ಮನೀಶ್ ಪಾಂಡೆ ಹುಟ್ಟುಹಬ್ಬ ಆಚರಿಸಿದ ವಿರಾಟ್ ಕೊಹ್ಲಿ & ಟೀಂ!
ನವದೆಹಲಿ, ಸೆಪ್ಟೆಂಬರ್ 23: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ಧ ಈಗ ನಡೆಯುತ್ತಿರುವ ಏಕದಿನ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ, ಮೊನ್ನೆ ಕೋಲ್ಕತಾದಲ್ಲಿ ಸರಣಿಯ ದ್ವಿತೀಯ ಪಂದ್ಯದ ನಂತರ ತಂಡದ ಸಹ ಆಟಗಾರ ಮನೀಶ್ ಪಾಂಡೆ ಅವರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದೆ.
ಇದೇ ತಿಂಗಳ 18ರಂದು ಮನೀಶ್ ಪಾಂಡೆ ಅವರು, ತಮ್ಮ 28ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅದಾದ ಮೇಲೆಯೇ ಭಾರತ-ಆಸೀಸ್ ಏಕದಿನ ಸರಣಿ ಶುರುವಾಗಿದೆ.

ಹುಟ್ಟುಹಬ್ಬದ ವಿಚಾರ ಆಗಲೇ ಹಳೆದಾಯ್ತು ಎಂದು ಕೈ ಕಟ್ಟಿ ಕೂಡುವಂಥ ತಂಡವಲ್ಲ ಟೀಂ ಇಂಡಿಯಾ. ಪಂದ್ಯ ಯಾವುದೂ ಇಲ್ಲ ವಿರಾಮದಲ್ಲಿದ್ದೀವಿ ಅಂದ್ರೆ ಸಾಕು ಎಂಜಾಯ್ ಮೆಂಟ್ ಮೊರೆ ಹೋಗುವ ಈ ತಂಡ, ಸೆಲೆಬ್ರೇಷನ್ ಗೆ ಏನಾದರೂ ಹೊಸ ಕಾರಣಗಳನ್ನು ಹುಡುಕುತ್ತಿರುತ್ತದೆ.
ಹೊಸ ಕಾರಣಗಳು ಹಳೆ ವಿಚಾರದ್ದಾದರೂ ಸರಿಯೇ... ಒಟ್ಟಿನಲ್ಲಿ ಸೆಲೆಬ್ರೇಷನ್ ಗೆ ಒಂದು ಸಕಾರಣ ಬೇಕಷ್ಟೇ. ಹಾಗಾಗಿ, ಮನೀಶ್ ಪಾಂಡೆ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ತಂಡ ಆಚರಿಸಿದೆ. ಅದರ ವಿಡಿಯೋ ಇಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications