For Quick Alerts
ALLOW NOTIFICATIONS  
For Daily Alerts
 

ಸಾಲು ಸಾಲು ದಾಖಲೆ ಬರೆದು ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ!

Virat Kohli becomes first Indian captain to score 40 international hundreds

ಪುಣೆ, ಅಕ್ಟೋಬರ್ 12: ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಲು ಸಾಲು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ ಅಪರೂಪದ ದಾಖಲೆಗಳಿಗಾಗಿ ಕೊಹ್ಲಿ ಇತಿಹಾಸದ ಪುಟ ಸೇರಿದ್ದಾರೆ ಕೂಡ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 11) ನಡೆದ ದ್ವಿತೀಯ ಟೆಸ್ಟ್‌ನ ದ್ವಿತೀಯ ದಿನದಾಟದಲ್ಲಿ ಕೊಹ್ಲಿ ದ್ವಿಶತಕ ಬಾರಿಸಿ ಹಲವಾರು ದಾಖಲೆಗಳನ್ನು ಬದಿಗೆ ಸರಿಸಿದ್ದಾರೆ.

ಭಾರತ vs ದಕ್ಷಿಣ ಆಫ್ರಿಕಾ, 2ನೇ ಟೆಸ್ಟ್‌, Live ಸ್ಕೋರ್‌ಕಾರ್ಡ್

1
46114

ಭಾರತದ ಬ್ಯಾಟ್ಸ್‌ಮನ್‌ಗಳ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 601 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದೆ.

26ನೇ ಟೆಸ್ಟ್‌ ಶತಕ

26ನೇ ಟೆಸ್ಟ್‌ ಶತಕ

ಪುಣೆ ಪಂದ್ಯದಲ್ಲಿ 336 ಎಸೆತಗಳಿಗೆ ಅಜೇಯ 254 ರನ್ ಬಾರಿಸಿದ ವಿರಾಟ್ ಕೊಹ್ಲಿ ತನ್ನ 26ನೇ ಟೆಸ್ಟ್‌ ಶತಕ ಪೂರೈಸಿಕೊಂಡಿದ್ದಾರೆ. ಅಲ್ಲದೇ 7ನೇ ಬಾರಿಗೆ 200 ರನ್ ಸಾಧನೆ ತೋರಿಕೊಂಡಿದ್ದಾರೆ. ಇದೇ ಪಂದ್ಯದಲ್ಲಿ ಕೊಹ್ಲಿ ಟೆಸ್ಟ್‌ನಲ್ಲಿ 7,000 (7054) ರನ್ ಮೈಲಿಗಲ್ಲೂ ಸ್ಥಾಪಿಸಿದ್ದಾರೆ.

40 ಅಂತಾರಾಷ್ಟ್ರೀಯ ಶತಕಗಳು

40 ಅಂತಾರಾಷ್ಟ್ರೀಯ ಶತಕಗಳು

ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 40ನೇ ಶತಕ ದಾಖಲಿಸಿದ ಮೊದಲ ಭಾರತೀಯ ಎಂಬ ದಾಖಲೆಗೂ ಕೊಹ್ಲಿ ಕಾರಣರಾಗಿದ್ದಾರೆ. ಇದರಲ್ಲಿ ಕೊಹ್ಲಿ ಟೀಮ್ ಇಂಡಿಯಾದ ನಾಯಕನಾಗಿ ಗಳಿಸಿದ ಟೆಸ್ಟ್ ಶತಕಗಳು ಒಟ್ಟು 19. ಇನ್ನು ಏಕದಿನದಲ್ಲಿ ಈಗಾಗಲೇ 21 ಶತಕಗಳ ದಾಖಲೆ ಕೊಹ್ಲಿ ಹೊಂದಿದ್ದಾರೆ.

ಪಾಂಟಿಂಗ್ ಬೆನ್ನಲ್ಲಿ ಕೊಹ್ಲಿ

ಪಾಂಟಿಂಗ್ ಬೆನ್ನಲ್ಲಿ ಕೊಹ್ಲಿ

ನಾಯಕನಾಗಿ ಅತೀ ಹೆಚ್ಚು ಅಂತಾರಾಷ್ಟ್ರೀಯ ಶತಕಗಳ ದಾಖಲೆ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಹೆಸರಿನಲ್ಲಿದೆ. ನಾಯಕರಾಗಿದ್ದ ಪಾಂಟಿಂಗ್ ಒಟ್ಟು 41 ಶತಕಗಳನ್ನು ಬಾರಿಸಿದ್ದರು. ಆದರೆ ರಿಕಿ ಟಿ20ಯಲ್ಲಿ ಒಂದೂ ಶತಕ ಬಾರಿಸಿಲ್ಲ, ಇತ್ತ ಕೊಹ್ಲಿ ಕೂಡ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಶತಕ ಬಾರಿಸಿಲ್ಲ.

ಬ್ರಾಡ್‌ಮನ್ ದಾಖಲೆ ಪತನ

ಬ್ರಾಡ್‌ಮನ್ ದಾಖಲೆ ಪತನ

ಆಸ್ಟ್ರೇಲಿಯಾದ ಕ್ರಿಕೆಟ್ ದಂತಕತೆ ಡಾನ್ ಬ್ರಾಡ್‌ಮನ್ ದಾಖಲೆಯೊಂದನ್ನು ಕೊಹ್ಲಿ ಸರಿಗಟ್ಟಿದ್ದಾರೆ. 8 ಬಾರಿ 150+ ರನ್‌ ಬಾರಿಸಿದ ದಾಖಲೆ ಈ ಮೊದಲು ಬ್ರಾಡ್‌ಮನ್ ಮತ್ತು ಕೊಹ್ಲಿ ಹೆಸರಿನಲ್ಲಿತ್ತು. ಆದರೆ ಪುಣೆಯಲ್ಲಿ ಕೊಹ್ಲಿ 9ನೇ ಬಾರಿಗೆ 150+ ರನ್ ಬಾರಿಸಿ ಬ್ರಾಡ್‌ಮನ್ ದಾಖಲೆ ಸರಿಗಟ್ಟಿದ್ದಾರೆ.

ವೇಗದಲ್ಲಿ 26 ಟೆಸ್ಟ್ ಶತಕ

ವೇಗದಲ್ಲಿ 26 ಟೆಸ್ಟ್ ಶತಕ

ಟೆಸ್ಟ್‌ನಲ್ಲಿ ವೇಗದ 26 ಶತಕ ಬಾರಿಸಿದ ವಿಶ್ವದ ಆಟಗಾರರಲ್ಲಿ ಕೊಹ್ಲಿ 4ನೆಯವರಾಗಿ ಗುರುತಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಡಾನ್ ಬ್ರಾಡ್‌ಮನ್ (69 ಇನ್ನಿಂಗ್ಸ್‌), ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (121 ಇನ್ನಿಂಗ್ಸ್‌), ಭಾರತ ಸಚಿನ್ ತೆಂಡೂಲ್ಕರ್ (136 ಇನ್ನಿಂಗ್ಸ್‌) ಮತ್ತು ಕೊಹ್ಲಿ (138 ಇನ್ನಿಂಗ್ಸ್‌) ಈ ಯಾದಿಯಲ್ಲಿದ್ದಾರೆ.

ಗಂಗೂಲಿ ದಾಖಲೆ ಬದಿಗೆ

ಗಂಗೂಲಿ ದಾಖಲೆ ಬದಿಗೆ

ಟೆಸ್ಟ್‌ ಕ್ರಿಕೆಟ್‌ನಲ್ಲಿ 50 ಪಂದ್ಯಗಳಲ್ಲಿ ಟೀಮ್ ಇಂಡಿಯಾಕ್ಕೆ ನಾಯಕತ್ವ ವಹಿಸಿದ್ದರಿಂದ ಮಾಜಿ ನಾಯಕ ಸೌರವ್ ಗಂಗೂಲಿ ಹೆಸರಿನಲ್ಲಿದ್ದ ದಾಖಲೆ ಬದಿಗೆ ಸರಿದಿದೆ. ಗಂಗೂಲಿ 49 ಟೆಸ್ಟ್‌ ಪಂದ್ಯಗಳಿಗೆ ನಾಯಕತ್ವ ವಹಿಸಿದ್ದರು. ಈ ಯಾದಿಯಲ್ಲಿ ಮೊದಲ ಸ್ಥಾನದಲ್ಲಿರುವ ಎಂಎಸ್ ಧೋನಿ 60 ಟೆಸ್ಟ್‌ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ.

Story first published: Friday, October 11, 2019, 23:50 [IST]
Other articles published on Oct 11, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+