ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇವರು ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಈ ನಿರ್ಧಾರವನ್ನು ತೆಗೆದುಕೊಂಡಿದ್ದು ನಿಜಕ್ಕೂ ಟೀಮ್ ಇಂಡಿಯಾಕ್ಕೆ ದೊಡ್ಡ ಪೆಟ್ಟು ಬಿದ್ದಂತೆ ಆಗಿದೆ. ಇವರು ಈಗಾಗಲೇ ಟಿ20 ಕ್ರಿಕೆಟ್ ವಿದಾಯ ಹೇಳಿದ್ರು. ಇನ್ನು ಟೆಸ್ಟ್ ಕ್ರಿಕೆಟ್‌ಗೂ ವಿದಾಯ ಹೇಳಿದ್ದಾರೆ. ಇವರ ಈ ನಿರ್ಧಾರ ಅಭಿಮಾನಿಗಳಿಗೆ ತೀವ್ರ ಬೇಸರ ತರಿಸಿದೆ.
ಐಪಿಎಲ್ ಮಧ್ಯದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಸಹ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇವರ ಬೆನ್ನಲ್ಲೆ ವಿರಾಟ್ ಕೊಹ್ಲಿ ಸಹ ತಂಡದಿಂದ ಹಿಂದೆ ಸರಿದಿರುವುದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಬಾರ್ಡರ್ ಗವಾಸ್ಕರ್ ಸರಣಿ ಹಾಗೂ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ನೀರಸ ಪ್ರದರ್ಶನ ನೀಡಿದ್ದ ವಿರಾಟ್ ಟೀಕೆಗೆ ಗುರಿಯಾಗಿದ್ದಾರೆ.

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿದೇಶಿ ಹಾಗೂ ದೇಶೀಯ ಪಿಚ್‌ಗಳನ್ನು ರನ್‌ಗಳನ್ನು ಗುಡ್ಡೆ ಹಾಕಿ ಸೈ ಎನಿಸಿಕೊಂಡಿದ್ದರು. ಭಾರತದ ಪರ ಸೂಪರ್ ಸ್ಟಾರ್ ಪರಂಪರೆಯನ್ನು ಮುನ್ನಡೆಸಿದ ಕೀರ್ತಿ ಈ ಪ್ಲೇಯರ್‌ಗೆ ಸಲ್ಲುತ್ತದೆ. ಇವರನ್ನು ಭಾರತ ಕಂಡ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರು ಎಂದು ಬಣ್ಣಿಸಲಾಗುತ್ತಿದೆ. ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಇವರು ಆಡಿದ ಧಾಟಿಗೆ ಆಸೀಸ್ ಅಭಿಮಾನಿಗಳು ಸಹ ಫುಲ್ ಮಾರ್ಕ್ಸ್ ನೀಡಿದ್ದರು. ಬೌನ್ಸಿ ಪಿಚ್‌ನಲ್ಲಿ ಆಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ವಿರಾಟ್ ಕೊಹ್ಲಿ, ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ನಿಜಕ್ಕೂ ಭಾರತ ಕ್ರಿಕೆಟ್ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಂತೆ ಆಗಿದೆ.
ಸ್ಟಾರ್ ಬೌಲರ್‌ಗಳಿಗೆ ಸಿಂಹ ಸ್ವಪ್ನರಾಗಿ ಕಾಡಿದ್ದ ವಿರಾಟ್ ಕೊಹ್ಲಿ ಒಂದೊಮ್ಮೆ ನೆಲಕಚ್ಚಿ ನಿಂತ್ರೆ ಎದುರಾಳಿಗಳ ಕಥೆ ಫಿನಿಷ್.. ಇವರು ಭಾರತದ ಪರ 123 ಟೆಸ್ಟ್ ಪಂದ್ಯಗಳಲ್ಲಿ 46ರ ಸರಾಸರಿಯಲ್ಲಿ 30 ಅರ್ಧಶತಕ ಹಾಗೂ 31 ಅರ್ಧಶತಕ ಬಾರಿಸಿದ್ದಾರೆ. ಇವರು ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿತಶಕದ ಸಾಧನೆಯನ್ನು ಏಳು ಬಾರಿ ಮಾಡಿದ ಆಟಗಾರ. ಭಾರತದ ಪರ ಇಷ್ಟೊಂದು ದ್ವಿಶತಕವನ್ನು ಯಾರು ಬಾರಿಸಿಲ್ಲ.
ವಿರಾಟ್ ಟೀಮ್ ಇಂಡಿಯಾ ಪರ ನಾಯಕರಾಗಿಯೂ ದೊಡ್ಡ ಸಾಧನೆ ಮಾಡಿದ್ದಾರೆ. ಇವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ವಿದೇಶಿ ಪ್ರವಾಸದಲ್ಲಿ ಸರಣಿ ಗೆಲುವು ಸಾಧಿಸಲು ಆರಂಭಿಸಿತು. ಬೌಲರ್ಸ್ ಕ್ಯಾಪ್ಟನ್ ಎಂದೇ ಖ್ಯಾತಿ ಪಡೆದಿದ್ದರು. ವಿರಾಟ್ ಅವರ ಆಕ್ರಮಣಕಾರಿ ಶೈಲಿ ಇವರನ್ನು ಎಲ್ಲ ಆಟಗಾರರಿಗಿಂತ ಭಿನ್ನವಾಗಿ ನೋಡುವಂತೆ ಮಾಡಿದೆ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ತೋರಿಸುತ್ತಿದ್ದ ಅವರ ಕ್ಷಮತೆ ನಿಜಕ್ಕೂ ಬೇರೆ ಆಟಗಾರರಿಗೆ ಮಾದರಿ. ಇವರು ಮೊದಲ ಇನಿಂಗ್ಸ್‌ನಲ್ಲಿ ವಿರಾಟ್ ಬ್ಯಾಟ್ ಮಾಡುತ್ತಿದ್ದ ರೀತಿಯ ಫಲವಾಗಿ ಭಾರತ ಹಲವು ಪಂದ್ಯಗಳಲ್ಲಿ ಏಕಪಕ್ಷೀಯ ಗೆಲುವು ದಾಖಲಿಸುವಂತೆ ಮಾಡಿದೆ. ಇನ್ನು ಇವರ ಆಟವನ್ನು ಅಭಿಮಾನಿಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಸ್ ಮಾಡಿಕೊಳ್ಳಲಿದ್ದಾರೆ.