ಅಪ್ಪನಾಗಲಿದ್ದಾರೆ ವಿರಾಟ್, 2021 ಜನವರಿಗೆ ಜೂನಿಯರ್ ಕೊಹ್ಲಿ ಆಗಮನ!

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅಪ್ಪ-ಅಮ್ಮನಾಗುವ ಸಂಭ್ರಮದಲ್ಲಿದ್ದಾರೆ. 2021ರ ಜನವರಿಯಲ್ಲಿ ಜೂನಿಯರ್ ಕೊಹ್ಲಿ ಇಲ್ಲವೆ ಜೂನಿಯರ್ ಅನುಷ್ಕಾ ಆಗಮಿಸುವ ನಿರೀಕ್ಷೆಯಿದೆ. ಅನುಷ್ಕಾ ಮತ್ತು ವಿರಾಟ್ ಇಬ್ಬರೂ ಈ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಅಕೌಂಟ್‌ನಲ್ಲಿ ಕೊಹ್ಲಿ ಮತ್ತು ಅನುಷ್ಕಾ ಇಬ್ಬರೂ ಒಂದೇ ರೀತಿಯ ಚಿತ್ರ-ಸಾಲು ಪೋಸ್ಟ್ ಮಾಡಿದ್ದಾರೆ.
ತಾವು ಮಗುವಿನ ನಿರೀಕ್ಷೆಯಲ್ಲಿರುವ ಖುಷಿಯನ್ನು ಅನುಷ್ಕಾ ಮತ್ತು ಕೊಹ್ಲಿ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಬಹಿರಂಗಪಡಿಸಿದ್ದಾರೆ. ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟ್ಯಾಂಕೋವಿಕ್ ಜೋಡಿಗೆ ಇತ್ತೀಚೆಗೆ ಮಗು ಜನಿಸಿತ್ತು.
ಈಗ ವಿರುಷ್ಕಾ ಕುಂಟುಂಬಕ್ಕೂ ಮತ್ತೊಬ್ಬ ಸದಸ್ಯ ಸೇರ್ಪಡೆಯಾಗುವುದರಲ್ಲಿದ್ದಾರೆ.

2017ರಲ್ಲಿ ಮದುವೆ
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ 2017ರ ಡಿಸೆಂಬರ್ 11ರಲ್ಲಿ ಸತಿ-ಪತಿಗಳಾಗಿದ್ದರು. ಮದುವೆಯಾಗಿ 3 ವರ್ಷಗಳ ಬಳಿಕ ಕೊಹ್ಲಿ ದಂಪತಿ, ತಾವು ಅಪ್ಪ-ಅಮ್ಮನಾಗುತ್ತಿರುವ ಸಂಗತಿ ಬಹಿರಂಗಪಡಿಸಿದ್ದಾರೆ.
ಒಂದೇ ರೀತಿಯ ಪೋಸ್ಟ್
ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಖಾತೆಯ ಮೂಲಕ ಅಪ್ಪ-ಅಮ್ಮನಾಗುತ್ತಿರುವ ಖುಷಿ ಹಂಚಿಕೊಂಡಿರುವ ವಿರಾಟ್-ಅನುಷ್ಕಾ, 'ನಾವೀಗ ಇಬ್ಬರಿಂದ ಮೂವರಾಗುತ್ತಿದ್ದೇವೆ. 2021ರ ಜನವರಿಗೆ ಹೊಸ ಸದಸ್ಯರೊಬ್ಬರು ಬರುವುದರಲ್ಲಿದ್ದಾರೆ' ಎಂದು ಇಬ್ಬರೂ ಒಂದೇ ರೀತಿಯಾಗಿ ಬರೆದುಕೊಂಡಿದ್ದಾರೆ.

ಟ್ರೋಲಾಗಿದ್ದ ಕೊಹ್ಲಿ
ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟ್ಯಾಂಕೋವಿಕ್ ಅವರ ನಿಶ್ಚಿತಾರ್ಥವಾಗಿತ್ತು. ಆದರೆ ಮದುವೆಗೂ ಮುನ್ನವೇ ಹಾರ್ದಿಕ್ ತಾನು ಅಪ್ಪನಾಗುತ್ತಿರುವ ಸಂಗತಿ ಹೇಳಿಕೊಂಡಿದ್ದರು. ಆಗ ನೆಟ್ಟಿಗರು ಕೊಹ್ಲಿಯನ್ನು ಟ್ರೋಲ್ ಮಾಡಿದ್ದರು.

ಐಪಿಎಲ್ ತಯಾರಿಯಲ್ಲಿ ವಿರಾಟ್
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ವಿರಾಟ್ ಕೊಹ್ಲಿ ಸದ್ಯ ದುಬೈನಲ್ಲಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಗಸ್ಟ್ 27ರಿಂದ 3 ವಾರಗಳ ಐಪಿಎಲ್ ತರಬೇತಿ ಆರಂಭಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications