Virat Kohli: ಕುಟುಂಬದೊಂದಿಗೆ ಟಿ20 ವಿಶ್ವಕಪ್ ವಿಜಯೋತ್ಸವ ಆಚರಿಸಿದ ವಿರಾಟ್ ಕೊಹ್ಲಿ; ಫೋಟೋ ವೈರಲ್
ಜುಲೈ 4 ಗುರುವಾರ, ಟಿ20 ಚಾಂಪಿಯನ್ ಭಾರತ ತಂಡವು ಗುರುವಾರ ಮುಂಜಾನೆ ಬಾರ್ಬಡೋಸ್‌ನಿಂದ ನವದೆಹಲಿ ತಲುಪಿದೆ. ಈ ವೇಳೆ ಟೀಮ್ ಇಂಡಿಯಾಕ್ಕೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ.
ಟೀಮ್ ಇಂಡಿಯಾ ಆಟಗಾರರನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅಭಿಮಾನಿಗಳ ಉತ್ಸಾಹ ಕಂಡು ಟೀಮ್ ಇಂಡಿಯಾ ಆಟಗಾರರು ಸಂತಸಗೊಂಡಿದ್ದಾರೆ.

ಇದಾದ ಬಳಿಕ ವಿಮಾನ ನಿಲ್ದಾಣದಿಂದ ಬಸ್ ಹತ್ತಿ ನವದೆಹಲಿಯ ಐಟಿಸಿ ಹೊಟೇಲ್ ಮೌರ್ಯ ಕಡೆ ಟೀಮ್ ಇಂಡಿಯಾ ಪ್ರಯಾಣ ಬೆಳೆಸಿತ್ತು. ಹೊಟೇಲ್ ತಲುಪಿದ ಇಡೀ ಭಾರತ ತಂಡವನ್ನು ಹೊರಗೆ ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಲಾಯಿತು.
ಬಸ್‌ನಿಂದ ಇಳಿದ ಬಳಿಕ ಕೆಲ ಆಟಗಾರರು ಡೋಲು ಬಾರಿಸುವ ಮೂಲಕ ಕುಣಿದು ಕುಪ್ಪಳಿಸಿದರು. ಕುಮಾರ್ ಯಾದವ್, ರೋಹಿತ್ ಶರ್ಮಾ ಹಾಗು ಹಾರ್ದಿಕ್ ಪಾಂಡ್ಯ ಡ್ಯಾನ್ಸ್ ಮಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕುಟುಂಬದೊಂದಿಗೆ ವಿಜಯೋತ್ಸವ ಆಚರಿಸಿದ ಕೊಹ್ಲಿ
ಇನ್ನೊಂದೆಡೆ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಾಯ್ನಾಡಿಗೆ ಮರಳುತ್ತಿದ್ದಂತೆ ನವದೆಹಲಿಯ ಹೋಟೆಲ್ ಐಟಿಸಿ ಮೌರ್ಯದಲ್ಲಿ ತಮ್ಮ ಕುಟುಂಬದೊಂದಿಗೆ ಟಿ20 ವಿಶ್ವಕಪ್ 2024 ರ ವಿಜಯವನ್ನು ಮೊದಲು ಆಚರಿಸಿದರು.
ವಿರಾಟ್ ಕೊಹ್ಲಿ ಮೂಲತಃ ದೆಹಲಿಯವರಾಗಿದ್ದು, ಹೊಟೇಲ್‌ನಲ್ಲಿ ಸಹೋದರಿ ಭಾವನಾ ಮತ್ತು ಸಹೋದರ ವಿಕಾಸ್ ಕೊಹ್ಲಿ ಅವರೊಂದಿಗೆ ಗೆಲುವಿನ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ.
ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯದಲ್ಲಿ ಕೊಹ್ಲಿ 59 ಎಸೆತಗಳಲ್ಲಿ 76 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಟೀಮ್ ಇಂಡಿಯಾ ಫೈನಲ್ ತಲುಪುವ ಮುನ್ನ ಕೊಹ್ಲಿ ಆಡಿದ 7 ಪಂದ್ಯಗಳಲ್ಲಿ ಕೇವಲ 75 ರನ್ ಮಾತ್ರ ಗಳಿಸಿದ್ದರು.
ಕಳಪೆ ಫಾರ್ಮ್‌ನಿಂದಾಗಿ ಟೀಕೆಗೂ ಕೊಹ್ಲಿ ಗುರಿಯಾಗಿದ್ದರು. ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಇನ್ನಿಂಗ್ಸ್ ಆರಂಭಿಸಿದ ಕೊಹ್ಲಿ, ತಂಡಕ್ಕೆ ಹೆಚ್ಚು ಅಗತ್ಯವಿರುವಾಗ ಉತ್ತಮ ಪ್ರದರ್ಶನ ನೀಡಿದ್ದರು.
ವಿಕ್ಟರಿ ಪರೇಡ್‌ಗೆ ಕ್ಷಣಗಣನೆ
ಭಾರತ ತಂಡ ಗುರುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಶೇಷ ಸಭೆ ನಡೆಸಿದೆ. ಇದರ ನಂತರ ಟೀಮ್ ಇಂಡಿಯಾ ಮುಂಬೈಗೆ ಹೊರಟಿದೆ. ಮುಂಬೈನಲ್ಲಿ ಬಿಸಿಸಿಐ ನಾರಿಮನ್ ಪಾಯಿಂಟ್‌ನಿಂದ ವಾಂಖೆಡೆವರೆಗೆ 1 ಕಿಲೋಮೀಟರ್ ವಿಕ್ಟರಿ ಪರೇಡ್ ನಡೆಸಲಿದೆ.
ಇದರಿಂದಾಗಿ ಅಭಿಮಾನಿಗಳು ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ತಮ್ಮ ನೆಚ್ಚಿನ ಆಟಗಾರರನ್ನು ಹತ್ತಿರದಿಂದ ನೋಡುವ ಅವಕಾಶವನ್ನು ಹೊಂದಿದ್ದಾರೆ. ಇದಾದ ಬಳಿಕ ಪ್ರತಿಷ್ಠಿತ ವಾಂಖೆಡೆ ಸ್ಟೇಡಿಯಂನಲ್ಲಿ ಚಾಂಪಿಯನ್ ಭಾರತವನ್ನು ಸನ್ಮಾನಿಸಲಾಗುವುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications