Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೇಯಸ್, ವಿರಾಟ್‌ಗೆ ಬಂದಿತ್ತು ನಾಯಕನ ಸಂದೇಶ: ಡ್ರಿಂಕ್ಸ್ ಬ್ರೇಕ್‌ನಲ್ಲಿ ಇಶಾನ್ ಹೇಳಿದ್ದೇನು..?

ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ವಿಶ್ವಕಪ್ ನ ಲೀಗ್ ಹಂತದ ಪಂದ್ಯ ಭಾನುವಾರ ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ನಡೆದಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ 49 ಶತಕಗಳನ್ನು ಬಾರಿಸಿ ಅಬ್ಬರಿಸಿದರು. ಇದೇ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಅರ್ಧಶತಕ ಬಾರಿಸಿ ಮಿಂಚಿದರು. ಆಲ್ ರೌಂಡರ್ ರವೀಂದ್ರ ಜಡೇಜಾ ಐದು ವಿಕೆಟ್ ಕಬಳಿಸಿದರು. ಇದು ಪಂದ್ಯದ ಹೈಲೈಟ್ಸ್ ಆದರೆ, ಈ ಎಲ್ಲದಕ್ಕೂ ಮೀರಿದ ದೃಶ್ಯ ಎಲ್ಲರ ಚಿತ್ತ ಕದ್ದಿದೆ.

ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡುವಾಗ 22ನೇ ಓವರ್ ನಲ್ಲಿ ಇಶಾನ್ ಕಿಶನ್ ಕೆಂಪು ವಸ್ತ್ರವನ್ನು ಮೈಮೇಲೆ ಹಾಕಿಕೊಂಡು, ಕೈಯಲ್ಲಿ ನೀರಿನ ಬಾಟಲಿ ಹಿಡಿದುಕೊಂಡು ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರ ಜೊತೆಗೆ ಮಾತನಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಹಾಗಿದ್ರೆ ಡ್ರಿಂಕ್ಸ್ ತೆಗೆದುಕೊಂಡು ಬಂದ ಇಶಾನ್, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ಗೆ ಹೇಳಿದ್ದೇನು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

Virat Kohli and Shreyas Iyer recieve message from Rohit Sharma by Ishan Kishan

2023ರ ವಿಶ್ವಕಪ್ನಲ್ಲಿ ಭಾರತ ತಂಡ ಸತತ 8ನೇ ಜಯ ಸಾಧಿಸಿದೆ. ಈಡನ್ ಗಾರ್ಡನ್ಸ್‌ನಲ್ಲಿ ರೋಹಿತ್ ಸೇನೆಯು ದಕ್ಷಿಣ ಆಫ್ರಿಕಾವನ್ನು ಸುಲಭವಾಗಿ ಸೋಲಿಸಿತು. ಈ ಪಂದ್ಯದಲ್ಲಿ ಭಾರತ 243 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಟೀಮ್ ಇಂಡಿಯಾ ಬ 11ರಿಂದ 25ನೇ ಓವರ್ಗಳ ನಡುವೆ ಬ್ಯಾಟಿಂಗ್ ಮಾಡುವಾಗ ಭಾರತದ ಬ್ಯಾಟ್ಸ್ಮನ್ಗಳು 15 ಓವರ್ಗಳಲ್ಲಿ 52 ರನ್ ಗಳಿಸಲಷ್ಟೇ ಶಕ್ತರಾದರು. ವಿಕೆಟ್ನಲ್ಲಿ ತಿರುವು ಇತ್ತು. ಬ್ಯಾಟಿಂಗ್ಗೆ ಕಷ್ಟ ಸಾಧ್ಯ ಎನ್ನುವ ಪಿಚ್ನಲ್ಲಿ ವಿರಾಟ್ ಹಾಗೂ ಅಯ್ಯರ್ ತಾಳ್ಮೆಯಿಂದ ಬ್ಯಾಟ್ ಮಾಡಿದರು.

ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುತ್ತಿದ್ದಾಗ, ರೋಹಿತ್ ಶರ್ಮಾ ಇಶಾನ್ ಕಿಶನ್ ಅವರನ್ನು ಮೆಸೆಂಜರ್ ಆಗಿ ಮೈದಾನಕ್ಕೆ ಕಳುಹಿಸಿದರು. ಇಶಾನ್ ಡ್ರಿಂಕ್ಸ್ ತೆಗೆದುಕೊಂಡು, ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಬಹಳ ಹೊತ್ತು ಮಾತನಾಡುತ್ತಿದ್ದರು. ಇದಾದ ತಕ್ಷಣ ಮೈದಾನಕ್ಕೆ ತೆರಳಿದ ಇಶಾನ್ ಕೊಹ್ಲಿ ಮತ್ತು ಅಯ್ಯರ್ಗೆ ನಾಯಕ ಮತ್ತು ಕೋಚ್ ಸಂದೇಶವನ್ನು ನೀಡಿದರು.

ತಂಡದ ಮ್ಯಾನೇಜ್ಮೆಂಟ್ನಿಂದ ತನಗೆ ಏನು ಸಂದೇಶ ಕಳುಹಿಸಲಾಗಿದೆ ಎಂಬುದನ್ನು ಪಂದ್ಯದ ನಂತರ ಶ್ರೇಯಸ್ ಅಯ್ಯರ್ ಬಹಿರಂಗಪಡಿಸಿದರು. ಅಯ್ಯರ್ ಹೇಳಿದರು, 'ಆ ಸಮಯದಲ್ಲಿ ನನಗೆ ಸ್ವಲ್ಪ ಆತಂಕವಿತ್ತು ಆದರೆ ಅವರು ಪಂದ್ಯದ ಸ್ಥಿತಿ ಅರಿತು ಬ್ಯಾಟ್ ಮಾಡಲು ಹೇಳಿದ್ದರು. ಮಧ್ಯದಲ್ಲಿ ಸಂದೇಶವನ್ನು ಕಳುಹಿಸಿದ್ದಕ್ಕಾಗಿ ನಾಯಕ ರೋಹಿತ್ ಶರ್ಮಾ ಮತ್ತು ತಂಡದ ನಿರ್ವಹಣೆಗೆ ಧನ್ಯವಾದಗಳು ಎಂದು ಶ್ರೇಯಸ್ ತಿಳಿಸಿದ್ಧಾರೆ. ಇದು ಪಂದ್ಯದ ವೇಳೆ ನನಗೆ ತುಂಬಾ ನೆರವಾಯಿತು. ಕೊನೆಯವರೆಗೂ ಇರುವಂತೆ ಟೀಮ್ ಮ್ಯಾನೇಜ್ಮೆಂಟ್ ಸಂದೇಶ ಕಳುಹಿಸಿತ್ತು ಎಂದು ವಿರಾಟ್ ಕೊಹ್ಲಿ ಪಂದ್ಯದ ನಂತರ ಹೇಳಿದ್ದಾರೆ.

ಶ್ರೇಯಸ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ನಡುವೆ 135 ರನ್ಗಳ ಜೊತೆಯಾಟವಿತ್ತು. ಹೋರಾಟದ ನಂತರ, ಅಯ್ಯರ್ ಬಿರುಸಿ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು 87 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 77 ರನ್ ಗಳಿಸಿದರು. ಅವರು ಶತಕವನ್ನು ಕಳೆದುಕೊಂಡರು ಆದರೆ ಔಟಾಗುವ ಮೊದಲು ಭಾರತ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದರು.

Story first published: Monday, November 6, 2023, 11:30 [IST]
Other articles published on Nov 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+