For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಕ್ರಿಕೆಟ್‌ನಿಂದ ಕೆಲ ಕಾಲ ವಿರಾಮ ತೆಗೆದುಕೊಳ್ಳಲಿ: ಬ್ರೇಟ್ ಲೀ

Virat Kohli can take a break from cricket: former pacer Brett Lee

ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಬಾರಿಯ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಟೂರ್ನಿಯಲ್ಲಿ ಕೊಹ್ಲಿ 16 ಪಂದ್ಯಗಳನ್ನು ಆಡಿದ್ದು ಕೇವಲ ಎರಡು ಅರ್ಧ ಶತಕಗಳನ್ನು ಮಾತ್ರವೇ ಗಳಿಸಿದ್ದಾರೆ. ಮೂರು ಬಾರಿ ಗೋಲ್ಡನ್ ಡಕ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಒಂದೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಸ್ಥರವಾಗಿ ಫಾರ್ಮ್ ಉಳಿಸಿಕೊಳ್ಳಳು ಕೊಹ್ಲಿಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಬ್ರೇಟ್ ಲೀ ಪ್ರತಿಕ್ರಿಯೆ ನೀಡಿದ್ದು ವಿರಾಟ್ ಕೊಹ್ಲಿ ಕೆಲ ಕಾಲ ವಿಶ್ರಾಂತಿಯನ್ನು ತೆಗೆದುಕೊಳ್ಳಬಹುದು ಎಂದಿದ್ದಾರೆ.

"ಈ ಮಾತನ್ನು ನಾನು ಆತನ ಮೇಲಿನ ಕಾಳಜಿಯಿಂದಲೇ ಹೇಳುತ್ತಿದ್ದೇನೆ. ಖಂಡಿತವಾಗಿಯೂ ಆತ ಹೆಚ್ಚಿನ ರನ್‌ಗಳಿಸುವುದನ್ನು ನೋಡುವುದು ನನಗೆ ಇಷ್ಟ. ಈ ಕಠಿಣ ಸಂದರ್ಭದಿಂದ ಹೊರಗೆ ಬರಬೇಕಾದರೆ ಆತ ಕೆಲ ಕಾಲ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದುಕೊಳ್ಳಬಹುದು" ಎಂದಿದ್ದಾರೆ ಬ್ರೇಟ್ ಲೀ. ಪಿಟಿಐ ಜೊತೆಗೆ ಮಾತನಾಡಿರುವ ಅವರು ಕೊಹ್ಲಿಯ ಕಳಪೆ ಫಾರ್ಮ್ ಬಗ್ಗೆ ಕೇಳಿದ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಕಳಪೆ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಶತಕ ಬಾರಿಸದೆ ಬಹುತೇಕ ಮೂರು ವರ್ಷಗಳು ಕಳೆದಿದೆ. ಇದು ಕೊಹ್ಲಿ ವೃತ್ತಿ ಜೀವನದ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ಐಪಿಎಲ್‌ ಈ ಬಾರಿಯ ಆವೃತ್ತಿಯಲ್ಲಿ ಕೊಹ್ಲಿ ಆಡಿದ 16 ಪಂದ್ಯಗಳಲ್ಲಿ 341 ರನ್‌ಗಳಿಸಿದ್ದಾರೆ. ಅವರ ಸರಾಸರಿ 22.73 ಆಗಿದೆ.

"ಮತ್ತೊಂದು ಪ್ರಮುಖ ಅಂಶವೆಂದರೆ ವಿರಾಟ್ ಕೊಹ್ಲಿ ರನ್‌ಗಳಿಸದೆ ಇದ್ದಂಥಾ ಸಂದರ್ಭದಲ್ಲಿ ಅವರ ತಂಡ ಕೂಡ ಸಾಮಾನ್ಯವಾಗಿ ಉತ್ತಮ ಪ್ರದರ್ಶನ ನೀಡುವುದಿಲ್ಲ. ಅವರು ತಮ್ಮ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ಪರ್ಪಲ್‌ಕ್ಯಾಪ್ ಧರಿಸಿದ್ದಾಗ 2016ರ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಅದ್ಭುತ ಪ್ರದರ್ಶನ ನಿಡಿ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿತ್ತು. ಹಾಗಾಗಿ ನಾವು ವಿರಾಟ್ ಕೊಹ್ಲಿಯಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತೇವೆ" ಎಂದಿದ್ದಾರೆ ಬ್ರೇಟ್ ಲೀ.

"ಕೊಹ್ಲಿ ಬಲಿಷ್ಠವಾಗಿದ್ದರೆ ಅವರ ತಂಡ ಬಲುಷ್ಠವಾಗಿರುತ್ತದೆ. ದುರದೃಷ್ಟವಶಾತ್ ಅವರು ಸೆಮಿಸ್‌ನಲ್ಲಿ ಅವಕಾಶವನ್ನು ಕಳೆದುಕೊಂಡರು. ಅವರು ಹೆಚ್ಚಿನ ರನ್‌ಗಳಿಸಲು ಸಾಧ್ಯವಾಗದ ಕಾರಣ ತಂಡ ಕೂಡ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಇದು ಮತ್ತೆ ವಾಪಾಸಾಗಿ ಕೆಲ ಅಂಶಗಳ ಮೇಲೆ ಗಮನಹರಿಸಲು ಕೊಹ್ಲಿಗಿರುವ ಉತ್ತಮ ಅವಕಾಶವಾಗಿದೆ. ಅವರು ಕ್ರಿಕೆಟ್‌ನಿಂದ ಕೆಲ ಕಾಲ ದೂರವಿದ್ದು ವಿಶ್ರಾಂತಿಯನ್ನು ಪಡೆದುಕೊಂಡರೂ ಸಾಕಾಗಬಹುದು. ಕೇವಲ ಆಟದಿಂದ ದೂರವುಳಿದು ತಾಜಾತನದಿಂದ ಮರಳಬಹುದು" ಎಂದಿದ್ದಾರೆ ಬ್ರೇಟ್ ಲೀ.

ಇನ್ನು ಐಪಿಎಲ್ 2022 ಆವೃತ್ತಿಯಲ್ಲಿಫೈನಲ್ ಪಂದ್ಯ ಮಾತ್ರವೇ ಬಾಕಿಯಿದೆ. ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈ ಬಾರಿಯ ಐಪಿಎಲ್‌ನಲ್ಲಿ ಫೈನಲ್ ಹಂತಕ್ಕೇರಿದ್ದು ಭಾನುವಾರ ಈ ಅಂತಿಮ ಮುಖಾಮುಖಿ ನಡೆಯಲಿದೆ. ಗುಜರಾತ್ ಟೈಟನ್ಸ್ ಚೊಚ್ಚಲ ಆವೃತ್ತಿಯಲ್ಲಿಯೇ ಅದ್ಭುತ ಪ್ರದರ್ಶನ ನೀಡಿ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದರೆ ಐಪಿಎಲ್ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಎನಿಸಿಕೊಂಡಿರುವ ರಾಜಸ್ಥಾನ್ ರಾಯಲ್ಸ್ 13 ವರ್ಷಗಳ ಬಳಿಕ ಮತ್ತೊಮ್ಮೆ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.

ಎರಡು ತಂಡಗಳು ಕೂಡ ಟೂರ್ನಿಯ ಬಲಿಷ್ಠ ತಂಡಗಳು ಎನಿಸಿಕೊಂಡಿದ್ದು ಆರಂಭದಿಂದಲೇ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿತ್ತು. ಹೀಗಾಗಿ ಐಪಿಎಲ್ ಅಭಿಮಾನಿಗಳೆಲ್ಲರ ಚಿತ್ತ ಈ ಪಂದ್ಯದ ಮೇಲಿರಲಿದೆ. ಈ ಮಹತ್ವದ ಪಂದ್ಯದಲ್ಲಿ ಗೆದ್ದು 15ನೇ ಆವೃತ್ತಿಯ ಚಾಂಪಿಯನ್ ಎನಿಸುವ ತಂಡ ಯಾವುದು ಎಂಬುದು ಈಗ ಕುತೂಹಲ ಮೂಡಿಸಿದೆ.

Story first published: Saturday, May 28, 2022, 22:54 [IST]
Other articles published on May 28, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+