For Quick Alerts
ALLOW NOTIFICATIONS  
For Daily Alerts
 

Virat Kohli: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷಗಳನ್ನು ಪೂರೈಸಿದ ವಿರಾಟ್; ಇಲ್ಲಿವೆ ಕಿಂಗ್ ಕೊಹ್ಲಿ ವಿಶೇಷ ದಾಖಲೆಗಳು

ಆಗಸ್ಟ್ 18 ಭಾನುವಾರ, ಭಾರತ ತಂಡದ ದಿಗ್ಗಜ ಬ್ಯಾಟರ್‌ಗಳ ಸಾಲಿನಲ್ಲಿ ನಿಲ್ಲಬಲ್ಲ ಏಕೈಕ ಆಟಗಾರ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷ ಪೂರೈಸಿದ್ದಾರೆ. ಅವರು 2008 ರಿಂದ ಇಲ್ಲಿಯವರೆಗೆ ಭಾರತ ಪರ ಆಡುತ್ತಿದ್ದಾರೆ. ಆಗಸ್ಟ್ 18 ರಂದು ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.

ಈ ವಿಶೇಷ ಸಂದರ್ಭದಲ್ಲಿ ವಿರಾಟ್ ಕೊಹ್ಲಿಗೆ ಸಂಬಂಧಿಸಿದ ಕೆಲವು ವಿಶೇಷ ದಾಖಲೆಗಳು ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ತಿಳಿಯಿರಿ.

Virat Kohli completed 16 years in international cricket

ವಿರಾಟ್ ಕೊಹ್ಲಿ 18 ಆಗಸ್ಟ್ 2008 ರಂದು ಶ್ರೀಲಂಕಾ ವಿರುದ್ಧ ತಮ್ಮ ಚೊಚ್ಚಲ ಪದಾರ್ಪಣೆ ಪಂದ್ಯವನ್ನಾಡಿದರು. ಈ ಮೂಲಕ ಭಾರತ ಪರ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ 175ನೇ ಆಟಗಾರ ಎನಿಸಿಕೊಂಡರು. ಚೊಚ್ಚಲ ಏಕದಿನ ಪಂದ್ಯದಲ್ಲಿ ವಿರಾಟ್ ಕೇವಲ 12 ರನ್ ಗಳಿಸಿದ್ದರು. ಆದರೆ ಈ ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಭಾರತದ ಬ್ಯಾಟರ್ ಆಗಿದ್ದರು.

ಇದಾದ ಬಳಿಕ 2009 ರಲ್ಲಿ ಕೊಹ್ಲಿ ಶ್ರೀಲಂಕಾ ವಿರುದ್ಧ ತಮ್ಮ ಏಕದಿನ ವೃತ್ತಿಜೀವನದ ಮೊದಲ ಶತಕವನ್ನು ಸಿಡಿದರು. ಈ ಪಂದ್ಯದಲ್ಲಿ ಅವರು 114 ಎಸೆತಗಳಲ್ಲಿ 107 ರನ್‌ಗಳ ಅದ್ಭುತ ಇನ್ನಿಂಗ್ಸ್ ಅನ್ನು ಆಡಿದ್ದರು. ಹೀಗೆ ಹಂತ ಹಂತವಾಗಿ ತನ್ನ ಸಾಮರ್ಥ್ಯವನ್ನು ಹೊರ ಹಾಕಿದ ಕೊಹ್ಲಿ ಕೆಲವೇ ವರ್ಷಗಳಲ್ಲಿ ಟೀಮ್ ಇಂಡಿಯಾದ ವಿಶೇಷ ಬ್ಯಾಟರ್ ಆದರು.

ಕೊಹ್ಲಿ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. 2011ರ ಫೆಬ್ರವರಿ 2 ರಂದು ಮೀರ್‌ಪುರದಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ಮೊದಲ ಏಕದಿನ ವಿಶ್ವಕಪ್ ಶತಕವನ್ನು ಹೊಡೆದರು. ಈ ವೇಳೆ ಅವರು ಔಟಾಗದೆ 100 ರನ್‌ಗಳನ್ನು ಕಲೆ ಹಾಕಿದ್ದರು.

ಇದಕ್ಕೂ ಕೊಹ್ಲಿ ಜೂನ್ 12, 2010 ರಂದು ಜಿಂಬಾಬ್ವೆ ವಿರುದ್ಧ ಭಾರತದ ಪರ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಹರಾರೆಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಅವರು 26 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದರು. ನಂತರ ದುಬೈನಲ್ಲಿ ನಡೆದ 2022ರ ಏಷ್ಯಾ ಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ವಿರಾಟ್ ಮೊದಲ ಅಂತರಾಷ್ಟ್ರೀಯ ಟಿ20 ಶತಕವನ್ನು ಹೊಡೆದಿದ್ದರು.

ಟಿ20 ಬಳಿಕ ವಿರಾಟ್ ಜೂನ್ 30, 2011 ರಂದು ಭಾರತದ ಪರ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಅವರು ಮೊದಲ ಇನ್ನಿಂಗ್ಸ್‌ನಲ್ಲಿ 4 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 15 ರನ್ ಗಳಿಸಿದರು. 2012ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ವಿರಾಟ್ ತಮ್ಮ ಮೊದಲ ಟೆಸ್ಟ್ ಶತಕ ದಾಖಲಿಸಿದ್ದರು. ಇದೀಗಾ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಹೆಸರಿನಲ್ಲಿ 7 ದ್ವಿಶತಕಗಳಿವೆ.

ಕಿಂಗ್ ಕೊಹ್ಲಿ ದಾಖಲೆ

ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಹೊಂದಿರುವ ವಿಶ್ವದ ಮೊದಲ ಬ್ಯಾಟರ್‌ ಆಗಿದ್ಧಾರೆ. ಕೊಹ್ಲಿ ಹೆಸರಿನಲ್ಲಿ 38 ಟಿ20 ಅರ್ಧಶತಕಗಳು ದಾಖಲಾಗಿವೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ 4ನೇ ಬ್ಯಾಟರ್ ವಿರಾಟ್ ಕೊಹ್ಲಿ. ಸಚಿನ್ ತೆಂಡೂಲ್ಕರ್, ಕುಮಾರ ಸಂಗಕ್ಕಾರ ಮತ್ತು ರಿಕಿ ಪಾಂಟಿಂಗ್ ಕ್ರಮವಾಗಿ ಆಗ್ರ ಮೂರಲ್ಲಿದ್ದಾರೆ. ವಿರಾಟ್ 533 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 26942 ರನ್ ಗಳಿಸಿದ್ದಾರೆ. ಅಲ್ಲದೆ 80 ಶತಕಗಳು ಮತ್ತು 140 ಅರ್ಧ ಶತಕಗಳನ್ನು ಹೊಂದಿದ್ದಾರೆ.

ವಿರಾಟ್ ಕೊಹ್ಲಿ ವೈಯಕ್ತಿಕ ಜೀವನ

ಕೊಹ್ಲಿ ನವೆಂಬರ್ 5, 1988 ರಂದು ನವದೆಹಲಿಯಲ್ಲಿ ಜನಿಸಿದರು. ವಿರಾಟ್ ಕೊಹ್ಲಿ ತಮ್ಮ ಆರಂಭಿಕ ಕ್ರಿಕೆಟ್ ವೃತ್ತಿಜೀವನದ ದಿನಗಳಲ್ಲಿ ಬೌಲಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ದರು. ಇದು ಅಂತಾರಾಷ್ಟ್ರೀಯ ಟೂರ್ನಿ ಹಲವು ಬಾರಿ ಕಾಣಿಸಿಕೊಂಡಿದೆ.

ಡಿಸೆಂಬರ್ 11, 2017 ರಂದು ಇಟಲಿಯಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ವಿವಾಹವಾದರು. ಈಗ ಅವರಿಗೆ ಮಗಳು ಮತ್ತು ಮಗ ಇದ್ದಾರೆ. ವಿರಾಟ್ ಅವರ ಕುಟುಂಬವು ಇತ್ತೀಚೆಗೆ ಲಂಡನ್ ಅನ್ನು ತುಂಬಾ ಇಷ್ಟಪಡುತ್ತದೆ. ಹೀಗಾಗಿ ಅವರು ಆಗಾಗ್ಗೆ ಅಲ್ಲಿ ರಜಾದಿನಗಳನ್ನು ಕಳೆಯುತ್ತಾರೆ.

ವಿರಾಟ್ ಕೊಹ್ಲಿ ಅವರಿಗೆ ಅರ್ಜುನ್ ಪ್ರಶಸ್ತಿ, ಪದ್ಮಶ್ರೀ, ಖೇಲ್ ರತ್ನ ಮತ್ತು ಐಸಿಸಿ ವರ್ಷದ ಆಟಗಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕೇವಲ ಅಂತರಾಷ್ಟ್ರೀಯ ಕ್ರಿಕೆಟ್‌ ಮಾತ್ರವಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಯೂ (ಐಪಿಎಲ್) ಕೊಹ್ಲಿ ತಮ್ಮ ಖದರ್ ತೋರಿದ್ದಾರೆ. ಐಪಿಎಲ್ ಆರಂಭದಿಂದಲೂ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡುತ್ತಿದ್ದು, ಒಂದೇ ಫ್ರಾಂಚೈಸಿ ಅತಿಹೆಚ್ಚು ಬಾರಿ ಪ್ರತಿನಿಧಿಸಿರುವ ಹೆಗ್ಗಳಿಕೆ ಕೊಹ್ಲಿ ಪಾತ್ರರಾಗಿದ್ದಾರೆ.

Story first published: Sunday, August 18, 2024, 11:34 [IST]
Other articles published on Aug 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+