ಒಂದು ವಾರದ ನಡುವೆ ಟೀಮ್ ಇಂಡಿಯಾದ ಇಬ್ಬರು ಸೂಪರ್ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಇಬ್ಬರೂ ಆಟಗಾರರು ಈಗಾಗಲೇ ಟಿ20 ಕ್ರಿಕೆಟ್‌ಗೂ ವಿದಾಯ ಹೇಳಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನವೇ ಸ್ಟಾರ್ ಆಟಗಾರರು ವಿದಾಯ ಹೇಳಿರುವುದು ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಇದೇ ವೇಳೆ ಅಭಿಮಾನಿಗಳ ಮನದಲ್ಲಿ ದೊಡ್ಡ ಪ್ರಶ್ನೆಯೊಂದು ಮೂಡಿಸಿದೆ.
ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಒಂದೇ ದಿನ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇಬ್ಬರೂ ಸ್ಟಾರ್ ಆಟಗಾರರು ಒಂದೇ ವಾರದ ಅಂತರದಲ್ಲಿ ಟೆಸ್ಟ್ ಕ್ರಿಕೆಟ್‌ಗೂ ವಿದಾಯ ಹೇಳಿದ್ದಾರೆ. ಈಗ ಈ ಇಬ್ಬರೂ ಸ್ಟಾರ್ ಆಟಗಾರರು ಏಕದಿನ ಕ್ರಿಕೆಟ್ ಮಾತ್ರ ಆಡುತ್ತಾರೆ. ಬಿಸಿಸಿಐ ಕೇಂದ್ರ ಗುತ್ತಿಗೆ ಒಪ್ಪಂದದಲ್ಲಿ ಇವರಿಬ್ಬರ ಸ್ಥಾನದಲ್ಲೂ ಏನಾದ್ರೂ ಬದಲಾವಣೆಗಳು ಆಗುತ್ತವೇಯಾ ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಈ ಪ್ರಶ್ನೆಗಳಿಗೆ ಬಿಸಿಸಿಐ ಸ್ಪಷ್ಟತೆ ನೀಡಿದೆ.

ಬಿಸಿಸಿಐ ಸಾಮಾನ್ಯವಾಗಿ ಕೇಂದ್ರ ಗುತ್ತಿಗೆ ಆಧಾರದಲ್ಲಿ ಒಟ್ಟು 4 ಗ್ರೇಡ್‌ಗಳನ್ನು ಮಾಡಿದೆ. ಈ ವೇಳೆ ಈ ಶ್ರೇಣಿಗಳಿಗೆ ಅನುಗಣವಾಗಿ ಆಟಗಾರರಿಗೆ ವೇತನವನ್ನು ಸಹ ನೀಡುತ್ತದೆ. ಬಿಸಿಸಿಐ ಆಟಗಾರರ ಆಟದ ಗುಣಮಟ್ಟವನ್ನು ಆಧರಿಸಿ ಅವರ ಗ್ರೇಡ್ ನಿರ್ಧರಿಸುತ್ತದೆ. ಅಂದಹಾಗೆ ಗ್ರೇಡ್ ಎ ಪ್ಲಸ್, ಗ್ರೇಡ್ ಎ, ಗ್ರೇಡ್ ಬಿ ಮತ್ತು ಸಿ ಸೇರಿವೆ. ಗ್ರೇಡ್ ಎ ಪ್ಲಸ್‌ನಲ್ಲಿ ಕೇವಲ ನಾಲ್ವರು ಆಟಗಾರರು ಮಾತ್ರ ಇದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಸೇರಿದ್ದಾರೆ.
ಗ್ರೇಡ್ ಎ ಪ್ಲಸ್‌ನಲ್ಲಿರುವ ಆಟಗಾರರಲ್ಲಿ ಜಸ್ಪ್ರಿತ್ ಬುಮ್ರಾ ಮಾತ್ರ ಮೂರು ಫಾರ್ಮೆಟ್‌ಗಳನ್ನು ಆಡುತ್ತಿದ್ದಾರೆ. ಉಳಿದಂತೆ ರೋಹಿತ್, ವಿರಾಟ್, ಜಡೇಜಾ ಟಿ20 ಫಾರ್ಮೆಟ್‌ಗೆ ಗುಡ್ ಬಾಯ್ ಹೇಳಿದ್ದಾರೆ. ಇನ್ನು ವಿರಾಟ್, ರೋಹಿತ್ ಇತ್ತಿಚಿಗೆ ಟೆಸ್ಟ್‌ಗೂ ರಿಟೈರ್ಡ್ ಹೇಳಿದ್ದಾರೆ. ಈ ವೇಳೆ ಮೂರು ಫಾರ್ಮೆಟ್‌ಗಳನ್ನು ಆಡುವ ಆಟಗಾರರಿಗೆ ಮಾತ್ರ ಬಿಸಿಸಿಐ 'ಎ' ಪ್ಲಸ್ ಗ್ರೇಡ್ ನೀಡುತ್ತದೆ ಎಂದು ನಂಬಲಾಗಿದೆ.

ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟತೆ ನೀಡಿದ್ದಾರೆ. ವಿರಾಟ್, ರೋಹಿತ್ ಟಿ20, ಟೆಸ್ಟ್‌ಗೆ ವಿದಾಯ ಹೇಳಿದ್ರೂ ಅವರಿಗೆ ಎ ಪ್ಲಸ್ ಸವಲತ್ತುಗಳು ಸಿಗಲಿವೆ. ಅಲ್ಲದೆ ಇವರು ಗ್ರೇಡ್ ಎ ಪ್ಲಸ್ ಕ್ಯಾಟಗಿರಿಯಲ್ಲಿ ಮುನ್ನಡೆಯಲಿದ್ದಾರೆ. ಇವರಿಬ್ಬರೂ ಇನ್ನು ಭಾರತ ತಂಡದ ಭಾಗವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಗ್ರೇಡ್ ಎ ಪ್ಲಸ್, 7 ಕೋಟಿ+ಪಂದ್ಯ ಶುಲ್ಕ
ಗ್ರೇಡ್ ಎ ಪ್ಲಸ್, 5 ಕೋಟಿ+ಪಂದ್ಯ ಶುಲ್ಕ
ಗ್ರೇಡ್ ಬಿ ಪ್ಲಸ್, 3 ಕೋಟಿ+ಪಂದ್ಯ ಶುಲ್ಕ
ಗ್ರೇಡ್ ಸಿ ಪ್ಲಸ್, 1 ಕೋಟಿ+ಪಂದ್ಯ ಶುಲ್ಕ