For Quick Alerts
ALLOW NOTIFICATIONS  
For Daily Alerts
 

ಆ್ಯನಿವರ್ಸರಿ ಸಂಭ್ರಮದಲ್ಲಿ ವಿರುಷ್ಕಾ ಜೋಡಿ; ವಿಶೇಷ ಸಂದರ್ಭಕ್ಕೆ ಕೊಹ್ಲಿ ಭಾವುಕ ಸಂದೇಶ

Virat Kohli, Anushka Sharma Celebrate Second Wedding Anniversary

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವಿವಾಹ ಬಂಧನಕ್ಕೆ ಒಳಗಾಗಿ ಇಂದಿಗೆ ಎರಡು ವರ್ಷ. ಈ ಸಂದರ್ಭದಲ್ಲಿ ತಾರಾ ಜೋಡಿಗಳು ಮದುವೆಯ ಸಂದರ್ಭದ ವಿಶೇಷ ಪೋಟೋಗಳನ್ನು ಹಂಚಿಕೊಂಡು ಪರಸ್ಪರ ಶುಭಾಶಯಗಳನ್ನು ತಿಳಿಸಿದ್ದಾರೆ.

ವಿವಾಹ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ಕೊಹ್ಲಿ ಇನ್ಸ್ಟಾಗ್ರಾಮ್‌ನಲ್ಲಿ "ವಾಸ್ತವವಾಗಿ ಪ್ರೀತಿಯನ್ನು ಬಿಟ್ಟು ಜಗತ್ತಿನಲ್ಲಿ ಬೇರೇನೂ ಇಲ್ಲ.ಅದರಲ್ಲೂ ಪ್ರತಿದಿನವೂ ನಿಮಗೆ ಅರಿವು ಮೂಡಿಸುವ ವ್ಯಕ್ತಿಯೊಂದಿಗೆ ದೇವರು ನಿಮ್ಮನ್ನು ಆಶೀರ್ವದಿಸಿದಾಗ ನಿಮಗೆ ಕೇವಲ ಕೃತಜ್ಞತಾ ಭಾವವಷ್ಟೇ ಇರುತ್ತದೆ" ಎಂದು ಬರೆದು ಮದುವೆಯ ಸಂದರ್ಭದ ಚಿತ್ರದೊಂದಿಗೆ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

ಅನುಷ್ಕಾ ಶರ್ಮಾ ಕೂಡ ಮದುವೆಯ ಕಪ್ಪು ಬಿಳುಪು ಚಿತ್ರವೊಂದನ್ನು ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ಫ್ರೆಂಚ್ ಕವಿ ವಿಕ್ಟರ್ ಹ್ಯೂಗೋ ಅವರ "ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ದೇವರ ಮುಖವನ್ನು ನೋಡಿದಂತೆ" ಸಾಲನ್ನು ಬರೆದು ಅನುಷ್ಕಾ, ಪ್ರೀತಿಯ ವಿಷಯವೆಂದರೆ ಅದು ಕೇವಲ ಭಾವನೆ ಅಲ್ಲ, ಅದಕ್ಕಿಂತ ಹೆಚ್ಚು. ಇದು ಮಾರ್ಗದರ್ಶಿ, ಸಂಪೂರ್ಣ ಸತ್ಯದ ಹಾದಿಯಾಗಿದ್ದು ನಾನು ಅದನ್ನು ಪಡೆಯುವ ಮೂಲಕ ಆಶಿರ್ವಾದ ಪಡೆದಿದ್ದೇನೆ ಎಂದಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅಭಿಮಾನಿಗಳ ಮುಂದೆ ಮುಜುಗರ ಪಡದೆ ತಮ್ಮ ಪ್ರೀತಿಯನ್ನು ಅನೇಕ ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದಾರೆ. ಒಬ್ಬರಿಗೊಬ್ಬರು ಯಾವ ರೀತಿ ಶಕ್ತಿಯಾಗಿದ್ದಾರೆ ಎಂಬುದನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಸಾಮಾಜಿಕ ಜಾಲತಾಣ ಮಾತ್ರವಲ್ಲ ಅನೇಕ ಸಂದರ್ಶನಗಳಲ್ಲೂ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಅವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017 ರ ಡಿಸೆಂಬರ್ 11 ರಂದು ಇಟೆಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

Story first published: Wednesday, December 11, 2019, 16:21 [IST]
Other articles published on Dec 11, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+