WTC final ಬಳಿಕ ವಿರಾಟ್ ಕೊಹ್ಲಿ ಪಡೆಗೆ ಬಯೋಬಬಲ್‌ನಿಂದ 20 ದಿನಗಳ ಬಿಡುವು

ಲಂಡನ್: ಇಂಗ್ಲೆಂಡ್‌ನಲ್ಲಿ ಬಯೋಬಬಲ್ ಒಳಗಿರುವ ಟೀಮ್ ಇಂಡಿಯಾ ಆಟಗಾರರು ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಬಳಿಕ 20 ದಿನಗಳ ಬಿಡುವು ಪಡೆದುಕೊಳ್ಳಲಿದ್ದಾರೆ. ಜೂನ್ 18ರಿಂದ 22ರ ವರೆಗೆ ನ್ಯೂಜಿಲೆಂಡ್-ಭಾರತ ಮಧ್ಯೆ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯಲಿದೆ.
ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಬಳಿಕ ಭಾರತೀಯ ಆಟಗಾರರಿಗೆ ಬಯೋಬಬಲ್‌ನಿಂದ 20 ದಿನಗಳ ಕಾಲ ಮುಕ್ತಿ ನೀಡಲಾಗುತ್ತದೆ. ಆ ಬಳಿಕ ಜುಲೈ 14ಕ್ಕೆ ಮತ್ತೆ ವಿರಾಟ್ ಕೊಹ್ಲಿ ಪಡೆ ಬಯೋಬಬಲ್ ಒಳಗೆ ಪ್ರವೇಶಿಸಲಿದೆ. ಕ್ವಾರಂಟೈನ್ ಬಳಿಕ ಇಂಗ್ಲೆಂಡ್-ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
ಭಾರತೀಯ ತಂಡ ನಿರ್ವಹಣಾ ಸಮಿತಿಯಲ್ಲಿನ ಬೆಳವಣಿಗೆಗಳ ಬಗ್ಗೆ ಮೂಲವೊಂದು ತಿಳಿಸಿದೆ. ಭಾರತೀಯ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಬಯೋಬಬಲ್‌ನಲ್ಲಿ ಕಳೆಯುವುದಷ್ಟೇ ಅಲ್ಲ, ಟೆಸ್ಟ್ ಸರಣಿ ಮುಗಿದ ಬಳಿಕ ನೇರವಾಗಿ ಯುಎಇಯ ಐಪಿಎಲ್ ಬಯೋಬಬಲ್‌ಗೆ ಪ್ರವೇಶಿಸಲಿದೆ ಎಂದು ಮೂಲ ತಿಳಿಸಿದೆ.
'ಭಾರತೀಯ ಸಮೂಹ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಬಳಿಕ ಜೂನ್ 24ರಂದು ಬಯೋಬಬಲ್‌ನಿಂದ ಬಿಡುವು ಪಡೆದುಕೊಳ್ಳಲಿದೆ. ಬಳಿಕ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗಾಗಿ ಜುಲೈ 14ರಿಂದ ಮತ್ತೆ ಬಯೋ ಬಬಲ್ ಒಳಗೆ ಬರಲಿದೆ. ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಆಗಸ್ಟ್ 4ರಿಂದ ಆರಂಭಗೊಳ್ಳಲಿದೆ,' ಮೂಲ ಮಾಹಿತಿ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications