Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿ- ಅನುಷ್ಕಾ ಮದುವೆ ದಿನಾಂಕ ಸುದ್ದಿ ನಿಜವೇ!

ನವದೆಹಲಿ, ನ.03: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬೆಂಗಳೂರಿನ ಬೆಡಗಿ ಅನುಷ್ಕಾ ಶರ್ಮ ಮದುವೆ ಬಗ್ಗೆ ಮತ್ತೊಮ್ಮೆ ಸುದ್ದಿ ಹರಿದಾಡುತ್ತಿದೆ.

ಇತ್ತೀಚೆಗಷ್ಟೇ ಈ ಬಗ್ಗೆ ಅನುಷ್ಕಾ ಶರ್ಮ ಅವರ ವಕ್ತಾರರು ಇಬ್ಬರ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದರು. ಅದರೆ, ಈಗ ಕ್ರಿಕೆಟ್ ನೆಕ್ಸ್ಟ್ ವರದಿಯಂತೆ ಜನವರಿ 23, 2016ರಂದು ಇಬ್ಬರು ಹಸಮಣೆ ಏರಲಿದ್ದಾರಂತೆ.

ನಕಲಿ ಕಾರ್ಡ್: ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ ಹಾಗೂ ರೋಹಿತ್ ಶರ್ಮ ನಂತರ ವಿರಾಟ್ ಕೊಹ್ಲಿಗೂ ಕಂಕಣ ಬಲ ಕೂಡಿ ಬಂದಿದೆ ಎಂದು ಅವರ ಅಭಿಮಾನಿಗಳು ಸಂತಸ ಪಡುವಷ್ಟರಲ್ಲೇ ಈ ಸುದ್ದಿ ಸುಳ್ಳು ಎಂದು ಗೊತ್ತಾಗಿದೆ.

Virat Kohli and Anushka Sharma Marriage fake wedding card

ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಅನುಷ್ಕಾ ಅವರನ್ನು ವಿವಾಹವಾಗುವ ದಿನಾಂಕ ಎಂದು ಹೇಳಲಾದ ಆಮಂತ್ರಣ ಪತ್ರಿಕೆಯಲ್ಲಿ ಹಲವಾರು ದೋಷಗಳು ಕಂಡು ಬಂದಿದೆ. ಮೂಲಕ ಟೀಮ್ ಇಂಡಿಯಾ ಕ್ರಿಕೆಟಿಗರ ಮದುವೆಯ ಸರದಿಗೆ ಸೇರ್ಪಡೆಯಾಗಲು ಸಜ್ಜಾಗಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅವರ ದೀರ್ಘಕಾಲದ ಗೆಳತಿ ಅನುಷ್ಕಾ ಶರ್ಮ 2016ರ ನ.23ರಂದು ವಿವಾಹವಾಗುವ ಕರೆಯೋಲೆಯನ್ನು ಫೇಸ್‌ಬುಕ್‌ನಲ್ಲಿ ಸೋಮವಾರ ಪ್ರಕಟಿಸಲಾಗಿತ್ತು. ಆದರೆ, ಕೆಲವೇ ನಿಮಿಷದಲ್ಲಿ ಫೇಸ್‌ಬುಕ್‌ನಿಂದ ವಿವಾಹದ ಆಹ್ವಾನ ಪತ್ರಿಕೆಯನ್ನು ಡಿಲೀಟ್ ಮಾಡಲಾಗಿತ್ತು.

ಮದುವೆ ಆಹ್ವಾನ ಪತ್ರಿಕೆಯಲ್ಲಿ ಜನವರಿ 23rd ಎಂದು ಮುದ್ರಣವಾಗುವ ಬದಲು 23th ಎಂದಿದೆ. ಮುಂಬೈನ ತಾಜ್ ಹೋಟೆಲ್ ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ಹೇಳಲಾಗಿದೆ. ಲಭ್ಯ ಮಾಹಿತಿ ಪ್ರಕಾರ ಆ ದಿನಕ್ಕೆ ತಾಜ್ ಹೋಟೆಲ್ ಬುಕ್ ಆಗಿಲ್ಲ.

ಕೊಹ್ಲಿ ಅವರ ಪೋಷಕರ ಹೆಸರು ಸರೋಜ್ ಕೊಹ್ಲಿ ಹಾಗೂ ಪ್ರೇಮ್ ಕೊಹ್ಲಿ ಎನ್ನುವುದರ ಬದಲು ಸುರಭಿ ಹಾಗೂ ಆರುಣ್ ಕೊಹ್ಲಿ ಎಂದಿದೆ. ಇದೇ ರೀತಿ ದೋಷ ಅನುಷ್ಕಾ ಪೋಷಕರ ಹೆಸರಿನಲ್ಲೂ ಕಂಡು ಬಂದಿದೆ. ಅಜಯ್ ಕುಮಾರ್ ಶರ್ಮ ಹಾಗೂ ಆಶೀಮಾ ಶರ್ಮ ಎನ್ನುವುದರ ಬದಲು ನೀಲಿಮಾ ಹಾಗೂ ಮೇಜರ್ ಅರ್ಜುನ್ ಸಿಂಗ್ ಎಂದು ಬರೆಯಲಾಗಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+