ದಿಗ್ಗಜ ಆಟಗಾರರ ಶತಕಗಳ ವೈಭವ: ಕೊಹ್ಲಿ, ಸಚಿನ್ 79 ಶತಕಗಳಲ್ಲಿ ಭಾರತ ಗೆದ್ದಿದ್ದೆಷ್ಟು ಸೋತಿದ್ದೆಷ್ಟು!
ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಬರ್ತ್ ಡೇ ಬಾಯ್ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇದು ವಿರಾಟ್ ವೃತ್ತಿ ಬದುಕಿನ 49ನೇ ಏಕದಿನ ಶತಕ. ಏಕದಿನ ಮಾದರಿಯಲ್ಲಿ ವಿರಾಟ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿರಾಟ್ ಶತಕ ಬಾರಿಸಿದಾಗ ಟೀಮ್ ಇಂಡಿಯಾ ಶೇಕಡಾ 83 ರಷ್ಟು ಪಂದ್ಯಗಳನ್ನು ಗೆದ್ದಿದ್ದು, ಸಚಿನ್ ಶತಕ ಬಾರಿಸಿದಾಗ ಭಾರತ ಶೇಕಡಾ 67 ರಷ್ಟು ಪಂದ್ಯದಲ್ಲಿ ಜಯ ಸಾಧಿಸಿದೆ. ಸಚಿನ್ ಹಾಗೂ ವಿರಾಟ್ 49 ಶತಕ ಬಾರಿಸಿದ ಚಿತ್ರಣ ಇಲ್ಲಿದೆ.
ಸಚಿನ್ ತಮ್ಮ ಮೊದಲ ಏಕದಿನ ಶತಕ ಗಳಿಸಲು 79 ಪಂದ್ಯಗಳನ್ನು ಕಾಯಬೇಕಾಯಿತು. 1989 ರಂದು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿರುವ ಸಚಿನ್, ಆರಂಭದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್. 1994ರಲ್ಲಿ ಇವರು ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದರು. ಇದೇ ವರ್ಷ ಏಕದಿನ ಮಾದರಿಯಲ್ಲಿ ಸಚಿನ್ ಮೊದಲಬಾರಿಗೆ ಮೂರಂಕಿ ಮುಟ್ಟಿ ಸಂಭ್ರಮಿಸಿದರು.

ವಿರಾಟ್ ತಮ್ಮ ODI ವೃತ್ತಿಜೀವನವನ್ನು ಓಪನರ್ ಆಗಿ ಆರಂಭಿಸಿದರು. ನಂತರ ನಾಲ್ಕು ಮತ್ತು ಏಳನೇ ಕ್ರಮಾಂಕದಲ್ಲಿ ಕೆಲವು ಇನ್ನಿಂಗ್ಸ್ಗಳನ್ನು ಆಡಿದರು. ಇವರಲ್ಲಿನ ಬ್ಯಾಟಿಂಗ್ ಕ್ಷಮತೆ ಕಂಡ ಟೀಮ್ ಮ್ಯಾನೇಜ್ಮೆಂಟ್ ಇವರಿಗೆ ಮೂರನೇ ಸ್ಥಾನವನ್ನು ಭದ್ರ ಪಡಿಸಿತು. ವಿರಾಟ್ ಮೊದಲ ಏಕದಿನ ಶತಕ ಬಾರಿಸಲು 14 ಪಂದ್ಯ ತೆಗೆದುಕೊಂಡರು.
ವಿರಾಟ್ ಕೊಹ್ಲಿ ಹಾಗೂ ಸಚಿನ್ ತೆಂಡೂಲ್ಕರ್ ಅವರಿಗೆ ತವರಿನ ಪಿಚ್ ಗಳು ಎಂದರೆ ಅಚ್ಚು ಮೆಚ್ಚು. ಹೀಗಾಗಿ ಈ ಇಬ್ಬರ ಬಹುಪಾಲು ಶತಕಗಳು ಭಾರತದಲ್ಲೇ ಬಂದಿವೆ. ಸಚಿನ್ ತವರಿನಲ್ಲಿ 20 ಶತಕ ಬಾರಿಸಿದರೆ, ವಿರಾಟ್ 23 ಬಾರಿ ಮೂರಂಕಿ ಮುಟ್ಟಿ ಸಂಭ್ರಮಿಸಿದ್ದಾರೆ.
ಸಚಿನ್ ಮತ್ತು ವಿರಾಟ್ ಇಬ್ಬರೂ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಆಡುವುದನ್ನು ತುಂಬಾ ಇಷ್ಟಪಟ್ಟಿದ್ದಾರೆ. ಸಚಿನ್ ಆಸ್ಟ್ರೇಲಿಯಾ ವಿರುದ್ಧ 9 ಏಕದಿನ ಶತಕಗಳನ್ನು ಬಾರಿಸಿದ್ದಾರೆ. ವಿರಾಟ್ ಆಸೀಸ್ ವಿರುದ್ಧ 8 ಶತಕ ಬಾರಿಸಿದ್ದರು. ಇಬ್ಬರೂ ನ್ಯೂಜಿಲೆಂಡ್ ವಿರುದ್ಧ ತಲಾ 5 ಶತಕಗಳನ್ನು ಗಳಿಸಿದ್ದಾರೆ.
ಶ್ರೀಲಂಕಾ ವಿರುದ್ಧ ಸಚಿನ್ 8 ಶತಕ ಹಾಗೂ ವಿರಾಟ್ 10 ಶತಕ ಸಿಡಿಸಿದ್ದಾರೆ. ವಿರಾಟ್ ವೆಸ್ಟ್ ಇಂಡೀಸ್ ವಿರುದ್ಧವೂ 9 ಶತಕಗಳನ್ನು ಗಳಿಸಿದ್ದಾರೆ. ಕೆರಿಬಿಯನ್ ಹುಡುಗರ ವಿರುದ್ಧ ಸಚಿನ್ ಗಳಿಸಿದ್ದು ಕೇವಲ 4 ಶತಕಗಳು. ಇನ್ನು ಸಚಿನ್ ವಿರೋಧಿಗಳ ನೆಲದಲ್ಲಿ 12 ಶತಕಗಳನ್ನು ಬಾರಿಸಿದ್ದರೆ, 17 ಶತಕಗಳನ್ನು ತಟಸ್ಥ ಸ್ಥಳದಲ್ಲಿ ಸಿಡಿಸಿದ್ದಾರೆ. ವಿರಾಟ್ ಸಹ 21 ಬಾರಿ ಎದುರಾಳಿಗಳ ತವರಿನಲ್ಲಿ ಮೂರಂಕಿ ಮುಟ್ಟಿದ್ದು, ನ್ಯೂಟ್ರಲ್ ವೆನ್ಯೂನಲ್ಲಿ ವಿರಾಟ್ 5 ಶಕತ ಸಿಡಿಸಿದ್ದಾರೆ.
ಸಚಿನ್ ಅವರ 49 ಶತಕಗಳ ದಾಖಲೆಯನ್ನು ಸಮಗಟ್ಟಲು ವಿರಾಟ್ ಕೇವಲ 277 ಇನಿಂಗ್ಸ್ ತೆಗೆದುಕೊಂಡಿದ್ದಾರೆ. ಅಂದರೆ ಸಚಿನ್ ಅವರಿಗಿಂತ 174 ಇನಿಂಗ್ಸ್ ಮುಂಚಿತವಾಗಿಯೇ ಈ ದಾಖಲೆ ಬರೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications