IND vs AUS Semifinal: ಸಚಿನ್ ತೆಂಡೂಲ್ಕರ್ ದಾಖಲೆ ಮೇಲೆ ವಿರಾಟ್, ರೋಹಿತ್ ಕಣ್ಣು
ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಭಾನುವಾರ "ಎ" ಗುಂಪಿನ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ತಂಡವನ್ನು ಮಣಿಸಿದೆ. ಈ ಮೂಲಕ ಲೀಗ್ ಹಂತದಲ್ಲಿ ಅಗ್ರ ಸ್ಥಾನೀಯವಾಗಿ ಸೆಮಿಫೈನಲ್ ಪ್ರವೇಶ ಪಡೆದಿದೆ. ಇನ್ನು ಭಾರತ ಈಗ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಕಾದಾಟ ನಡೆಸಲಿದೆ. ಈ ವೇಳೆ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಮೇಲೆ ನೆಟ್ಟಿರಲಿವೆ. ಈ ಇಬ್ಬರೂ ಆಟಗಾರರಿಗೆ ಆಸೀಸ್ ತಂಡದ ವಿರುದ್ಧ ಆಡುವುದು ಇಷ್ಟ.
ಮಂಗಳವಾರ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ಫೈಟ್ ನಡೆಸಲಿವೆ. ಉಭಯ ತಂಡಗಳು ಬಲಿಷ್ಠವಾಗಿದ್ದು, ಈ ಪಂದ್ಯವನ್ನು ಕಣ್ಣು ತುಂಬಿಕೊಳ್ಳಲು ಇಡೀ ವಿಶ್ವ ಕ್ರಿಕೆಟ್ ಕಾತುರದಿಂದ ಕಾಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಭರವಸೆಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಿಗೆ ದೊಡ್ಡ ದಾಖಲೆಯನ್ನು ಬರೆಯುವ ಅವಕಾಶ ಇದೆ.

ಆಸ್ಟ್ರೇಲಿಯಾ ಎಂದರೆ ವಿರಾಟ್ ಹಾಗೂ ರೋಹಿತ್ ಇಬ್ಬರಿಗೂ ಅಚ್ಚು ಮೆಚ್ಚು. ರೋಕೊ ಜೋಡಿ ಆಸೀಸ್ ವಿರುದ್ಧ ಆರ್ಭಟ ನಡೆಸಿದೆ. ಈಗಾಗಲೇ ವಿರಾಟ್ ಹಾಗೂ ರೋಹಿತ್ ಆಸೀಸ್ ವಿರುದ್ಧ 8 ಶತಕಗಳನ್ನು ಬಾರಿಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಮತ್ತೊಂದು ಶತಕವನ್ನು ಬಾರಿಸಿದ್ದೇ ಆದಲ್ಲಿ ದೊಡ್ಡ ದಾಖಲೆಯನ್ನು ಬರೆಯಬಹುದು. ಇಬ್ಬರಿಗೂ ಈ ಸಾಧನೆ ಮಾಡಲು ಸುವರ್ಣ ಅವಕಾಶ ಇದೆ.
ಸಚಿನ್ ದಾಖಲೆಯ ಮೇಲೆ ಕಣ್ಣು
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ರನ್ ಹಾಗೂ ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಅಗ್ರ ಸ್ಥಾನ. ಇವರು ಆಸೀಸ್ ವಿರುದ್ಧ ಆಡಿದ 71 ಪಂದ್ಯಗಳಲ್ಲಿ 3077 ರನ್ ಸಿಡಿಸಿದ್ದಾರೆ. ಈ ವೇಳೆ 9 ಶತಕಗಳು ಹಾಗೂ 15 ಅರ್ಧಶತಕಗಳು ಸೇರಿವೆ. ಸಚಿನ್ ಅವರ ಶತಕಗಳ ದಾಖಲೆಯ ಮೇಲೆ ರೋಹಿತ್, ವಿರಾಟ್ ಕಣ್ಣು ನೆಟ್ಟಿದ್ದಾರೆ. ಯಾರು ಈ ದಾಖಲೆಯನ್ನು ಸಮನಾಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ರೋಹಿತ್ ಶರ್ಮಾ 45 ಪಂದ್ಯಗಳಲ್ಲಿ 8 ಶತಕ ಸಿಡಿಸಿದರೆ, ವಿರಾಟ್ ಕೊಹ್ಲಿ 49 ಪಂದ್ಯಗಳಲ್ಲಿ 8 ಶತಕ ಸಿಡಿಸಿದ್ದಾರೆ.
ಆಸೀಸ್ ಪರ ಅತಿ ಹೆಚ್ಚು ಶತಕ ಸಿಡಿಸಿದ ಐದು ಭಾರತೀಯ ಆಟಗಾರರು
ಸಚಿನ್ ತೆಂಡೂಲ್ಕರ್, 71 ಪಂದ್ಯ, 3077 ರನ್, 9 ಶತಕ
ರೋಹಿತ್ ಶರ್ಮಾ, 45 ಪಂದ್ಯ, 2379 ರನ್, 8 ಶತಕ
ವಿರಾಟ್ ಕೊಹ್ಲಿ, 42 ಪಂದ್ಯ, 2367 ರನ್, 8 ಶತಕ
ವಿವಿಎಸ್ ಲಕ್ಷ್ಮಣ, 21 ಪಂದ್ಯ, 739 ರನ್, 4 ಶತಕ
ಶಿಖರ್ ಧವನ್, 30 ಪಂದ್ಯ, 1265 ರನ್, 4 ಶತಕ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications