Virat Kohli: ಬೆಂಗಳೂರು ಟೆಸ್ಟ್‌ನಲ್ಲಿ ಧೋನಿ ದಾಖಲೆ ಮುರಿದ ವಿರಾಟ್ ಕೊಹ್ಲಿ
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಅಬ್ಬರಿಸಲಿಲ್ಲ. ಎಂಟು ವರ್ಷಗಳ ನಂತರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕೊಹ್ಲಿ ವಿಶೇಷವಾದುದ್ದನ್ನು ಮಾಡಲು ಸಾಧ್ಯವಾಗಿಲ್ಲ.
ಬೆಂಗಳೂರು ಟೆಸ್ಟ್‌ನಲ್ಲಿ ಕೊಹ್ಲಿ ಇನ್ನಿಂಗ್ಸ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ತಮ್ಮ ನೆಚ್ಚಿನ ಮಾಜಿ ನಾಯಕ ಶತಕ ಸಿಡಿಸುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದರು. ಕೊಹ್ಲಿ ಮಾತ್ರ ಖಾತೆ ತೆರೆಯದೆ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಆದರೆ, ಅವರು ಮಾಜಿ ನಾಯಕ ಎಂಎಸ್ ಧೋನಿ ದಾಖಲೆಯನ್ನು ಮುರಿಯುವುದರಲ್ಲಿ ಯಶಸ್ವಿಯಾದರು.

ಬೆಂಗಳೂರು ಟೆಸ್ಟ್ ಆಡುವ ಮೂಲಕ ವಿರಾಟ್ ಕೊಹ್ಲಿ ಭಾರತಕ್ಕಾಗಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಎರಡನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಧೋನಿ ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ರನ್ ಗಳಿಸುವಲ್ಲಿ ಹಿಂದೆ ಉಳಿದಿರಬಹುದು. ಆದರೆ ಕೊಹ್ಲಿ ದಾಖಲೆ ಮುರಿದು ಮುನ್ನುಗ್ಗಿದ್ದಾರೆ.
ಗುರುವಾರದಂದು ವಿರಾಟ್ ಕೊಹ್ಲಿ ತಮ್ಮ 536ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಮತ್ತೊಂದೆಡೆ, ಧೋನಿ 2004 ಮತ್ತು 2019 ರ ನಡುವೆ ಭಾರತ ಪರ 535 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. 2008ರ ಶ್ರೀಲಂಕಾ ಪ್ರವಾಸದ ವೇಳೆ ಟೀಮ್ ಇಂಡಿಯಾ ಪರ ಏಕದಿನ ಪಂದ್ಯ ಆಡುವ ಮೂಲಕ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ವಿರಾಟ್ ಕೊಹ್ಲಿ, 115 ಟೆಸ್ಟ್, 295 ಏಕದಿಮ ಮತ್ತು 125 ಟಿ20 ಗಳಲ್ಲಿ 27041 ರನ್ ಗಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು 68 ಟೆಸ್ಟ್‌ಗಳು, 95 ಏಕದಿನ ಮತ್ತು 50 ಟಿ20 ಪಂದಗಳನ್ನು ಒಳಗೊಂಡಂತೆ ಒಟ್ಟು 213 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ.
ನಂಬರ್-1 ಆಗಲು ಎಷ್ಟು ದೂರ?
ಟೀಮ್ ಇಂಡಿಯಾ ಪರ 1989 ರಿಂದ 2013 ರವರೆಗೆ 664 ಪಂದ್ಯಗಳನ್ನು ಆಡಿರುವ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಹಿಂದೆ ವಿರಾಟ್ ಕೊಹ್ಲಿ ಇದ್ದಾರೆ. ಕೊಹ್ಲಿ ನಂಬರ್-1 ಆಗಲು ಇನ್ನೂ ಸಾಕಷ್ಟು ಪಂದ್ಯಗಳನ್ನು ಆಡಬೇಕಾಗುತ್ತದೆ. ಸಚಿನ್ ವಿಶ್ವದಲ್ಲೇ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕ್ರಿಕೆಟಿಗ ಎಂಬ ದಾಖಲೆಯನ್ನೂ ಹೊಂದಿದ್ದಾರೆ. ಪ್ರಸ್ತುತ ಕ್ರಿಕೆಟಿಗರಲ್ಲಿ ಕೊಹ್ಲಿ ನಂತರ ಭಾರತದ ನಾಯಕ ರೋಹಿತ್ ಶರ್ಮಾ (486 ಪಂದ್ಯ) ಮತ್ತು ರವೀಂದ್ರ ಜಡೇಜಾ (346 ಪಂದ್ಯ) ಇದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications