ರೊನಾಲ್ಡೋ, ಮೆಸ್ಸಿ, ನೇಮರ್‌ನಂತೆ ವಿಶಿಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ!

ನವದೆಹಲಿ: ಆಧುನಿಕ ಕ್ರಿಕೆಟ್ ದಿನಗಳಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶಿಷ್ಠ ದಾಖಲೆಗಾಗಿ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅತ್ಯಧಿಕ ಹಿಂಬಾಲಕರನ್ನು ಹೊಂದಿರುವ ವಿಶ್ವದ ಕೆಲವೇ ಕೆಲವು ಕ್ರೀಡಾಪಟುಗಳಲ್ಲಿ ಒಬ್ಬರಾಗಿ ಕೊಹ್ಲಿ ಗುರುತಿಸಿಕೊಂಡಿದ್ದಾರೆ. ವಿಶ್ವ ಕ್ರೀಡೆಯಲ್ಲಿ ಅತೀ ಹೆಚ್ಚು ಅಭಿಮಾನಿಗಳಿರೋದು ಫುಟ್ಬಾಲ್ ಸ್ಟಾರ್‌ಗಳಿಗೆ. ಕಿಂಗ್ ಕೊಹ್ಲಿಯೀಗ ದಿಗ್ಗಜ ಫುಟ್ಬಾಲಿಗರ ದಾಖಲೆ ಸಾಲಿನಲ್ಲಿದ್ದಾರೆ.
ಫೆಸ್ಬುಕ್, ಟ್ವಿಟರ್‌ನಲ್ಲಿ ಅತ್ಯಧಿಕ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿಗೆ, ಇನ್‌ಸ್ಟಾಗ್ರಾಮ್‌ನಲ್ಲಿ 70 ಮಿಲಿಯನ್ ಫಾಲೋವರ್ಸ್ ಇದ್ದಾರೆ. ವಿಶ್ವದ ಹೆಸರಾಂತ ಕ್ರೀಡಾಪಟುಗಳಲ್ಲಿ ಕೆಲವೇ ಕೆಲವು ಮಂದಿಗಷ್ಟೇ ಇಷ್ಟು ಸಂಖ್ಯೆಯ ಫಾಲೋವರ್ಸ್ ಇದ್ದಾರೆ.
ಅಷ್ಟೇ ಅಲ್ಲ, ಅತೀ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ಭಾರತೀಯ ಟಾಪ್ 10 ಸೆಲೆಬ್ರಿಟಿಗಳಲ್ಲಿ ಸ್ಥಾನ ಗಿಟ್ಟಿಸಿರುವ ಒಬ್ಬನೇ ಕ್ರೀಡಾಪಟುವಾಗಿ ಕೊಹ್ಲಿ ಮಿಂಚಿದ್ದಾರೆ.

ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯ
ದೆಹಲಿಯಲ್ಲಿ ಜನಿಸಿರುವ ಕೊಹ್ಲಿ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಏನೇ ಆಗುಹೋಗುಗಳಿಗೂ ಬೇಗನೆ ಪ್ರತಿಕ್ರಿಯಿಸುತ್ತಾರೆ. ಆಕರ್ಷಕ ಫೋಟೋಗಳು, ವೀಡಿಯೋಗಳನ್ನು ಕೊಹ್ಲಿ ಆಗೀಗ ಹಂಚಿಕೊಳ್ಳುತ್ತಿರುತ್ತಾರೆ. ಹೀಗಾಗಿ ಕೊಹ್ಲಿಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಖ್ಯೆಯ ಹಿಂಬಾಲಕರಿದ್ದಾರೆ.

ವಿಶ್ವದ ಕ್ರೀಡಾಪಟುಗಳಲ್ಲಿ 4ನೇ ಸ್ಥಾನ
ವಿಶ್ವದ ಕ್ರೀಡಾಪಟುಗಳಲ್ಲಿ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವವರಲ್ಲಿ ಕೊಹ್ಲಿಯೀಗ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ರನ್ ಮೆಶೀನ್ ಕೊಹ್ಲಿ ಅವರು ಎನ್‌ಬಿಎ (ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಶನ್) ಆಟಗಾರ, ಅಮೆರಿಕಾದ ಲೆಬ್ರಾನ್ ಜೇಮ್ಸ್ (69 ಮಿಲಿಯನ್ ಫಾಲೋವರ್ಸ್) ಅವರನ್ನು ಹಿಂದಿಕ್ಕಿದ್ದರು.

ಕೊಹ್ಲಿಗಿಂತ ಮುಂದಿರುವವರು
ಕೊಹ್ಲಿಗಿಂತ ಮುಂಚೂಣಿಯಲ್ಲಿರುವ ಪೋರ್ಚುಗಲ್ ಫುಟ್ಬಾಲ್ ಸ್ಟಾರ್ ಕ್ರಿಸ್ಚಿಯಾನೊ ರೊನಾಲ್ಡೋ (232 ಮಿಲಿಯನ್ ಫಾಲೋವರ್ಸ್), ಬಾರ್ಸಿಲೋನಾ ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ (161 ಮಿಲಿಯನ್ ಫಾಲೋವರ್ಸ್) ಮತ್ತು ಬ್ರೆಝಿಲ್ ಫುಟ್ಬಾಲರ್ ನೇಮರ್ (140 ಮಿಲಿಯನ್ ಫಾಲೋವರ್ಸ್) ಅತ್ಯಧಿಕ ಇನ್‌ಸ್ಟಾಗ್ರಾಮ್ ಹಿಂಬಾಲಕರನ್ನು ಹೊಂದಿದ್ದಾರೆ.

ದ್ವಿತೀಯ ಸ್ಥಾನದಲ್ಲಿ ಪ್ರಿಯಾಂಕ
ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಭಾರತೀಯ ಖ್ಯಾತರಲ್ಲಿ ಕೊಹ್ಲಿ ಬಳಿಕ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದ್ದಾರೆ. ಪ್ರಿಯಾಂಕಾಗೆ 55 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಕ್ರಿಯಾಶೀಲವಾಗಿ ಎಡಿಟ್ ಮಾಡಿದ ಪೋಸ್ಟ್‌ಗಳು, ವೀಡಿಯೋಗಳನ್ನು ಕೊಹ್ಲಿ ಪೋಸ್ಟ್ ಮಾಡುತ್ತಿದ್ದರು. ಈ ಪೋಸ್ಟ್‌ಗಳ ಸಂಖ್ಯೆ ಇತ್ತೀಚೆಗಷ್ಟೇ 1000ರ ಗಡಿ ದಾಟಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications