Virat Kohli vs Sam Konstas: ಕೊಹ್ಲಿ ಮೇಲೆ ಐಸಿಸಿ ಕ್ರಮ ಕೈಗೊಳ್ಳುತ್ತಾ? ಏನು ಹೇಳುತ್ತೇ ನಿಯಮ?
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿತು. ಆಸ್ಟ್ರೇಲಿಯಾದ ಟಾಪ್ ಆರ್ಡರ್ ಬ್ಯಾಟರ್‌ಗಳು ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಯುವ ಆಟಗಾರ ಸ್ಯಾಮ್ ಕಾನ್‌ಸ್ಟಾಸ್ ನಡುವೆ ಮಾತಿನ ಚಕಮಕಿ ನಡೆಯಿತು.
ಪಂದ್ಯದ 11ನೇ ಓವರ್‌ನಲ್ಲಿ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಆಸೀಸ್ ಯುವ ಬ್ಯಾಟರ್ ನಡುವೆ ಪದಗಳು ವಿಲೇವಾರಿ ನಡೆದಿದೆ. ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಅಂಪೈರ್‌ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಯಾಗಿಸಿದರು. ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಸ್ಯಾಮ್ ಕಾನ್‌ಸ್ಟನ್ಸ್‌ರನ್ನು ಹೊಡೆದಿದ್ದಕ್ಕಾಗಿ ಐಸಿಸಿ ವಿರಾಟ್‌ಗೆ ಶೀಕ್ಷೆ ನೀಡಬಹುದಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗಿದ್ದರೆ ಐಸಿಸಿಯ ಯಾವ ನಿಯಮದ ಅಡಿಯಲ್ಲಿ ಕೊಹ್ಲಿಗೆ ಶಿಕ್ಷೆ ವಿಧಿಸಬಹುದು ಎಂಬ ಬಗ್ಗೆ ವರದಿ ಇಲ್ಲಿದೆ.

ಪದಾರ್ಪಣೆ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಸ್ಯಾಮ್ ಕಾನ್‌ಸ್ಟಾನ್ಸ್ ಮಿಂಚಿದರು. ಟೀಮ್ ಇಂಡಿಯಾದ ಸ್ಟಾರ್ ಬೌಲರ್‌ಗಳ ವಿರುದ್ಧ ಗುಡುಗಿದರು. 11ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಚೆಂಡನ್ನು ಕ್ಲಿಯರ್ ಮಾಡುವಾಗ ಸ್ಯಾಮ್ ಕಾನ್‌ಸ್ಟಾನ್ಸ್‌ಗೆ ಡಿಕ್ಕಿ ಹೊಡೆದರು. ಈನ ದೃಶ್ಯವನ್ನು ನೋಡಿದಾಗ ವಿರಾಟ್ ಸ್ವತಃ ಚೆಂಡನ್ನು ಎತ್ತಿಕೊಂಡ ನಂತರ ಕಾನ್‌ಸ್ಟಾನ್ಸ್ ಕಡೆಗೆ ಚಲಿಸುತ್ತಿದ್ದಾಗ ಇಬ್ಬರೂ ಡಿಕ್ಕಿ ಹೊಡೆದಿದ್ದಾರೆ.
ಏನು ಹೇಳುತ್ತೆ ಐಸಿಸಿ ನಿಯಮ?
ಆಟಗಾರ, ಆಟಗಾರನ ಬೆಂಬಲಿಗ ಸಿಬ್ಬಂದಿ, ಅಂಪೈರ್, ಮ್ಯಾಚ್ ರೆಫರಿ ಮೈದಾನದಲ್ಲಿ ಯಾವುದೇ ಅನುಚಿತ ದೈಹಿಕ ಸಂಪರ್ಕವನ್ನು ಮಾಡಿದ್ದೇ ಆದಲ್ಲಿ ಆರ್ಟಿಕಲ್ 2.1 ನಿಯಮದಡಿ ಶಿಕ್ಷೆ ವಿಧಿಸಬಹುದು. ಕ್ರಿಕೆಟ್ ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ಹಾಕಿದಾಗ ಇಂತಹ ಘಟನೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಕೊಹ್ಲಿಗೆ ಒಂದು ಪಂದ್ಯದ ನಿಷೇಧ ಅಥವಾ ಅಮಾನತಿನಂತಹ ಯಾವುದೇ ಶಿಕ್ಷೆಯಾಗುವುದಿಲ್ಲ. ಆದಾಗ್ಯೂ, ಮ್ಯಾಚ್ ರೆಫರಿ ಖಂಡಿತವಾಗಿಯೂ ಅವರ ಪಂದ್ಯ ಶುಲ್ಕವನ್ನು ಕಡಿತಗೊಳಿಸಬಹುದು. ಅಥವಾ ಡಿಮೇರಿಟ್ ಅಂಕಗಳನ್ನು ನೀಡಬಹುದು.
ಯುವ ಬ್ಯಾಟರ್ ಅಬ್ಬರ
ಆಸ್ಟ್ರೇಲಿಯಾದ ಯುವ ಬ್ಯಾಟರ್ ಪದಾರ್ಪಣಾ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ಅಬ್ಬರಿಸಿದ್ದಾರೆ. ಸ್ಯಾಮ್ ಕಾನ್‌ಸ್ಟನ್ಸ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ಸ್ಫೊಟಕ ಇನಿಂಗ್ಸ್ ಕಟ್ಟಿದ್ದಾರೆ. ಇವರು 65 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 60 ರನ್ ಬಾರಿಸಿ ಜಡೇಜಾ ತೋಡಿದ ಖೆಡ್ಡಾಗೆ ಬಲಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications