Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್-ಬಾಬರ್ ಹೋಲಿಕೆ ಸಂಪೂರ್ಣ ಅರ್ಥಹೀನ; ಮಾಜಿ ಕ್ರಿಕೆಟಿಗ

ವಿಶ್ವ ಕ್ರಿಕೆಟ್‌ನಲ್ಲಿ ಆಟಗಾರರ ನಡುವೆ ಯಾವಾಗಲೂ ಹೋಲಿಕೆ ಇರುತ್ತದೆ. ಈ ಹಿಂದೆ ಟೀಮ್ ಇಂಡಿಯಾ ದಿಗ್ಗಜ ಬ್ಯಾಟರ್‌ ಸಚಿನ್ ತೆಂಡೂಲ್ಕರ್ ಅವರನ್ನು ವೆಸ್ಟ್‌ ಇಂಡೀಸ್‌ನ ಬ್ರಿಯಾನ್ ಲಾರಾ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ಪಾಕಿಸ್ತಾನದ ಇಂಜಮಾಮ್ ಉಲ್ ಹಕ್ ಅವರೊಂದಿಗೆ ಹೋಲಿಸಲಾಗಿತ್ತು.

ಈಗ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಇಂಗ್ಲೆಂಡ್‌ನ ಜೋ ರೂಟ್, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಮತ್ತು ಪಾಕಿಸ್ತಾನದ ಬಾಬರ್ ಅಜಮ್‌ಗೆ ಹೋಲಿಸಲಾಗುತ್ತದೆ. ಅದರಲ್ಲೂ ಕೊಹ್ಲಿ ಮತ್ತು ಬಾಬರ್ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿರುತ್ತವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪೈಪೋಟಿಯೇ ಇದಕ್ಕೆ ಮುಖ್ಯ ಕಾರಣ.

80 31 2025 20 20

ಕೊಹ್ಲಿ ಜೊತೆಗೆ ಬಾಬರ್ ಹೋಲಿಕೆ ಮಾಡುವುದು ಅಸಂಬದ್ಧ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಹೀರ್ ಅಬ್ಬಾಸ್ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ತಮ್ಮ ದೇಶದ ಆಟಗಾರರನ್ನು ಬಿಟ್ಟು ವಿರಾಟ್ ಕೊಹ್ಲಿಯನ್ನು ಹೊಗಳಿದ್ದಾರೆ. ಈ ಹಿಂದೆಯೂ ಹಲವು ಪಾಕಿಸ್ತಾನ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿಗೆ ಬಾಬರ್ ಅಜಮ್ ಸರಿಸಾಟಿ ಅಲ್ಲವೇ ಅಲ್ಲ ಎಂದು ಸಷ್ಟಪಡಿಸಿದ್ದಾರೆ.

ರನ್ ಗಳಿಸುವವನು ದೊಡ್ಡ ಆಟಗಾರ

ಒಂದು ಕಾಲದಲ್ಲಿ ಅಬ್ಬರಿಸಿದ ಬಾಬರ್ ಈಗ ಕಳಪೆ ಫಾರ್ಮ್‌ ಸಮಸ್ಯೆಯಿಂದ ರನ್ ಗಳಿಸಲು ಹೋರಾಡುತ್ತಿದ್ದಾರೆ. ಆದರೆ ಕೊಹ್ಲಿ ನಿರಂತರವಾಗಿ ರನ್ ಗಳಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನೀವು ಹೇಗೆ ಕೊಹ್ಲಿಯೊಂದಿಗೆ ಬಾಬರ್ ನನ್ನು ಹೋಲಿಸಬಹುದು? ರನ್ ಗಳಿಸುವವನು ದೊಡ್ಡ ಆಟಗಾರ ಎಂದು ಜಹೀರ್ ಅಬ್ಬಾಸ್ ಹೇಳಿದ್ದಾರೆ. ಮೂರು ಮಾದರಿ ಕ್ರಿಕೆಟ್‌ನಲ್ಲಿ ಕೊಹ್ಲಿ ಒಟ್ಟು 80 ಶತಕಗಳನ್ನು ಬಾರಿಸಿದ್ದಾರೆ. ಬಾಬರ್ ಕೇವಲ 31 ಶತಕಗಳನ್ನು ಹೊಂದಿದ್ದಾರೆ.

ಟೀಮ್‌ ಇಂಡಿಯಾ ಪ್ರಬಲ ಸ್ಪರ್ಧಿ

ಟೀಮ್ ಇಂಡಿಯಾವನ್ನು ಶ್ಲಾಘಿಸಿರುವ ಅಬ್ಬಾಸ್, 'ಭಾರತ ಮೂರು ಮಾದರಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಮುಂಬರುವ 2025ರ ಚಾಂಪಿಯನ್ಸ್ ಟ್ರೋಫಿಗೆ ಪ್ರಬಲ ಸ್ಪರ್ಧಿಯಾಗಿದೆ. ಭಾರತ ತಂಡ ಅದ್ಭುತವಾಗಿದೆ. ತಂಡದಲ್ಲಿನ ಬ್ಯಾಟರ್‌ಗಳು ಮತ್ತು ಬೌಲರ್‌ಗಳು ಉತ್ತಮವಾಗಿ ಆಡುತ್ತಿದ್ದಾರೆ. ಇದು ಅತ್ಯಂತ ಸಮತೋಲಿತ ತಂಡವಾಗಿದ್ದು, ಹೊಂದಾಣಿಯಿಂದ ಆಡುತ್ತಿದೆ. ಟೀಮ್ ಇಂಡಿಯಾ ಆಟಗಾರರು ಕ್ರಿಕೆಟ್ ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಉತ್ತಮ ನಾಯಕನನ್ನು ಹೊಂದಿದ್ದಾರೆ. ಎಲ್ಲವೂ ಅನುಕೂಲಕರವಾಗಿದ್ದರೆ, ಕೆಲಸವು ಸುಲಭವಾಗಬಹುದು. ಅದು ಭಾರತದಂತೆಯೇ ಇರುತ್ತದೆ ಎಂದು ಟೀಮ್ ಇಂಡಿಯಾ ಬಗ್ಗೆ ಪಾಕ್ ಮಾಜಿ ಆಟಗಾರ ಗುಣಗಾನ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್ ಮುಖ್ಯ

ಟೆಸ್ಟ್ ಮಾದರಿಯ ಆಟ ನಿಜವಾದ ಕ್ರಿಕೆಟ್. ಇದು ಆಟಗಾರನ ಕೌಶಲ್ಯದ ನಿಜವಾದ ಪರೀಕ್ಷೆಯಾಗಿದೆ. ಭಾರತ ಮತ್ತು ಪಾಕಿಸ್ತಾನ ಉತ್ತಮ ಟೆಸ್ಟ್ ತಂಡಗಳನ್ನು ಹೊಂದಿದ್ದ ಸಮಯವಿತ್ತು. ಟೆಸ್ಟ್ ಇಲ್ಲದೆ ಕ್ರಿಕೆಟ್ ನಡೆಯುವುದಿಲ್ಲ ಎಂಬುದನ್ನು ಎಲ್ಲಾ ಮಂಡಳಿಗಳು ಈಗ ಅರಿತುಕೊಂಡಿವೆ. ನೀವು ಎಷ್ಟೇ ಟಿ20 ಅಥವಾ ಏಕದಿನ ಪಂದ್ಯಗಳನ್ನು ಆಡಿದರೂ ಒಂದು ಟೆಸ್ಟ್ ಆಡಲೇಬೇಕು. ಟೆಸ್ಟ್ ಕ್ರಿಕೆಟ್ ಸರ್ವಶ್ರೇಷ್ಠ. ಟಿ20ಯಲ್ಲಿ ಯಾರು ಬೇಕಾದರೂ ಗೆಲ್ಲಬಹುದು. ಆದರೆ ಇದು ಟೆಸ್ಟ್‌ನಲ್ಲಿ ಆಗುವುದಿಲ್ಲ. ಆಟಗಾರರಿಗೆ ಟೆಸ್ಟ್ ಕ್ರಿಕೆಟ್ ಬಹಳಷ್ಟು ಕಲಿಸುತ್ತದೆ ಎಂದು ಅಬ್ಬಾಸ್ ತಿಳಿಸಿದ್ದಾರೆ.

Story first published: Tuesday, October 1, 2024, 8:29 [IST]
Other articles published on Oct 1, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+