯಗಳ 64 ಇನ್ನಿಂಗ್ಸ್‌ಗಳಲ್ಲಿ 2685 ರನ್ ಗಳಿಸಿದ್ದಾರೆ. ಹಿಟ್‌ಮ್ಯಾನ್ 9 ಶತಕ ಮತ್ತು 8 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ವಿರಾಟ್ ಕೊಹ್ಲಿ ಅವರು 41 ಟೆಸ್ಟ್ ಪಂದ್ಯಗಳಲ್ಲಿ 2427 ರನ್ ಗಳಿಸಿದ್ದಾರೆ. ಇದರಲ್ಲಿ ಕೊಹ್ಲಿ 4 ಶತಕ ಹಾಗೂ 11 ಅರ್ಧ ಶತಕ ಸಿಡಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅವರು 12ನೇ ಸ್ಥಾನದಲ್ಲಿದ್ದಾರೆ. ಅವರು ರೋಹಿತ್‌ಗಿಂತ 258 ರನ್‌ ಹಿಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇವರಿಬ್ಬರ ನಡುವೆ ಪೈಪೋಟಿ ನಡೆಯಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕಾಗಿ ಅಗ್ರ ಸ್ಕೋರರ್ ಆಗಿ ಉಳಿದಿರುವ ಇಬ್ಬರಲ್ಲಿ ಯಾರು ನಂಬರ್ 1 ಎಂಬುದು ಗೊತ್ತಾಗಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಅವರನ್ನು ಹಿಂದಿಕ್ಕುವ ಅವಕಾಶವನ್ನು ವಿರಾಟ್ ಮತ್ತು ರೋಹಿತ್ ಹೊಂದಿದ್ದಾರೆ. ಬಾಬರ್ 32 ಪಂದ್ಯಗಳಲ್ಲಿ 2760 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ. ರೋಹಿತ್ ಅವರಿಗಿಂತ 75 ರನ್ ಹಿಂದಿದ್ದು, ವಿರಾಟ್ ಅವರಿಗಿಂತ 333 ರನ್ ಹಿಂದಿದ್ದಾರೆ. ಈಗ ಇಬ್ಬರೂ ಆಟಗಾರರು ಬಾಬರ್ ಅಜಮ್ ಅವರನ್ನು ಹಿಂದಿಕ್ಕುತ್ತಾರಾ ಎಂದು ಕಾದು ನೋಡಬೇಕಾಗಿದೆ.

Story first published: Sunday, November 10, 2024, 23:54 [IST]
Other articles published on Nov 10, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+