Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭ್ಯಾಸದ ವೇಳೆ ಜೊತೆಯಾಗಿ ಕಾಣಿಸಿಕೊಂಡ ಕೊಹ್ಲಿ-ಶರ್ಮಾ, ನೆಟ್ಟಿಗರಿಂದ ನಾನಾ ಪ್ರತಿಕ್ರಿಯೆ

Virat Kohli and Rohit Sharma reunite in a fielding session

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡದ ಆಟಗಾರರು ಭರ್ಜರಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನೆಟ್ ಅಭ್ಯಾಸ, ಫೀಲ್ಡಿಂಗ್ ಅಭ್ಯಾಸ ಸೇರಿದಂತೆ ದೈಹಿಕ ತರಬೇತಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಅಬ್ಯಾಸದ ಒಂದು ಚಿತ್ರ ಈಗ ಅಂತರ್ಜಾಲದಲ್ಲಿ ಕ್ರಿಕೆಟ್ ಅಭಿಮಾನಿಗಳ ಗಮನಸೆಳೆದಿದೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಸೀಮಿತ ಓವರ್‌ಗಳ ಉಪನಾಯಕ ರೋಹಿತ್ ಶರ್ಮಾ ಜೊತೆಯಾಗಿ ಫಿಲ್ಡಿಂಗ್ ಅಭ್ಯಾಸವನ್ನು ನಡೆಸುತ್ತಿರುವ ಫೋಟೋ ಇದಾಗಿದ್ದು ಅಭಿಮಾನಿಗಳು ಕುತೂಹಲದಿಂದ ಈ ಪೋಟೋಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಉತ್ತಮ ಬಾಂಧವ್ಯವಿಲ್ಲ ಎಂಬಂತಾ ವರದಿಗಳು ಸಾಕಷ್ಟು ಸದ್ದು ಮಾಡಿತ್ತು. 2019ರ ವಿಶ್ವಕಪ್‌ನಲ್ಲಿನ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕತ್ವ ವಿಭಜನೆಯಾಗಬೇಕು ಎಂಬ ಕೂಗು ಕೇಳಿ ಬಂದ ನಂತರ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬಂತಾ ಮಾತುಗಳು ಕೇಳಿ ಬಂದಿತ್ತು. ಇನ್ನು ಕಳೆದ ಆಸ್ಟ್ರೇಲಿಯಾ ಸರಣಿಗೂ ಮುನ್ನ ಐಪಿಎಲ್ ಅಂತ್ಯದ ಬಳಿಕ ನಡೆದ ಕೆಲ ಸೂಕ್ಷ್ಮ ಸಂಗತಿಗಳು ಸುದ್ದಿಗಳಿಗೆ ಪೂರಕವಾಗಿಯೇ ಇತ್ತು.

ಇನ್ನು ಆಸ್ಟ್ರೇಲಿಯಾ ವಿರುದ್ಧಧ ಸರಣಿಯಲ್ಲೂ ಈ ಇಬ್ಬರು ಆಟಗಾರರು ಜೊತೆಯಾಗಿ ಆಡಿರಲಿಲ್ಲ. ಸೀಮಿತ ಓವರ್‌ಗಳ ಸರಣಿಗೆ ಫಿಟ್‌ನೆಸ್ ಕಾರಣದಿಂದಾಗಿ ರೋಹಿತ್ ಶರ್ಮಾ ಹೊರಗುಳಿದಿದ್ದರೆ ಟೆಸ್ಟ್ ಸರಣಿಯ ಅಂತಿಮ ಎರಡು ಪಂದ್ಯಗಳಲ್ಲಿ ಮಾತ್ರವೇ ಅವರು ಭಾಗಿಯಾಗಿದ್ದರು. ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮಾತ್ರವೇ ಕಣಕ್ಕಿಳಿದು ಬಳಿಕ ಪಿತೃತ್ವದ ರಜೆಯಲ್ಲಿ ತವರಿಗೆ ಮರಳಿದ್ದರು. ಹೀಗಾಗಿ ಈ ಇಬ್ಬರು ಆಟಗಾರರು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಬಹಳ ಸಮಯದ ಬಳಿಕ ಜೊತೆಯಾಗಿ ಆಡುತ್ತಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಅಭ್ಯಾಸದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜೊತೆಯಾಗಿ ಫೀಲ್ಡಿಂಗ್ ಅಭ್ಯಾಸ ಮಾಡುತ್ತಿರುವ ಬಗ್ಗೆ ಕ್ರಿಕೆಟ್ ಪ್ರೇಮಿಗಳು ಸಂತಸದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಇನ್ನೂ ಕೆಲ ಆಟಗಾರರು ಇಬ್ಬರು ದಿಗ್ಗಜ ಆಟಗಾರರ ಕಾಲೆಳೆಯುವ ಪ್ರಯತ್ನವನ್ನೂ ನಡೆಸಿದ್ದಾರೆ.

Story first published: Wednesday, February 3, 2021, 12:43 [IST]
Other articles published on Feb 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+