ಪ್ರಧಾನಿ ಮೋದಿಯನ್ನು ಆರತಕ್ಷತೆಗೆ ಆಹ್ವಾನಿಸಿದ ವಿರುಷ್ಕಾ
ನವದೆಹಲಿ, ಡಿಸೆಂಬರ್ 20: ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಜೋಡಿ ಹನಿಮೂನ್ ಮುಗಿಸಿಕೊಂಡು ನವದೆಹಲಿಗೆ ಬಂದಿಳಿದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅನುಷ್ಕಾ ಹಾಗೂ ವಿರಾಟ್ ಮದುವೆ ಆರತಕ್ಷತೆ ಕುರಿತು ಅಭಿಮಾನಿಗಳು ಸಾಕಷ್ಟು ಚರ್ಚೆಗಳು ನಡೆದಿದ್ದು, ಬಿಜೆಪಿ ಮುಖಂಡರೊಬ್ಬರು ವಿರಾಟ್ ಕೊಹ್ಲಿ ಅವರು ಇಟಲಿಯಲ್ಲಿ ಮದುವೆಯಾಗಿದ್ದೇಕೆ? ಎಂದು ಪ್ರಶ್ನಿಸಿದ್ದನ್ನು ಮರೆಯುವಂತಿಲ್ಲ.

ಆದರೆ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರದಂದು ಭೇಟಿ ಮಾಡಿ, ಆರತಕ್ಷತೆಗೆ ಆಹ್ವಾನಿಸಿದರು.
ಡಿಸೆಂಬರ್ 21 ಮತ್ತು ಡಿಸೆಂಬರ್ 26ರಂದು ಕುಟುಂಬಸ್ಥರಿಗೆ ಮತ್ತು ಸ್ನೇಹಿತರಿಗೆ ಮದುವೆ ಆರತಕ್ಷತೆ ಆಯೋಜಿಸಲಾಗಿದೆ. ಡಿಸೆಂಬರ್ 21ರಂದು ದೆಹಲಿಯ ತಾಜ್ ಡಿಪ್ಲೊಮೆಟಿಕ್ ಎನ್ ಕ್ಲೇವ್ ನ ದರ್ಬಾರ್ ಹಾಲ್ ನಲ್ಲಿ ಆರತಕ್ಷತೆ ಇಟ್ಟುಕೊಂಡಿದ್ದಾರೆ.
ಇನ್ನು ಸ್ನೇಹಿತರಿಗೆ, ಕ್ರಿಕೆಟರ್ಸ್, ಉದ್ಯಮಿಗಳಿಗೆ, ನಟ-ನಟಿಯರಿಗೆ ಡಿಸೆಂಬರ್ 26 ಮುಂಬೈನಲ್ಲಿ ಅರತಕ್ಷತೆಯನ್ನು ಆಯೋಜಿಸಲಾಗಿದೆ.
ಪ್ರತಿಯೊಬ್ಬರೂ ಗಿಡ ನೆಟ್ಟು, ಪರಿಸರವನ್ನು ಕಾಪಾಡಬೇಕು ಅನ್ನೋ ಸಂದೇಶವಿರುವ ಆಹ್ವಾನ ಪತ್ರಿಕೆ ಕಂಡ ಮೋದಿ, ನವ ದಂಪತಿಗೆ ಶುಭ ಹಾರೈಸಿ, ಆಶೀರ್ವದಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications