ICC T20 rankings: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜಿಗಿತ

ದುಬೈ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನ ನೂತನ ಟಿ20ಐ ರ್‍ಯಾಂಕ್ ಪ್ರಕಟಗೊಂಡಿದೆ. ಬುಧವಾರ (ಮಾರ್ಚ್ 24) ಪ್ರಕಟವಾಗಿರುವ ಐಸಿಸಿ ಟಿ20ಐ ರ್‍ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ಜಿಗಿತ ಕಂಡಿದ್ದಾರೆ.
ಭಾರತದ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರ ಟಿ20 ಶ್ರೇಯಾಂಕದಲ್ಲಿ ಕುಸಿತ ಕಾಣಿಸಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿನ ಪ್ರದರ್ಶನದಿಂದಾಗಿ ಟಿ20ಐ ರ್‍ಯಾಂಕಿಂಗ್‌ನಲ್ಲಿ ಏರಿಳಿತವಾಗಿದೆ.
ಪ್ರಸ್ತುತ ಟಿ20ಐ ರ್‍ಯಾಂಕಿಂಗ್‌ನಲ್ಲಿ ಇಂಗ್ಲೆಂಡ್‌ನ ಡಾವಿಡ್ ಮಲಾನ್ ಅಗ್ರ ಸ್ಥಾನದಲ್ಲಿದ್ದಾರೆ. ಮಲಾನ್ ಖಾತೆಯಲ್ಲಿ 892 ಅಂಕಗಳಿವೆ. ದ್ವಿತೀಯ ಸ್ಥಾನದಲ್ಲಿ ಆ್ಯರನ್ ಫಿಂಚ್ (830), ತೃತೀಯ ಸ್ಥಾನದಲ್ಲಿ ಪಾಕಿಸ್ತಾನದ ಬಾಬರ್ ಅಝಾಮ್ (801) ಇದ್ದಾರೆ.
4ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿಯಿದ್ದು, 762 ಪಾಯಿಂಟ್ಸ್ ಕಲೆ ಹಾಕಿದ್ದಾರೆ. 5ನೇ ಸ್ಥಾನದಲ್ಲಿರುವ ಕೆಎಲ್ ರಾಹುಲ್ 743 ಅಂಕ ಹೊಂದಿದ್ದಾರೆ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 14ನೇ ಸ್ಥಾನದಲ್ಲಿದ್ದು, 613 ಪಾಯಿಂಟ್ಸ್ ಗಳಿಸಿದ್ದಾರೆ. ದೇಶಗಳಲ್ಲಿ ಇಂಗ್ಲೆಂಡ್, ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ್ ಆರಂಭಿಕ 4 ಸ್ಥಾನಗಳಲ್ಲಿವೆ.
ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ದಕ್ಷಿಣ ಆಫ್ರಿಕಾದ ತಬ್ರೈಜ್ ಸಂಶಿ, ಅಫ್ಘಾನಿಸ್ತಾನದ ರಶೀದ್ ಖಾನ್, ಆಸ್ಟ್ರೇಲಿಯಾದ ಆ್ಯಸ್ಟನ್ ಅಗರ್, ಇಂಗ್ಲೆಂಡ್‌ನ ಆದಿಲ್ ರಶೀದ್, ಅಫ್ಘಾನಿಸ್ತಾನದ ಮುಜೀಬ್ ಉರ್ ರಹ್ಮಾನ್ ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications