ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಮರಳುತ್ತಾರಾ? ಕೊಹ್ಲಿ ಹೇಳಿದ್ದೇನು?
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 17 ರನ್‌ಗಳಿಂದ ಗೆದ್ದ ಭಾರತ, 3 ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 135 ರನ್ ಸಿಡಿಸಿ ಅಬ್ಬರಿಸಿದರು. ಭರ್ಜರಿ ಪ್ರದರ್ಶನದ ಫಲವಾಗಿ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಬಳಿಕ ವಿರಾಟ್ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ಓವರ್‌ಗಳಲ್ಲಿ ಸವಾಲಿನ ಮೊತ್ತವನ್ನು ಕಲೆ ಹಾಕಿತು. ಈ ವೇಳೆ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ 120 ಎಸೆತಗಳಲ್ಲಿ 11 ಬೌಂಡರಿ, 7 ಸಿಕ್ಸರ್ ಸಹಾಯದಿಂದ 135 ರನ್ ಸಿಡಿಸಿ ಅಬ್ಬರಿಸಿದರು. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 52ನೇ ಏಕದಿನ ಶತಕವನ್ನು ಸಿಡಿಸಿದರು. ಕೊಹ್ಲಿ ಅವರು ಏಕದಿನ ಸ್ವರೂಪದತ್ತ ಮಾತ್ರ ಗಮನಹರಿಸುವುದಾಗಿ ಸ್ಪಷ್ಟಪಡಿಸಿದರು.

ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿರುವ ವಿರಾಟ್, ನಾನು ನನ್ನ ಸಂಪೂರ್ಣ ತಯಾರಿಯನ್ನು ಮಾನಸಿಕವಾಗಿ ಮಾಡಿಕೊಳ್ಳುವೆ. ದೇಹದ ಸ್ಥಿತಿ ಉತ್ತಮವಾಗಿರುವುದರಿಂದ, ಮಾನಸಿಕವಾಗಿ ನಾನು ತಯಾರಾಗಿದ್ದೇನೆ. ಮ್ಯಾಚ್‌ಗೂ ಮುನ್ನ ನಾನು ಒಂದು ದಿನದ ಬ್ರೇಕ್ ಪಡೆಯುತ್ತೇನೆ. ನಾನು ಈಗ 37 ವರ್ಷದವನಾಗಿದ್ದು, ರಿಕವರಿಗೆ ಸಮಯ ಬೇಕಾಗುತ್ತದೆ. ನಾನು ವಿಶ್ರಾಂತಿ ಪಡೆದಯ ಮತ್ತೆ ಆಡಲು ಸಿದ್ಧನಾಗುತ್ತೇನೆ. ನಾನು ಈ ವರೆಗೆ 300ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ ಎಂದು ತಿಳಿಸಿದ್ದಾರೆ.
ಪಿಚ್ ಬಗ್ಗೆ ವಿರಾಟ್ ಹೇಳಿದ್ದೇನು?
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದ ಪಿಚ್ ಸುಲಭಾಗಿ ಕಂಡಿತ್ತು. ಸಮಯ ಕಳೆದಂತೆ ಪಿಚ್ ನಿಧಾನವಾಯಿತು. ಈ ಸ್ಥಿತಿಯಲ್ಲಿ ಸಮಯೋಚಿತ ಶಾಟ್‌ಗಳನ್ನು ಬಳಿಸಿದೆ. ನನ್ನ ಅನುಭವ ಈ ವೇಳೆ ಸರಿಯಾಗಿ ಕೆಲಸಕ್ಕೆ ಬಂದಿದೆ ಎಂದಿದ್ದಾರೆ. ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ಮರಳಲು ಪ್ರಯತ್ನಿಸುತ್ತಿಲ್ಲ. ವಿರಾಟ್ ಅವರ ಗಮನ ಈಗ ಏಕದಿನ ಕ್ರಿಕೆಟ್‌ತ್ತ ಮಾತ್ರ ಕೇಂದ್ರಿಕರಿಸಲಾಗಿದೆ. ಟೆಸ್ಟ್ ಕ್ರಿಕೆಟ್‌ಗೆ ಮರಳಲು ಯೋಚಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ವಿರಾಟ್ ಕೊಹ್ಲಿ ಅವರ ಫಿಟ್‌ನೆಸ್, ಉತ್ಸಾಹ ಮತ್ತು ತಂಡಕ್ಕೆ ಸಹಾಯ ನೀಡಿದೆ.
ಭವಿಷ್ಯ ಪ್ರಶ್ನಿಸುವ ಅಗತ್ಯವಿಲ್ಲ
ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಹಾಗೂ ಫರ್ಮ್ ಗಮನಸಿದರೆ ಅವರ ಭವಿಷ್ಯವನ್ನು ಪ್ರಶ್ನಿಸುವ ಅಗತ್ಯವಿಲ್ಲ ಎಂದು ಭಾರತದ ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ತಿಳಿಸಿದ್ದಾರೆ. ನಾವು ಇದನ್ನೆಲ್ಲಾ ಏಕೆ ಯೋಚಿಸಬೇಕು ಎಂಬುದು ನನಗೆ ತಿಳಿದಿಲ್ಲ. ವಿರಾಟ್ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರ ಭವಿಷ್ಯದ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಅವರು ಬ್ಯಾಟಿಂಗ್ ಮಾಡುತ್ತಿರುವ ರೀತಿ ಅದ್ಭುತ ಎಂದು ತಿಳಿಸಿದರು. ಇನ್ನು ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಸಹ ವಿರಾಟ್ ಬ್ಯಾಟಿಂಗ್‌ನ್ನು ಕೊಂಡಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications