For Quick Alerts
ALLOW NOTIFICATIONS  
For Daily Alerts
 

ಬೇರೆಯಾಗ್ತಿದ್ದಾರಾ ವಿರಾಟ್ ಅನುಷ್ಕಾ? ಟ್ವಿಟ್ಟರ್‌ನಲ್ಲಿ #VirushkaDivorce ಟ್ರೆಂಡ್ !

Virat Kohli-Anushka Sharma Divorce Trending On Twitter

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದೇಶದ ಪ್ರಖ್ಯಾತ ತಾರಾ ಜೋಡಿ. ಒಬ್ಬರಿಗೊಬ್ಬರ ನಡುವೆ ಎಷ್ಟು ಅನ್ಯೋನ್ಯವಾಗಿದ್ದಾರೆ ಎನ್ನುವುದು ಪ್ರತಿ ಬಾರಿಯೂ ವ್ಯಕ್ತವಾಗುತ್ತಲೇ ಇದೆ. ವಿರಾಟ್ ಕೊಹ್ಲಿ ಸಾಷ್ಟು ಬಾರಿ ತನ್ನಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗೆ ಅನುಷ್ಕಾ ಶರ್ಮಾ ಕಾರಣ ಎಂದು ಹೇಳಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಕೂಡ ತಮ್ಮ ಪ್ರೀತಿಯನ್ನು ಅನೇಕ ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಆದರೆ ಈಗ ಈ ಜೋಡಿ ಮಧ್ಯೆ ಬಿರುಕು ಮೂಡಿದ್ಯಾ? ಈ ಪ್ರಶ್ನೆಗೆ ಕಾರಣವಿದೆ. ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. 'ವಿರುಷ್ಕಾ ಡಿವೋರ್ಸ್' ಎಂಬುದು ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಆದರೆ ಅದಕ್ಕೆ ಕಾರಣ ಮಾತ್ರ ತುಂಬಾ ವಿಲಕ್ಷಣವಾಗಿದೆ. ಈ ಟ್ರೆಂಡಿಂಗ್ ಸುದ್ದಿಯ ಬಗ್ಗೆ ಸಂಪೂರ್ಣ ವಿವರಕ್ಕಾಗಿ ಮುಂದೆ ಓದಿ..

ವಿರುಷ್ಕಾ ಜೋಡಿ ಮಧ್ಯೆ ಏನಾಗಿದೆ?

ವಿರುಷ್ಕಾ ಜೋಡಿ ಮಧ್ಯೆ ಏನಾಗಿದೆ?

ಹಾಗಾದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿವೋರ್ಸ್ ಆಗುತ್ತಿದ್ದಾರಾ? ಖಂಡಿತಾ ಇಲ್ಲ. ಸುಳ್ಳು ಸುದ್ದಿಯೊಂದು ಹೇಗೆ ವೈರಲ್ ಆಗುತ್ತದೆ ಎಂಬುದಕ್ಕೆ ಇದೊಂದು ಸೂಕ್ತ ಉದಾಹರಣೆ. ಈ ಸುದ್ದಿಗೆ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಹಾಗಾಗಿ ಇದು ಟ್ರೆಂಡಿಂಗ್ ಆಗಿದೆ.

ಹಳೆಯ ಲೇಖನವೇ ಇದಕ್ಕೆ ಕಾರಣ

ಹಳೆಯ ಲೇಖನವೇ ಇದಕ್ಕೆ ಕಾರಣ

ಮದುವೆಗೂ ಮುನ್ನ ಈ ಜೋಡಿ ಮನಸ್ತಾಪದಿಂದ ಬೇರೆಯಾಗುತ್ತಿದ್ದಾರೆ ಎಂಬ ಬಗ್ಗೆ ಪ್ರಕಟವಾದ ಲೇಖನ ಇದಕ್ಕೆ ಕಾರಣವಾಗಿದೆ. ಆ ಹಳೆಯ ಲೇಖನ ಈಗ ಮುನ್ನಲೆಗೆ ಬಂದಿಗೆ. ಹಾಗಾಗಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ಹರಿದಾಡಲು ಆರಂಭಿಸಿದೆ.

'ಪಾತಳ ಲೋಕ'ದ ಮೂಲ

'ಪಾತಳ ಲೋಕ'ದ ಮೂಲ

ಅಷ್ಟಕ್ಕೂ ಈ ಸುದ್ದಿ ಟ್ರೆಂಡ್ ಆಗಲು ಮೂಲಕ ಕಾರಣ 'ಪಾತಾಳ್ ಲೋಕ್' ಎಂಬ ವೆಬ್‌ ಸೀರಿಸ್. ಅನುಷ್ಕಾ ಶರ್ಮಾ ನಿರ್ಮಾಣದ ಈ ವೆಬ್‌ ಸೀರಿಸ್‌ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದ ಬಿಜಿಪಿಯ ಶಾಸಕ ನಂದಕಿಶೋರ್ ಗುರ್ಜರ್ ಅನುಷ್ಕಾ ಶರ್ಮಾ ವಿರುದ್ಧ ಕೆಮಡ ಕಾರಿದ್ದರು. ಜೊತೆಗೆ 'ವಿರಾಟ್ ಕೊಹ್ಲಿ ನೀವು ಅನುಷ್ಕಾ ಶರ್ಮಾರಿಂದ ವಿಚ್ಛೇದನ ಪಡೆಯಿರಿ' ಎಂದಿದ್ದರು. ಈ ಹಿನ್ನೆಲೆಯಲ್ಲಿ ಹಳೆಯ ಲೇಖನವನ್ನು ಮುನ್ನೆಲೆಗೆ ತರಲಾಗಿದೆ.

ಮತ್ತಷ್ಟು ಗಟ್ಟಿಯಾಗಿದೆ ವಿರುಷ್ಕಾ ಬಂಧ

ಮತ್ತಷ್ಟು ಗಟ್ಟಿಯಾಗಿದೆ ವಿರುಷ್ಕಾ ಬಂಧ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವೇ ಯಾವುದೇ ಮನಸ್ತಾಪವಾಗಿಲ್ಲ ಎನ್ನುವುದು ಸ್ಪಷ್ಟ. ಲಾಕ್‌ಡೌನ್ ಸಂದರ್ಭದಲ್ಲಿ ಈ ಜೋಡಿಗಳು ಬಹಳ ಸುಧೀರ್ಘ ಕಾಲವನ್ನು ಜೊತೆಯಾಗಿ ಕಳೆದಿದ್ದಾರೆ. ಯಾವಾಗಲೂ ತಮ್ಮ ಕ್ಷೇತ್ರಗಳಲ್ಲಿ ಬ್ಯುಸಿ ಇರುವ ಈ ಜೋಡಿ ಈ ಸಂದರ್ಭದಲ್ಲಿ ಉತ್ತಮ ಸಮಯವನ್ನು ಕಳೆದಿದ್ದಾರೆ. ಹೀಗಾಗಿ ಇಬ್ಬರ ನಡುವಿನ ಬಂಧ ಮತ್ತಷ್ಟು ಗಟ್ಟಿಯಾಗಿದೆ. ಇದಕ್ಕೆ ಈ ಸ್ಟಾರ್ ಜೋಡಿ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ಚಿತ್ರಗಳು ಸಾಕಷ್ಟಿ ಹೇಳುತ್ತಿದೆ.

Story first published: Saturday, June 6, 2020, 13:34 [IST]
Other articles published on Jun 6, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+