Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಭಾರತದಲ್ಲಿ ಯಾರೂ ಮಾಡದ ದಾಖಲೆ ಮಾಡಿದ ವಿರಾಟ್‌ ಕೊಹ್ಲಿ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್‌ ಟೈಟಾನ್ಸ್‌ (ಜಿಟಿ) ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಆರ್‌ಸಿಬಿ ಸೋಲು ಕಂಡಿತು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಟಾಪ್‌ ಆರ್ಡರ್‌ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ಅಲ್ಲದೆ ಮಧ್ಯಮ ಕ್ರಮಾಂಕದ ಆಟಗಾರರು ಸಹ ಜವಾಬ್ದಾರಿ ಮರೆತರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 28 ರನ್‌ಗಳ ಚಿಕ್ಕ ಇನಿಂಗ್ಸ್ ಕಟ್ಟಿದರು. ಈ ಮೂಲಕ ವಿರಾಟ್‌ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಯಾವೊಬ್ಬ ಬ್ಯಾಟರ್ ಮಾಡದ ಸಾಧನೆಯನ್ನು ಮಾಡಿ ಬೀಗಿದರು.

19ನೇ ಆವೃತ್ತಿ ಐಪಿಎಲ್‌ನ 42ನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 19.2 ಓವರ್‌ಗಳಲ್ಲಿ 155 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗುಜರಾತ್ 15.5 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 158 ರನ್ ಬಾರಿಸಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ವಿರಾಟ್‌ 12 ರನ್ ಬಾರಿಸುತ್ತಿದ್ದಂತೆ ದೊಡ್ಡ ದಾಖಲೆಯನ್ನು ಬರೆದರು.

Virat Kohli

ಕಳೆದ ಪಂದ್ಯದಲ್ಲಿ ಐಪಿಎಲ್‌ನಲ್ಲಿ 9000 ರನ್‌ಗಳ ಗಡಿಯನ್ನು ದಾಟಿದ್ದ ವಿರಾಟ್‌, ಗುರುವಾರ ನಡೆದ ಪಂದ್ಯದಲ್ಲೂ ಮತ್ತೊಂದು ದಾಖಲೆ ಬರೆದರು. ಇವರು ಭಾರತದ ನೆಲದಲ್ಲಿ 8000ಕ್ಕೂ ಹೆಚ್ಚು ರನ್ ಕಲೆ ಹಾಕಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಈ ಮೂಲಕ ಈ ಸಾಧನೆಯನ್ನು ಮಾಡಿದ ಮೊದಲ ಆಟಗಾರ ಎಂಬ ಹಿರಿಮೆ ಸಹ ವಿರಾಟ್ ಅವರದ್ದಾಯಿತು.

ಭಾರತದ ನಡೆದ ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ ಈ ವರೆಗೆ 8,016 ರನ್‌ ಕಲೆ ಹಾಕಿದ್ದಾರೆ. ಈ ಮೂಲಕ ಯಾವೊಬ್ಬ ಬ್ಯಾಟರ್‌ ಮಾಡದ ಸಾಧನೆ ಮಾಡಿ ಬೀಗಿದ್ದಾರೆ. ಭಾರತದಲ್ಲಿ ಎರಡನೇ ಅತಿ ಹೆಚ್ಚು ಐಪಿಎಲ್‌ ರನ್‌ ಕಲೆ ಹಾಕಿದ ಕೀರ್ತಿ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರಿಗೆ ಸಲ್ಲುತ್ತದೆ. ಇವರು ಆಡಿದ 237 ಪಂದ್ಯಗಳಲ್ಲಿ 6,274 ರನ್‌ ಕಲೆ ಹಾಕಿದ್ದಾರೆ.

ಒಟ್ಟಾರೆ ಐಪಿಎಲ್‌ನಲ್ಲಿ ವಿರಾಟ್ ಸಾಧನೆ

ಒಟ್ಟಾರೆ ಐಪಿಎಲ್‌ನಲ್ಲಿ ವಿರಾಟ್‌ ಬ್ಯಾಟಿಂಗ್ ದೈತ್ಯನಂತೆ ಕಂಗೊಳಿಸಿದ್ದಾರೆ. ಇವರ ಸಾಧನೆಯನ್ನು ಶಿಖರವನ್ನು ಏರಲು ಯಾವೊಬ್ಬ ಸಾಧಕನಿಗೂ ಸಾಧಾರಣ ಮಾತು ಅಲ್ಲವೇ ಅಲ್ಲ. ಇವರು ದಕ್ಷಿಣ ಆಫ್ರಿಕಾದಲ್ಲಿ ಆಡಿದ 16 ಪಂದ್ಯಗಳ 13 ಇನಿಂಗ್ಸ್‌ಗಳಲ್ಲಿ 246 ರನ್‌ ಕಲೆ ಹಾಕಿದ್ದಾರೆ. ಇನ್ನು ಯುಎಇನಲ್ಲಿ ಆಡಿದ 28 ಇನಿಂಗ್ಸ್‌ಗಳಲ್ಲಿ 778 ರನ್‌ ಸಿಡಿಸಿದ್ದಾರೆ. ಒಟ್ಟಾರೆ ಐಪಿಎಲ್‌ನಲ್ಲಿ ವಿರಾಟ್ ಆಡಿದ 276 ಪಂದ್ಯಗಳ 268 ಇನಿಂಗ್ಸ್‌ಗಳಲ್ಲಿ 40ರ ಸರಾಸರಿಯಲ್ಲಿ 9040 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 8 ಶತಕ ಹಾಗೂ 66 ಅರ್ಧಶತಕಗಳು ಸೇರಿವೆ. ವಿರಾಟ್‌ 813 ಬೌಂಡರಿ, 306 ಸಿಕ್ಸರ್ ಸಿಡಿಸಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಕೆಲವು ಪಂದ್ಯಗಳು ಉಳಿದಿದ್ದು ವಿರಾಟ್ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದೇ ಕುತೂಹಲ ಮೂಡಿಸಿದೆ.

Story first published: Friday, May 1, 2026, 12:19 [IST]
Other articles published on May 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+