ಮೊದಲ ಟೆಸ್ಟ್ ಪಂದ್ಯಕ್ಕೆ ಕೊಹ್ಲಿಯೇ ಕ್ಯಾಪ್ಟನ್
ಅಡಿಲೇಡ್, ಡಿ.8: ಲಕ್ ಅಂದ್ರೆ ಹಿಂಗ್ ಇರ್ಬೇಕು ಕಣ್ರಿ.. ಟೆಸ್ಟ್ ಕ್ಯಾಪ್ಟನ್ ಆಗುವ ಕನಸು ಈಡೇರುವುದು ಇನ್ನೇನು ಸಾಧ್ಯವಿಲ್ಲ ಎನ್ನುವಷ್ಟರಲ್ಲಿ ಅದೃಷ್ಟ ಮತ್ತೆ ಕೊಹ್ಲಿಗೆ ಸಾಥ್ ನೀಡಿದೆ. ಧೋನಿ ಅವರ ಗಾಯ ಇನ್ನೂ ವಾಸಿಯಾಗದ ಕಾರಣ ಮೊದಲ ಟೆಸ್ಟ್ ಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಅಡಿಲೇಡ್ ಟೆಸ್ಟ್ ನಲ್ಲಿ ಮೈಕಲ್ ಕ್ಲಾರ್ಕ್ ಹಾಗೂ ವಿರಾಟ್ ಕೊಹ್ಲಿ ನಾಯಕತ್ವದ ತಂಡಗಳ ಫೈಟ್ ಖಚಿತವಾಗಿದೆ.
ಗಾಯಗೊಂಡು ಮೊದಲ ಟೆಸ್ಟ್ ನಿಂದ ಹೊರಗುಳಿದಿದ್ದ ಎಂಎಸ್ ಧೋನಿ ಅವರು ತಂಡಕ್ಕೆ ಮರಳುವ ಸಾಧ್ಯತೆಯಿದ್ದು, ಡಿ.9ರಂದು ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಟೀಂ ಇಂಡಿಯಾ ಮ್ಯಾನೇಜರ್ ಹೇಳಿದ್ದರು. [ಆಸೀಸ್ ವಿರುದ್ಧ ಟೆಸ್ಟ್, ಕನ್ನಡಿಗ ರಾಹುಲ್ ಆಯ್ಕೆ]
ಅದರೆ, ಧೋನಿ ಅವರು ಹೆಬ್ಬರಳ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ನಾನೇ ನಾಳೆ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದೇನೆ ಎಂದು ಸ್ವತಃ ವಿರಾಟ್ ಕೊಹ್ಲಿ ಅವರೇ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಆಸ್ಟ್ರೇಲಿಯಾದ ಕ್ರಿಕೆಟರ್ ಫಿಲ್ ಹ್ಯೂಸ್ ಅವರ ಅಕಾಲಿಕ ಸಾವಿನ ಹಿನ್ನಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳಾಪಟ್ಟಿ ಬದಲಾಯಿಸಲಾಗಿದೆ. ಮೊದಲ ಟೆಸ್ಟ್ ದಿನಾಂಕ(ಡಿ.4) ಮುಂದೂಡಿ ಡಿ.9 ರಂದು ಮೊದಲ ಟೆಸ್ಟ್ ಆಡಿಸಲಾಗುತ್ತಿದೆ. ಜೊತೆಗೆ ಬ್ರಿಸ್ಬೇನ್ ನಿಂದ ಅಡಿಲೇಡ್ ಗೆ ಮೊದಲ ಟೆಸ್ಟ್ ಶಿಫ್ಟ್ ಆಗಿದೆ.[ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ]
ಮೊದಲ ಟೆಸ್ಟ್ ಪಂದ್ಯಕ್ಕೆ ತಂಡ ಇಂತಿದೆ:
ಆಸ್ಟ್ರೇಲಿಯಾ XI: ಕ್ರಿಸ್ ರೋಜರ್ಸ್,ಡೇವಿಡ್ ವಾರ್ನರ್, ಶೇನ್ ವಾಟ್ಸನ್, ಮೈಕಲ್ ಕ್ಲಾರ್ಕ್(ನಾಯಕ), ಸ್ಟೀವ್ ಸ್ಮಿತ್, ಮಿಚೆಲ್ ಮಾರ್ಷ್, ಬ್ರಾಡ್ ಹಡೀನ್, ಮಿಚೆಲ್ ಜಾನ್ಸನ್, ಪೀಟರ್ ಸಿಡ್ಲ್, ಆರ್ ಹ್ಯಾರೀಸ್, ನಾಥನ್ ಲಿಯಾನ್, ಜೋಶ್ ಹಜೆಲ್ ವುಡ್(12ನೇ ಆಟಗಾರ), ಫಿಲ್ ಹ್ಯೂಸ್ (13ನೇ ಆಟಗಾರ, ಗೌರವಾರ್ಥ)
ಟೀಂ ಇಂಡಿಯಾ: ವಿರಾಟ್ ಕೊಹ್ಲಿ, ಶಿಖರ್ ಧವನ್, ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಸುರೇಶ್ ರೈನಾ, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ನಮನ್ ಓಜಾ(ವಿಕೆಟ್ ಕೀಪರ್), ಆರ್ ಅಶ್ವಿನ್, ಕರಣ್ ಶರ್ಮ, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್, ಮಹಮ್ಮದ್ ಶಮಿ, ಇಶಾಂತ್ ಶರ್ಮ, ಉಮೇಶ್ ಯಾದವ್, ವರುಣ್ ಅರೋನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications