
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋಲು ಕಂಡಿದೆ. ಪಂದ್ಯದುದ್ದಕ್ಕೂ ಎಲ್ಲಾ ವಿಭಾಗಗಳಲ್ಲೂ ಶ್ರೇಷ್ಠ ಪ್ರದರ್ಶನವನ್ನು ನೀಡಿದ ಇಂಗ್ಲೆಂಡ್ ಸುಲಭವಾಗಿ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದು ಬೀಗಿತು. ಈ ಮೂಲಕ 1-0 ಅಂತರದಿಂದ ಮುನ್ನಡೆಯನ್ನು ಸಾಧಿಸಿದೆ. ನಾಯಕ ವಿರಾಟ್ ಕೊಹ್ಲಿ ಈ ಸೋಲಿನ ಬಳೀಕ ಪ್ರತಿಕ್ರಿಯಿಸಿದ್ದು ಭಾರತೀಯ ತಂಡದ ಬ್ಯಾಟ್ಸ್‌ಮನ್‌ಗಳನ್ನು ಈ ಸೋಲಿಗೆ ಹೊಣೆ ಎಂದಿದ್ದಾರೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿಸಿದ ಭಾರತ ತಂಡ ಪಿಚ್‌ಅನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಯಿತು. ಈ ಮೂಲಕ ಇಂಗ್ಲೀಷ್ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಲು ಅವಕಾಶವನ್ನು ಮಾಡಿಕೊಟ್ಟರು. ಆರಂಭದಿಂದಲೇ ಆಘಾತವನ್ನು ಪಡೆಯುತ್ತಾ ಸಾಗಿದ ಭಾರತೀಯ ಬ್ಯಾಟಿಂಗ್ ಪಡೆ ನಿರೀಕ್ಷಿತ ಗುರಿಯನ್ನು ನೀಡಲು ವಿಫಲವಾಯಿತು. ಸ್ವತಃ ನಾಯಕ ವಿಋಆಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದಿದ್ದರು.
ಈ ಬಗ್ಗೆ ಪಂದ್ಯ ಮುಕ್ತಾಯದ ನಂತರ ಮಾತನಾಡಿದ ವಿರಾಟ್ ಕೊಹ್ಲಿ "ಇಂತಾ ಪಿಚ್‌ಗಳಲ್ಲಿ ನಾವು ಯಾವ ರೀತಿಯಲ್ಲಿ ಆಡಬೇಕೆಂದು ಅರ್ಥಮಾಡಿಕೊಂಡಿದ್ದು ನಮಗೆ ಸಾಕಾಗಲಿಲ್ಲ. ಕೆಲ ಹೊಡೆತಗಳ ಪ್ರಯೋಗದಲ್ಲಿ ವೈಫಲ್ಯ, ಕೆಟ್ಟ ಹೊಡೆಗಳು ತಂಡದ ಸೋಲಿಗೆ ಕಾರಣವಾಯಿತು" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
"ಅಂಗಳದಲ್ಲಿ ನಮಗೆ ಪೂರಕವಾದ ದಿನ ಇದಾಗಿರಲಿಲ್ಲ. ನಮ್ಮ ತಪ್ಪುಗಳನ್ನು ನಾವು ಒಪ್ಪಿಕೊಳ್ಳಬೇಕು ಮತ್ತು ಮುಂದಿನ ಪಂದ್ಯದಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಬೇಕು ಹಾಗೂ ಯೋಜನೆಗಳ ಬಗ್ಗೆ ಮತ್ತಷ್ಟು ಸ್ಪಷ್ಟತೆಯೊಂದಿಗೆ ಕಣಕ್ಕಿಳಿಯಬೇಕು. ಬಹುಶಃ ಈ ಪಿಚ್ ನೀವು ಬಯಸಿದ ಹೊಡೆತಗಳನ್ನು ಬಾರಿಸಲು ಅವಕಾಶ ನೀಡದು" ಎಂದಿದ್ದಾರೆ ವಿರಾಟ್ ಕೊಹ್ಲಿ.
ಇನ್ನು ಇದೇ ಸಂದರ್ಭದಲ್ಲಿ ಶ್ರೇಯಸ್ ಐಯ್ಯರ್ ಬ್ಯಾಟಿಂಗ್ ಬಗ್ಗೆ ವಿರಾಟ್ ಕೊಹ್ಲಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು. "ಶ್ರೇಯಸ್ ಬ್ಯಾಟಿಂಗ್ ಹೇಗೆ ನಾವು ಕ್ರೀಸ್‌ಅನ್ನು ಪುರಕವಾಗಿ ಬಳಸಿಕೊಳ್ಳಬಹುದು ಹಾಘೂ ಬೌನ್ಸರ್‌ಗಳ ಮೇಲೆ ಹೇಗೆ ಸವಾರಿ ಮಾಡಬಹುದು ಎಂಬುದಕ್ಕೆ ಉದಾಹರಣೆಯಾಗಿತ್ತು" ಎಂದು ವಿರಾಟ್ ಕೊಹ್ಲಿ ಹೇಳಿಕೆಯನ್ನು ನೀಡಿದ್ದಾರೆ.