For Quick Alerts
ALLOW NOTIFICATIONS  
For Daily Alerts
 

25 ವರ್ಷ ಹಳೆ ದಾಖಲೆ ಮುರಿದ 'ವಿರಾಟ್' ಕೊಹ್ಲಿ

By Mahesh

ಹೈದರಾಬಾದ್, ನ.10: ಪ್ರವಾಸಿ ಶ್ರೀಲಂಕಾ ತಂಡದ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಏಕದಿನ ಸರಣಿ ಗೆದ್ದುಕೊಂಡಿದೆ. ಹೈದರಾಬಾದಿನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಕ್ರೀಸಿನಿಂದ ಕಿಸ್ ಕಳಿಸಿದ್ದೇ ಸುದ್ದಿಯಾಯಿತು. ಈ ನಡುವೆ ಕೊಹ್ಲಿ ಅವರು 25 ವರ್ಷ ಹಳೆಯದಾದ ದಾಖಲೆಯನ್ನು ಮುರಿದು ಹಾಕಿದರು.

|

ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೊಹ್ಲಿ ಅವರು ಏಕದಿನ ಕ್ರಿಕೆಟ್ ನಲ್ಲಿ ತ್ವರಿತಗತಿಯಲ್ಲಿ 6000 ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೊಹ್ಲಿ ಅವರು 144ನೇ ಪಂದ್ಯದ 136ನೇ ಇನ್ನಿಂಗ್ಸ್ ನಲ್ಲಿ 6 ಸಾವಿರ ರನ್ ಗಡಿ ದಾಟಿದರು.

ಈ ಮೂಲಕದ ವೆಸ್ಟ್ ಇಂಡೀಸ್ ನ ದೈತ್ಯ ಪ್ರತಿಭೆ ವಿವಿಯನ್ ರಿಚರ್ಡ್ಸ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ರಿಚರ್ಡ್ಸ್ ಅವರಿಗಿಂತ 5 ಇನ್ನಿಂಗ್ಸ್ ಮುಂಚಿತವಾಗಿ ಕೊಹ್ಲಿ ಅವರು 6 ಸಾವಿರ ರನ್ ಗಡಿ ದಾಟಿದ್ದಾರೆ. ರಲ್ಲಿ ಬ್ರಿಸ್ಬೇನ್ ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರಿಚರ್ಡ್ಸ್ ಅವರು 156 ಪಂದ್ಯದ 141ನೇ ಇನ್ನಿಂಗ್ಸ್ ನಲ್ಲಿ 6 ಸಾವಿರ ರನ್ ಗಡಿಯನ್ನು ದಾಟಿದ್ದರು.

Virat Kohli breaks Vivian Richards' 25-year record

5 ಸಾವಿರ ರನ್ ನಲ್ಲಿ ಸಮ-ಸಮ: ವಿರಾಟ್ ಕೊಹ್ಲಿ ಹಾಗೂ ವಿವಿಯನ್ ರಿಚರ್ಡ್ಸ್ ಇಬ್ಬರೂ 114 ಇನಿಂಗ್ಸ್ ನಲ್ಲಿ 5,000 ರನ್ ಗಳಿಸಿದ್ದರು. ಆದರೆ, ವಿಂಡೀಸ್ ದೈತ್ಯ ರಿಚರ್ಡ್ಸ್ 126 ಪಂದ್ಯ, ಕೊಹ್ಲಿ 120 ಪಂದ್ಯಗಳಲ್ಲಿ 5 ಸಾವಿರ ರನ್ ಗಡಿ ದಾಟಿದ್ದು ಗಮನಾರ್ಹ. [ವರದಿ ಇಲ್ಲಿ ಓದಿ]

ಹೈದರಾಬಾದ್ ಏಕದಿನ ಪಂದ್ಯಕ್ಕೂ ಮುನ್ನ ದೆಹಲಿಯ ಬ್ಯಾಟಿಂಗ್ ಪಟುವಿಗೆ 6 ಸಾವಿರ ರನ್ ಗಡಿ ದಾಟಲು 50ರನ್ ಅಗತ್ಯವಿತ್ತು. ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಸರಣಿ ಜಯಕ್ಕೆ ಕೊಹ್ಲಿ ಕಾರಣರಾದರು. ಕೊಹ್ಲಿ ಈ ಪಂದ್ಯದಲ್ಲಿ 53(61 ಎಸೆತ, 4x4, 1x6) ರನ್ ಗಳಿಸಿ 243 ಮೊತ್ತದ ಗುರಿ ಬೆನ್ನಟ್ಟಲು ನೆರವಾದರು.

ಇದಕ್ಕೂ ಮುನ್ನ ಭಾರತದ ಪರ ಸೌರವ್ ಗಂಗೂಲಿ ಅವರು ತ್ವರಿತಗತಿಯಿಂದ 147 ಇನ್ನಿಂಗ್ಸ್ ನಲ್ಲೇ 6 ಸಾವಿರ ರನ್ ಗಡಿ ದಾಟಿದ್ದರು. ಸಚಿನ್ ತೆಂಡೂಲ್ಕರ್ ಅವರು 170ನೇ ಇನ್ನಿಂಗ್ಸ್ ನಲ್ಲಿ ಈ ಮೈಲಿಗಲ್ಲು ದಾಟಿದ್ದರು. ಅದರೆ, 6 ಸಾವಿರ ರನ್ ಗಡಿ ದಾಟಿದವರ ಪೈಕಿ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿ ಸಚಿನ್ ಅವರಿಗೆ ಸಲ್ಲುತ್ತದೆ, 24 ವರ್ಷ 264 ದಿನಗಳಾಗಿದ್ದಾಗಲೇ ಸಚಿನ್ ಅವರು 6 ಸಾವಿರ ರನ್ ಗಡಿ ದಾಟಿದ್ದರು.

ತ್ವರಿತಗತಿಯಲ್ಲಿ 6 ಸಾವಿರ ರನ್ ಗಡಿ ದಾಟಿದ ವೀರರು
* ವಿರಾಟ್ ಕೊಹ್ಲಿ - 136 ಇನ್ನಿಂಗ್ಸ್
* ವಿವಿಯನ್ ರಿಚರ್ಡ್ಸ್-141
* ಸೌರವ್ ಗಂಗೂಲಿ- 147
* ಎಬಿ ಡಿವಿಲೆಯರ್ಸ್ -147
* ಮ್ಯಾಥ್ಯೂಸ್ ಹೇಡನ್ -154
* ಬ್ರಿಯಾನ್ ಲಾರಾ-155

Story first published: Wednesday, January 3, 2018, 10:12 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+