ವಿರಾಟ್- ಅನುಷ್ಕಾ ಮದುವೆಗೆ ಬಿಸಿಸಿಐ ಪೌರೋಹಿತ್ಯ
ಬೆಂಗಳೂರು, ಆ.22: ಇಂಗ್ಲೆಂಡ್ ಪ್ರವಾಸ ನಿರತ ಟೀಂ ಇಂಡಿಯಾ ಆಟಗಾರರ ಕಳಪೆ ಪ್ರದರ್ಶನಕ್ಕೆ ಆಟಗಾರರ ಪತ್ನಿ ಹಾಗೂ ಗೆಳತಿಯ ಸಾಂಗತ್ಯವೇ ಕಾರಣ ಎಂಬುದನ್ನು ಒಪ್ಪಿಕೊಂಡಿದ್ದ ಬಿಸಿಸಿಐ ಈಗ ಭಿನ್ನರಾಗ ಹಾಡಿದೆ.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಮದುವೆಗೆ ಬಿಸಿಸಿಐ ಪೌರೋಹಿತ್ಯ ವಹಿಸಿದಂತೆ ಮಾತನಾಡುತ್ತಿದೆ. ಅವರಿಬ್ಬರು ಮದುವೆಯಾಗುವುದಾಗಿ ಹೇಳಿದರು ಹೀಗಾಗಿ ಅವರನ್ನು ಒಟ್ಟಿಗೆ ಇರಲು ಬಿಟ್ಟೆವು ಎಂಉದ್ ಬಿಸಿಸಿಐ ಸ್ಪಷ್ಟನೆ ನೀಡಿದೆ. ಅವರಿಬ್ಬರು ಮದುವೆಯಾಗಲಿದ್ದಾರೆ, ಒಟ್ಟಿಗೆ ತಿರುಗುವುದರಲ್ಲಿ ತಪ್ಪೇನಿದೆ. ಅವರನ್ನು ಅವರ ಪಾಡಿಗೆ ಇರಲು ಬಿಡಿ' ಎಂದು ಬಿಸಿಸಿಐ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.
ಆಟಗಾರರೊಂದಿಗೆ ಅವರ ಪತ್ನಿ ಅಥವಾ ಗೆಳತಿಯರು ಪ್ರಯಾಣಿಸಬಹುದು ಎಂಬ ಬಿಸಿಸಿಐ ನಿರ್ಧಾರಕ್ಕೆ ತಂಡದ ಮ್ಯಾನೇಜ್‌ಮೆಂಟ್ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು. ಪ್ರಮುಖವಾಗಿ ವಿರಾಟ್ ಕೊಹ್ಲಿ ಅವರೊಂದಿಗೆ ಪ್ರಯಾಣಿಸಲು ಅನುಷ್ಕಾ ಅವರಿಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿದ್ದರ ಬಗ್ಗೆ ಭಿನ್ನಾಭಿಪ್ರಾಯಗಳಿತ್ತು ನಿಜ. ಅದರೆ, ಈಗ ಬಿಸಿಸಿಐ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದೆ.

ಬಿಸಿಸಿಐ ಆಡಳಿತ ಮಂಡಳಿ ಅಭಿಪ್ರಾಯ
ಈ ಬಗ್ಗೆ ತನ್ನ ಅಭಿಪ್ರಾಯ ತಿಳಿಸಿರುವ ಬಿಸಿಸಿಐ ಆಡಳಿತ ಮಂಡಳಿ, ಆಟಗಾರರೊಂದಿಗೆ ಅವರ ಜತೆಗಾರ್ತಿಯರು ತೆರಳುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಹಲವು ಆಟಗಾರರು ಮತ್ತು ನಾಯಕರು ವಿದೇಶಿ ಪ್ರವಾಸಕ್ಕೆ ತಮ್ಮ ಗೆಳತಿಯರನ್ನು ಕರೆದೊಯ್ದಿದ್ದರು. ವಿರಾಟ್ ಮತ್ತು ಅನುಷ್ಕಾ ಶೀಘ್ರದಲ್ಲಿಯೇ ಮದುವೆಯಾಗುತ್ತಿದ್ದು, ಅವರಿಬ್ಬರು ಒಟ್ಟಿಗೆ ತಿರುಗಾಡುವುದರಲ್ಲಿ ತಪ್ಪಿಲ್ಲ. ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದೆ.

