ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಡೇ-ನೈಟ್ ಟೆಸ್ಟ್ ಆಡಲಿದೆ ಟೀಮ್ ಇಂಡಿಯಾ

ನವದೆಹಲಿ, ಅಕ್ಟೋಬರ್ 30: ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಪ್ರವಾಸಿ ಬಾಂಗ್ಲಾದೇಶ ವಿರುದ್ಧ ವಿರಾಟ್ ಕೊಹ್ಲಿ ಪಡೆ ಚೊಚ್ಚಲ ಬಾರಿಗೆ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಆಡಲಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ವಿಚಾರವನ್ನು ಖಾತರಿಪಡಿಸಿದ್ದಾರೆ. ನವೆಂಬರ್ 22ರಂದು ಈ ಪಂದ್ಯ ನಡೆಯಲಿದೆ.
ಬಾಂಗ್ಲಾ ಕ್ರಿಕೆಟಿಗರು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) ವಿರುದ್ಧ ಬೇಡಿಕೆಗಳನ್ನಿಟ್ಟು ಮುಷ್ಕರ ಹೂಡಿದ್ದರು. ಆ ಬಳಿಕ ಬಿಸಿಬಿ ಆಟಗಾರರನ್ನು ಮನವೊಲಿಸುವಲ್ಲಿ ಯಶಶ್ವಿಯಾಗಿತ್ತು. ಆಟಗಾರರ ಮುಷ್ಕರ ಕೊನೆಗೊಳ್ಳುತ್ತಲೇ ಗಂಗೂಲಿ, ಪಿಂಕ್ ಬಾಲ್ ಟೆಸ್ಟ್ ನಡೆಸುವ ಬಗ್ಗೆ ಬಿಸಿಬಿ ಜೊತೆ ಸಭೆ ನಡೆಸಿದ್ದರು. ಬಿಸಿಬಿಯಿಂದ ಗ್ರೀನ್ ಸಿಗ್ನಲ್ ಕೂಡ ಲಭಿಸಿತ್ತು.
ಪಂದ್ಯದ ವೇಳೆ ಒಲಿಂಪಿಕ್ ದಂತಕತೆಗಳಾದ ಶೂಟರ್ ಅಭಿನವ್ ಬಿಂದ್ರಾ, ಬಾಕ್ಸರ್ ಮೇರಿ ಕೋಮ್, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಮೊಲೆ ಕ್ಯಾನ್ಸರ್ ಕುರಿತ ಜಾಗೃತಿ ಮೂಡಿಸಲು ಪಿಂಕ್ ಬಾಲ್ ಟೆಸ್ಟ್ ಆಯೋಜಿಸಲಾಗುತ್ತದೆ.
ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾ ಕ್ರಿಕೆಟ್ ತಂಡ, ಆತಿಥೇಯ ಭಾರತದ ವಿರುದ್ಧ 3 ಪಂದ್ಯಗಳ ಟಿ20 ಮತ್ತು 2 ಟೆಸ್ಟ್ ಪಂದ್ಯಗಳನ್ನಾಡಲಿದೆ. ಬಾಂಗ್ಲಾ ಆಲ್ ರೌಂಡರ್ ಶಕೀಬ್ ಅಲ್ ಹಸನ್ 2 ವರ್ಷಗಳ ನಿಷೇಧಕ್ಕೀಡಾಗಿರುವುದರಿಂದ ಶಕೀಬ್ ಬದಲು ಮಹಮುದುಲ್ಲ ರಿಯಾದ್‌ಗೆ ಟಿ20 ನಾಯಕತ್ವ, ಮೊಮೀನುಲ್ಲ ಹಕ್‌ಗೆ ಟೆಸ್ಟ್ ನಾಯಕತ್ವ ವಹಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications