ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಗೆ ಈ ವಾರ ಸಕತ್ ಶುಭದಾಯಕ

By Mahesh

ಕೊಲಂಬೋ, ಸೆ.03: ಸೋಲಿನ ನಂತರ ಗೆಲುವು ಸಾಧಿಸುವುದು ಅತ್ಯಂತ ಖುಷಿ ಕೊಡುವ ಸಮಾಚಾರ, ಅದರಲ್ಲೂ ಟೆಸ್ಟ್ ಸರಣಿ ಗೆಲ್ಲುವುದು ಕನಸು ನನಸಾಗಿದೆ ಎಂದು ವಿರಾಟ್ ಕೊಹ್ಲಿ ಅವರು ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ನಂತರ ಹೇಳಿದ್ದರು.

ಟೆಸ್ಟ್ ಸರಣಿಯಲ್ಲಿ ನಾಯಕನಾಗಿ, ಬ್ಯಾಟ್ಸ್ ಮನ್ ಆಗಿ ಯಶಸ್ಸುಗಳಿಸಿದ್ದಲ್ಲದೆ, 22 ವರ್ಷಗಳ ಬಳಿಕ ಶ್ರೀಲಂಕಾವನ್ನು ತವರುನೆಲದಲ್ಲೇ ಸೋಲಿಸಿ ಸರಣಿ ಗೆದ್ದ ಕಿರಿಯ ವಯಸ್ಸಿನ ನಾಯಕ ಎಂದು ಕೊಹ್ಲಿ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಐಸಿಸಿ ಪ್ರಕಟಿಸಿರುವ ಟಿ20ಐ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

Virat Kohli becomes No. 1 T20I batsman in the world

ಶ್ರೀಲಂಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ಐದನೇ ದಿನ (ಸೆ.01) ದಂದು ಶ್ರೀಲಂಕಾ ವಿರುದ್ಧ ಭಾರತ 117ರನ್ ಗಳ ಜಯ ದಾಖಲಿಸಿ 2-1 ಅಂತರದಲ್ಲಿ ಸರಣಿ ಜಯ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದಾದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಕಟಿಸಿದ ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಆಟಗಾರ ಅರೋನ್ ಫಿಂಚ್ ರನ್ನು ಕೆಳಕ್ಕೆ ತಳ್ಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟಿ 20 ಪಂದ್ಯವನ್ನು ತಪ್ಪಿಸಿಕೊಂಡ ಫಿಂಚ್, ಶ್ರೇಯಾಂಕ ಪಟ್ಟಿಯಲ್ಲಿ ಕೆಳಗಿಳಿದಿದ್ದಾರೆ. ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ 5 ರನ್ ಗಳ ಜಯ ದಾಖಲಿಸಿತು. ಫಿಂಚ್ 17 ಅಂಕಗಳನ್ನು ಕಳೆದುಕೊಂಡು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ ಎಂದು ಐಸಿಸಿ ಪ್ರಕಟಿಸಿದೆ. ಈ ಸುದ್ದಿಯನ್ನು ಕೇಳಿಸಿಕೊಳ್ಳಿ:

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X