Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಡೇ-ನೈಟ್‌ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಅಬ್ಬರ ಜೋರು

ಆಡಿಲೇಡ್‌ನಲ್ಲಿ ಡಿಸೆಂಬರ್‌ 6 ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್‌ ನಡೆಯಲಿದೆ. ಈ ಟೆಸ್ಟ್‌ ಪಂದ್ಯ ಟೀಮ್ ಇಂಡಿಯಾ ಪಾಲಿಗೆ ಮಹತ್ವದಾಗಿದೆ. ಅಲ್ಲದೆ ಆಡಿಲೇಡ್‌ ಟೆಸ್ಟ್‌ ಹಗಲು ರಾತ್ರಿಯಿಂದ ಕೂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಿಕೊಳ್ಳಲಿದ್ದಾರೆ. ಹೀಗಾಗಿ ಮೊದಲ ಟೆಸ್ಟ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ಜಸ್ಪ್ರಿತ್ ಬುಮ್ರಾ ನಿರಾಳವಾಗಿ ಬೌಲಿಂಗ್ ಮಾಡಲಿದ್ದಾರೆ.

ಭಾರತ ಈ ವರೆಗೆ ಒಟ್ಟು ನಾಲ್ಕು ಟೆಸ್ಟ್‌ ಪಂದ್ಯಗಳನ್ನು ಆಡಿದೆ. ಈ ನಾಲ್ಕು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಮೂರರಲ್ಲಿ ಜಯ ಸಾಧಿಸಿದೆ. ಹಗಲು ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಲ್ಕು ವರ್ಷದ ಹಿಂದೆ ಆಡಿಲೇಡ್‌ನಲ್ಲಿ ಒಂದು ಪಂದ್ಯವನ್ನು ಮಾತ್ರ ಸೋತಿದೆ. ಟೀಮ್ ಇಂಡಿಯಾ ಮತ್ತೊಮ್ಮೆ ಆಡಿಲೇಡ್‌ನಲ್ಲಿ ಪಿಂಕ್ ಬಾಲ್‌ ಟೆಸ್ಟ್‌ ಆಡಲು ಸಜ್ಜಾಗಿದೆ.

Virat Kohli and Team India Ready for Adelaide Day-Night Test Against Australia

ಗೆಲುವಿನ ಕನಸಿನಲ್ಲಿ ಭಾರತ

ಈಗಾಗಲೇ ಪರ್ತ್‌ನಲ್ಲಿ 295 ರನ್‌ಗಳಿಂದ ಗೆದ್ದ ಟೀಮ್ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಉತ್ತಮ ತಂತ್ರಗಾರಿಕೆಯೊಂದಿಗೆ ಮೈದಾನಕ್ಕೆ ಇಳಿಯಲು ಸಜ್ಜಾಗಿದೆ. ಟೀಮ್ ಇಂಡಿಯಾ ಪರ ಡೇ ಆಂಡ್ ನೈಟ್‌ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಏಕೈಕ ಬ್ಯಾಟರ್‌ ವಿರಾಟ್ ಕೊಹ್ಲಿ.

ಹೇಗಿದೆ ವಿರಾಟ್‌ ಸಾಧನೆ?

ವಿರಾಟ್ ಕೊಹ್ಲಿ ಡೇ ಆಂಡ್‌ ನೈಟ್‌ ಟೆಸ್ಟ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಐದು ವರ್ಷದ ಹಿಂದೆ ಕೊಹ್ಲಿ ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಆರ್ಭಟ ನಡೆಸಿದ್ದರು. ವಿರಾಟ್‌ ಕೊಹ್ಲಿ 136 ರನ್‌ಗಳ ದೊಡ್ಡ ಇನಿಂಗ್ಸ್‌ ಕಟ್ಟಿದ್ದರು. ಇದು ಟೀಮ್ ಇಂಡಿಯಾ ಪರ ಬ್ಯಾಟರ್‌ ಒಬ್ಬ ಹಗಲು ರಾತ್ರಿ ಟೆಸ್ಟ್‌ನಲ್ಲಿ ಗಳಿಸಿದ ಗರಿಷ್ಠ ಮೊತ್ತವಾಗಿದೆ. ಅಲ್ಲದೆ ಹಗಲು ರಾತ್ರಿ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಮಾತ್ರ ಶತಕ ಸಾಧಿಸಿದ ಹಿರಿಮೆ ತಮ್ಮದಾಗಿಸಿಕೊಂಡರು.

Virat Kohli and Team India Ready for Adelaide Day-Night Test Against Australia

ಬಾಂಗ್ಲಾದೇಶ ವಿರುದ್ಧ ಡೇ ಆಂಡ್ ನೈಟ್‌ ಟೆಸ್ಟ್‌ ಪಂದ್ಯದಲ್ಲಿ ಇಶಾಂತ್‌ ಶರ್ಮಾ ಬೆಂಕಿಯಂತೆ ಎಸೆತಗಳನ್ನು ಎದುರಿಸುವಲ್ಲಿ ಪ್ರವಾಸಿ ತಂಡ ಎಡವಿತ್ತು. ಈ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಇಶಾಂತ್‌ 9 ವಿಕೆಟ್‌ ಪಡೆದಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ 347 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಬಾಂಗ್ಲಾದೇಶ ತಂಡ ಮೊದಲ ಇನಿಂಗ್ಸ್‌ನಲ್ಲಿ 106 ರನ್‌ಗಳಿಗೆ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 195 ರನ್‌ಗಳಿಗೆ ಕುಸಿದಿತ್ತು.

ಹಗಲು ರಾತ್ರಿ ಟೆಸ್ಟ್‌ನಲ್ಲಿ ಆಸೀಸ್ ಅಂಕಿ ಅಂಶ ಉತ್ತಮವಾಗಿದೆ. ಆಸ್ಟ್ರೇಲಿಯ ತಂಡ ಇದುವರೆಗೆ ಒಟ್ಟು 11 ಪಂದ್ಯಗಳನ್ನು ಗೆದ್ದು, ಅತಿ ಹೆಚ್ಚು ಹಗಲು-ರಾತ್ರಿ ಟೆಸ್ಟ್ ಪಂದ್ಯಗಳನ್ನು ಗೆದ್ದ ತಂಡ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದೆ.

Story first published: Tuesday, December 3, 2024, 19:24 [IST]
Other articles published on Dec 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+