ಕೊಹ್ಲಿ ಬಗ್ಗೆ ಟೀಕೆಗಳ ಸುರಿಮಳೆ
ಪ್ರಮುಖವಾಗಿ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಪ್ರಮುಖ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಅವರ ಕಳಪೆ ಪ್ರದರ್ಶನ ಕ್ರಿಕೆಟ್ ಪ್ರೇಮಿಗಳು ಸೇರಿದಂತೆ ಮಾಜಿ ಕ್ರಿಕೆಟಿಗರ ಕೆಂಣ್ಣಿಗೆ ಗುರಿಯಾಗಿದೆ. ಟೆಸ್ಟ್‌ನಲ್ಲಿ ಧೋನಿ ನಾಯಕತ್ವವನ್ನು ಪ್ರಶ್ನಿಸುತ್ತಿರುವ ಟೀಕಾಕಾರರು, ವಿರಾಟ್ ಕೊಹ್ಲಿ ಕುರಿತಾಗಿ ಅವರ ನೂತನ ಸಂಬಂಧದ ಬಗ್ಗೆ ಕಿಡಿಕಾರಿದ್ದಾರೆ. [ಧೋನಿ ಹುಡ್ಗರು 'ಕಟುಕನ ಮುಂದೆ ಕುರಿಯಂತೆ']

ಮೋಜು ಮಸ್ತಿಯಲ್ಲಿ ತೊಡಗಿ ಶಕ್ತಿ ವ್ಯಯ
ಬ್ಯಾಟಿಂಗ್ ಆಧಾರ ಎನಿಸಿದ್ದ ವಿರಾಟ್ ಕೊಹ್ಲಿ ಅವರು ಟೆಸ್ಟ್ ಸರಣಿಯಲ್ಲಿ 10 ಇನ್ನಿಂಗ್ಸ್ ನಲ್ಲಿ ಕೇವಲ 134 ರನ್ ಗಳಿಸಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಆಟದ ಕಡೆ ಹೆಚ್ಚು ಗಮನ ಹರಿಸದ ಕೊಹ್ಲಿ ಅನುಷ್ಕಾ ಗುಂಗಲ್ಲೇ ಇಂಗ್ಲೆಂಡ್ ಪ್ರವಾಸ ಕಳೆದು, ತಡರಾತ್ರಿವರೆಗೂ ಸುತ್ತಾಟ, ಮೋಜು ಮಸ್ತಿಯಲ್ಲಿ ತೊಡಗಿ ಶಕ್ತಿ ವ್ಯಯ ಮಾಡಿಕೊಂಡ ಕೊಹ್ಲಿಗೆ ಪಂದ್ಯದ ದಿನ ಬೆಳಗ್ಗೆ ಮೈದಾನದಲ್ಲಿ ಏಕಾಗ್ರತೆಯಿಂದ ಚೆಂಡು ಎದುರಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬ ಮಾತು ಕೇಳಿ ಬಂದಿದೆ. [ಹೆಣ್ಣಿನ ಮೋಹ, ಕ್ರಿಕೆಟರ್ಸಲ್ಲಿ ಕಾಣದ ರನ್ ದಾಹ! ]

ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಕೆ
ಫುಟ್ಬಾಲ್ ಆಟವಾದರೆ ಕೆಲ ಗಂಟೆಗಳಲ್ಲಿ ಮುಗಿದು ಹೋಗುತ್ತದೆ. ಟೆಸ್ಟ್ ಕ್ರಿಕೆಟ್ ಆಡುವಾಗ ಹೆಚ್ಚು ಕಾಲ ಕ್ರೀಸ್ ನಲ್ಲಿರಬೇಕಾಗುತ್ತದೆ. ಇದಕ್ಕೆ ಕಠಿಣ ಅಭ್ಯಾಸ, ಜಿಮ್, ನೆಟ್ ಪ್ರಾಕ್ಟ್ರೀಸ್ ಅಗತ್ಯ. ಆದರೆ, ಗೆಳತಿಯರೊಡನೆ ಹೆಚ್ಚು ಕಾಲ ಕಳೆಯುವಾಗ ಅದು ದೈಹಿಕವಾಗಿ ಮಾನಸಿಕವಾಗಿ ಕ್ರಿಕೆಟರ್ಸ್ ರನ್ನು ಕುಗ್ಗಿಸುತ್ತದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications