ಶನಿವಾರ, ಮೇ 18ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ 2024ರ ಹೈ-ವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್‌ಗಳಿಂದ ಸೋಲಿಸಿತು.
ನಿರ್ಣಾಯಕ ಪಂದ್ಯದ ವೇಳೆ ಆರ್‌ಸಿಬಿ ಸಹ-ಮಾಲೀಕರು, ಸ್ಮೃತಿ ಮಂಧಾನ ಮತ್ತು ಅನುಷ್ಕಾ ಶರ್ಮಾ ಅವರಂತಹ ದೊಡ್ಡ ಹೆಸರುಗಳೊಂದಿಗೆ ಆರ್‌ಸಿಬಿ ಮಾಜಿ ಲೆಜೆಂಡ್ ಕ್ರಿಸ್ ಗೇಲ್ ಸ್ಟ್ಯಾಂಡ್‌ನಲ್ಲಿ ಹಾಜರಿದ್ದರು.

ಪಂದ್ಯದ ಬಳಿಕ ಆರ್‌ಸಿಬಿ ಡ್ರೆಸ್ಸಿಂಗ್ ರೂಮ್‌ಗೆ ಪ್ರವೇಶಿಸಿದ ನಂತರ, ಮುಂದಿನ ವರ್ಷ 2025ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಇಂಪ್ಯಾಕ್ಟ್ ಪ್ಲೇಯರ್ ಆಗಿ ಮರಳಲು ಕ್ರಿಸ್ ಗೇಲ್ ಅವರನ್ನು ವಿರಾಟ್ ಕೊಹ್ಲಿ ಸಂತೋಷದಿಂದ ಕೇಳಿಕೊಂಡರು.
ಆರ್‌ಸಿಬಿ ಐಪಿಎಲ್ 2024ರ ಪ್ಲೇಆಫ್‌ಗೆ ಪ್ರವೇಶಿಸಿದ ನಂತರ, ಕ್ರಿಸ್ ಗೇಲ್ ಅವರು ತಮ್ಮ ಮಾಜಿ ತಂಡದ ಆಟಗಾರರನ್ನು ಅಭಿನಂದಿಸಲು ಆರ್‌ಸಿಬಿ ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ನೀಡಿದರು. ಆಟಗಾರರು ಯೂನಿವರ್ಸ್ ಬಾಸ್ ಅನ್ನು ನೋಡಿ ಸಂತೋಷಪಟ್ಟರು.
ಈ ಸಂತೋಷದ ವಾತಾವರಣಕ್ಕೆ ಸ್ವಲ್ಪ ಹಾಸ್ಯವನ್ನು ಸೇರಿಸಿದ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ, ಮುಂದಿನ ಅವೃತ್ತಿಯಲ್ಲಿ ಕ್ರಿಸ್ ಗೇಲ್ ಅವರನ್ನು ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲು ಸ್ಟಾರ್ ಬ್ಯಾಟರ್ ವಿನಂತಿಸಿದರು.

"ಕಾಕಾ, ಮುಂದಿನ ವರ್ಷ ಆರ್‌ಸಿಬಿ ಮರಳಿ ಬನ್ನಿ. ಇಂಪ್ಯಾಕ್ಟ್ ಪ್ಲೇಯರ್ ಈಗ ಆನ್ ಆಗಿದೆ. ನೀವು ಇನ್ನು ಮುಂದೆ ಫೀಲ್ಡಿಂಗ್ ಮಾಡಬೇಕಾಗಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಅನ್ನು ನಿಮಗಾಗಿ ವಿನ್ಯಾಸಗೊಳಿಸಲಾಗಿದೆ," ಎಂದು ವಿರಾಟ್ ಕೊಹ್ಲಿ ಹೇಳಿರುವ ವಿಡಿಯೋ ಅನ್ನು ಆರ್‌ಸಿಬಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ.
ಇದೇ ವೇಳೆ ಈ ಅವೃತ್ತಿ ತಾನು 37 ಸಿಕ್ಸರ್ ಬಾರಿಸಿದ್ದೇನೆ ಎಂದು ಕ್ರಿಸ್ ಗೇಲ್‌ಗೆ ವಿರಾಟ್ ಕೊಹ್ಲಿ ನೆನಪಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದ ನಂತರ, ಸದ್ಯ ನಡೆಯುತ್ತಿರುವ ಟೂರ್ನಿಯಲ್ಲಿ ಹೆಚ್ಚು ಸಿಕ್ಸ್ ಹಿಟ್ಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಹೋಗಿದ್ದರು.
35 ವರ್ಷದ ವಿರಾಟ್ ಕೊಹ್ಲಿ ಆಡಿದ 14 ಪಂದ್ಯಗಳಲ್ಲಿ 37 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ ಮತ್ತು 64.36ರ ಸರಾಸರಿ ಮತ್ತು 155.60 ಸ್ಟ್ರೈಕ್ ರೇಟ್‌ನೊಂದಿಗೆ 708 ರನ್ ಗಳಿಸಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಅಭಿಷೇಕ್ ಶರ್ಮಾ ಅವರು ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದರು.
ಭಾನುವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 6 ಸಿಕ್ಸರ್ ಬಾರಿಸಿದ್ದಾರೆ ಮತ್ತು ಪ್ರಸ್ತುತ 13 ಪಂದ್ಯಗಳಿಂದ 41 ಸಿಕ್ಸರ್ ಸಿಡಿಸಿದ್ದಾರೆ.
ಯೂನಿವರ್ಸ್ ಬಾಸ್ ಕ್ರಿಸ್ ಗೇಲ್‌ಗೆ ಸಂಬಂಧಿಸಿದಂತೆ, ಅವರು ಆರ್‌ಸಿಬಿ ಫ್ರಾಂಚೈಸಿಗೆ ಬರುವ ಮುನ್ನ ಕೆಕೆಆರ್ ತಂಡಕ್ಕಾಗಿ ಆಡುವ ಮೂಲಕ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ಬಳಿಕ ಪಂಜಾಬ್ ಕಿಂಗ್ಸ್ ತಂಡಕ್ಕಾಗಿ ಎರಡು ಆವೃತ್ತಿಗಳನ್ನು ಆಡುವ ಮೂಲಕ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು.
ಕ್ರಿಸ್ ಗೇಲ್ ಪ್ರಸ್ತುತ ಐಪಿಲ್‌ನಲ್ಲಿ ಆರ್‌ಸಿಬಿ ಪರ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 91 ಪಂದ್ಯಗಳಿಂದ 43.29ರ ಸರಾಸರಿಯಲ್ಲಿ 3420 ರನ್ ಗಳಿಸಿದ್ದಾರೆ. 5 ಶತಕಗಳು ಮತ್ತು 21 ಅರ್ಧ ಶತಕಗಳೊಂದಿಗೆ 154.40 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ, ಮೇ 22ರಂದು ಎಲಿಮಿನೇಟರ್‌ನಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಆರ್‌ಸಿಬಿ ಮುಂದಿನ ಪಂದ್ಯವನ್ನು ಆಡಲಿದೆ.