ವಿದೇಶದಲ್ಲಿ ಪ್ರವಾಸ : ಪತ್ನಿ ಕರೆದೊಯ್ಯುವ ಅನುಮತಿ ಕೋರಿದ ಕೊಹ್ಲಿ

ನವದೆಹಲಿ, ಅಕ್ಟೋಬರ್ 07: ವಿದೇಶ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಆಟಗಾರರು ತಮ್ಮ ಪತ್ನಿ/ಗೆಳೆತಿಯರನ್ನು ಜೊತೆಗೆ ಕರೆದೊಯ್ಯಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನುಮತಿ ನೀಡಿಲ್ಲ. ಈ ನಿಯಮ ಬದಲಾಯಿಸುವಂತೆ ನಾಯಕ ವಿರಾಟ್ ಕೊಹ್ಲಿ ಅವರು ಬಿಸಿಸಿಐಯನ್ನು ಕೋರಿದ್ದಾರೆ.
ವಿದೇಶಗಳಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಯಲ್ಲಿ ಆಟಗಾರರ ಪತ್ನಿಯರು ಟೂರ್ನಿಯ ಸಂಪೂರ್ಣ ಅವಧಿಯವರೆಗೆ ಉಳಿಯಲು ಅವಕಾಶ ಮಾಡಿಕೊಡಿ ಎಂದು ಬೇಡಿಕೆ ಮುಂದಿಟ್ಟಿದ್ದಾರೆ.
ಇಂಡಿಯನ್ ಎಕ್ಸ್ ಪ್ರೆಸ್ ವರದಿಯಂತೆ, ಸುಪ್ರೀಂ ಕೋರ್ಟ್ ನೇಮಿಸಿರುವ ವಿನೋದ್ ರಾಯ್ ಹಾಗೂ ಡಯಾನ ಎಡುಲ್ಜಿ ನೇತೃತ್ವದ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ (ಸಿಒಎ) ಮುಂದೆ ಇಂಥದ್ದೊಂದು ಮನವಿ ಬಂದಿದೆ.
ಸದ್ಯ ಹಳೆಯ ನಿಯಮವೇ ಮುಂದುವರಿಯುತ್ತದೆ. ಈ ಬಗ್ಗೆ ಟೀಂ ಮ್ಯಾನೇಜರ್ ಸುನೀಲ್ ಸುಬ್ರಮಣಿಯನ್ ಅವರು ಅಧಿಕೃತವಾಗಿ ಮನವಿ ಸಲ್ಲಿಸಿದ ಬಳಿಕ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಭಾರತ ತಂಡದ ಆಟಗಾರರ ಪತ್ನಿಯರು ಅಥವಾ ಗರ್ಲ್ ಫ್ರೆಂಡ್ಸ್ ವಿದೇಶಿ ಟೂರ್ನಿಗಳಲ್ಲಿ ಕೇವಲ ಎರಡು ವಾರ ಅವರ ಜತೆ ಉಳಿದುಕೊಳ್ಳಬಹುದು ಎಂದು ಬಿಸಿಸಿಐ ವರ್ಷದ ಆರಂಭದಲ್ಲಿ ತಿಳಿಸಿತ್ತು.
ಆದರೆ, ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮ ಅವರು ಬಹುತೇಕ ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದಾರೆ.
ತವರಿನಲ್ಲಿ ವೆಸ್ಟ್ ಇಂಡೀಸ್ ಸರಣಿ ನಂತರ ನವೆಂಬರ್ ತಿಂಗಳಿನಲ್ಲಿ ಟೀಂ ಇಂಡಿಯಾವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications