Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ ಹುಟ್ಟುಹಬ್ಬ: ಭಾರತದ ನಾಯಕನಿಗೆ ಶುಭಾಶಯಗಳ ಮಹಾಪೂರ

Virat Kohli Birthday: wishes pour in for Team India captain

ನವದೆಹಲಿ: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ದಾಖಲೆಗಳನ್ನು ಮುರಿಯಲು ಸಾಧ್ಯವಿರುವ ಒಬ್ಬನೇ ಒಬ್ಬ ಬ್ಯಾಟ್ಸ್‌ಮನ್‌ ಅಂದರೆ ಅದು ವಿರಾಟ್ ಕೊಹ್ಲಿ ಎನ್ನುತ್ತಾರೆ ಕ್ರಿಕೆಟ್ ಪರಿಣಿತರು, ಅಭಿಮಾನಿಗಳು. ಕೊಹ್ಲಿಯ ಪರಿಶ್ರಮ, ಕೆಚ್ಚೆದೆಯ ನಡೆ ಅವರನ್ನು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ತಂದು ನಿಲ್ಲಿಸಿದೆ.

ಟೀಮ್ ಇಂಡಿಯಾ ನಾಯಕರಾಗಿರುವ ವಿರಾಟ್ ಕೊಹ್ಲಿ, ನವೆಂಬರ್ 5ರಂದು 32ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಿಶ್ವ ನಂ.1 ಏಕದಿನ ಬ್ಯಾಟ್ಸ್‌ಮನ್ ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಐಪಿಎಲ್‌ ಸಲುವಾಗಿ ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಕೊಹ್ಲಿ ದಂಪತಿ, ಅಲ್ಲೇ ಹುಟ್ಟು ಹಬ್ಬ ಆಚರಿಸಿಕೊಳ್ಳಲಿದೆ.

ವಿರಾಟ್ ಕೊಹ್ಲಿಗೆ ಟ್ವೀಟ್ ಮಾಡಿ ಸುರೇಶ್ ರೈನಾ, ಅಜಿಂಕ್ಯ ರಹಾನೆ, ವಿವಿಎಸ್‌ ಲಕ್ಷ್ಮಣ್, ಅನಿಲ್ ಕುಂಬ್ಳೆ, ಇಶಾಂತ್ ಶರ್ಮಾ, ವೃದ್ಧಿಮಾನ್ ಸಹಾ ಸೇರಿದಂತೆ ಕ್ರಿಕೆಟ್, ಸಿನಿಮಾ ಕ್ಷೇತ್ರಗಳ ಅನೇಕ ತಾರೆಯರು ಟ್ವೀಟ್ ಮಾಡಿದ್ದಾರೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಮತ್ತು ಬಿಸಿಸಿಐ ಟ್ವೀಟ್ ಕೂಡ ಗಮನ ಸೆಳೆಯುತ್ತಿದೆ.

Story first published: Thursday, November 5, 2020, 16:14 [IST]
Other articles published on Nov 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+