Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಂದು ರನ್ ಪಡೆಯುತ್ತಿದ್ದಂತೆ ಶತಕ ಬಾರಿಸಿದಂತೆ ಸಂಭ್ರಮಿಸಿದ ವಿರಾಟ್: ವಿಡಿಯೊ ವೈರಲ್

ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ರಾಯ್‌ಪುರದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ (ಕೆಕೆಆರ್‌) ವಿರುದ್ಧ ಕಣಕ್ಕೆ ಇಳಿದರು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಕೆಕೆಆರ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 192 ರನ್‌ ಸೇರಿಸಿತು.

ಕೆಕೆಆರ್‌ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಸ್ಟಾರ್ ಆಟಗರ ವಿರಾಟ್ ಕೊಹ್ಲಿ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದವು. ಇವರು ಲೀಗ್‌ ಹಂತದ ಹಿಂದಿನ ಎರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದರು. ಲಕ್ನೋ ಸೂಪರ್ ಜೈಂಟ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ ಖಾತೆ ತೆರೆಯಲು ವಿಫಲರಾಗಿದ್ದರು. ಆದರೆ ಕೆಕೆಆರ್‌ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಸೂಚನೆ ನೀಡಿದರು.

Virat Kohli

ಇನಿಂಗ್ಸ್‌ ಮೊದಲ ಓವರ್‌ ಸೌರಭ್ ದುಬೆ ಮಾಡಿದರು. ಈ ಓವರ್‌ನ ಕೊನೆಯ ಎಸೆತವನ್ನು ಮಿಡ್‌ ವಿಕೆಟ್‌ ಕಡೆಗೆ ತಳ್ಳಿದ ವಿರಾಟ್‌ ಒಂದು ರನ್‌ ಪಡೆದರು. ಇದಾದ ಬಳಿಕ ವಿರಾಟ್ ನಾನ್‌ ಸ್ಟ್ರೈಕ್‌ ಎಂಡಿಗೆ ತಲುಪುತ್ತಿದ್ದಂತೆ ಸಂಭ್ರಮಿಸಿದರು. ಸತತ ಎರಡು ಬಾರಿ ಸೊನ್ನೆ ಸುತ್ತಿದ ಮೇಲೆ ತಮ್ಮ ಮೇಲೆ ಇದ್ದ ಒತ್ತಡವನ್ನು ವಿರಾಟ್‌ ಸಿಂಗಲ್ ಪಡೆದ ಬಳಿಕ ದೂರ ಮಾಡಿದರು.

ವಿರಾಟ್ ಕೊಹ್ಲಿ ಇದೇ ರೀತಿ ಆಸ್ಟ್ರೇಲಿಯಾ ಪ್ರವಾಸದಲ್ಲೂ ನಡೆದ ಏಕದಿನ ಪಂದ್ಯಗಳಲ್ಲೂ ಬ್ಯಾಕ್ ಟು ಬ್ಯಾಕ್ ಸೊನ್ನೆ ಸುತ್ತಿದ್ದರು. ಹೀಗಾಗಿ ಈ ಪ್ರವಾಸದಲ್ಲಿ ನಡೆದಿದ್ದ ಸಿಡ್ನಿ ಪಂದ್ಯದಲ್ಲೂ ವಿರಾಟ್‌ ಅವರ ಮೇಲೆ ಒತ್ತಡವಿತ್ತು. ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್‌ ಒಂದು ರನ್‌ ಪಡೆದು ಸಂಭ್ರಮಿಸಿದರು. ಅಷ್ಟೇ ಅಲ್ಲ ನೆರೆದ ಅಭಿಮಾನಿಗಳು ಸಹ ವಿರಾಟ್ ಅವರನ್ನು ಹುರಿದಿಂಬಿಸಿದ್ದರು.

ರಾಯ್‌ಪುರದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಒಂದು ರನ್ ಪಡೆಯುತ್ತಿದ್ದಂತೆ ಮಾಡಿದ ಸಂಭ್ರಮವನ್ನು, ಸಿಡ್ನಿಯಲ್ಲಿ ಮಾಡಿದ ಸಂಭ್ರಮಕ್ಕೆ ತುಲನೆ ಮಾಡುತ್ತಿದ್ದಾರೆ.

ದೊಡ್ಡ ಮೈಲಿಗಲ್ಲು

ಐಪಿಎಲ್‌ನಲ್ಲಿ ಹಲವು ದಾಖಲೆಗಳಿಗೆ ತಮ್ಮ ಹೆಸರನ್ನು ನಮೂದಿಸಿರುವ ವಿರಾಟ್ ಕೊಹ್ಲಿ ರಾಯ್‌ಪುರ್‌ನಲ್ಲಿ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂಗಳಕ್ಕೆ ಇಳಿಯುತ್ತಿದ್ದಂತೆ ದೊಡ್ಡ ಸಾಧನೆ ಮಾಡಿದರು. ಈ ಮೂಲಕ ವಿರಾಟ್‌ ಕೊಹ್ಲಿ ಧೋನಿ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಇದೇ ಮೈದಾನದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ರೋಹಿತ್, ವಿರಾಟ್‌ ಮೈದಾನಕ್ಕೆ ಇಳಿಯುತ್ತಿದ್ದಂತೆ ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿದ ಹೆಗ್ಗಳಿಕೆ ಹೊಂದಿದ್ದರು. ಈಗ ಈ ದಾಖಲೆ ವಿರಾಟ್ ಕೊಹ್ಲಿ ಅವರದ್ದಾಗಿದೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯ ಆಡಿದ ಪ್ಲೇಯರ್ಸ್‌

1, ವಿರಾಟ್ ಕೊಹ್ಲಿ, 279 ಪಂದ್ಯ
2, ಎಂಎಸ್ ಧೋನಿ, 278 ಪಂದ್ಯ
3, ರೋಹಿತ್ ಶರ್ಮಾ, 278 ಪಂದ್ಯ
4, ರವೀಂದ್ರ ಜಡೇಜ, 265 ಪಂದ್ಯ
5, ದಿನೇಶ್ ಕಾರ್ತಿಕ್, 257 ಪಂದ್ಯ

Story first published: Wednesday, May 13, 2026, 23:27 [IST]
Other articles published on May 13, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+