ಇಂಗ್ಲೆಂಡ್ ವಿರುದ್ಧದ ಟಿ20ಐಗೆ ಓಪನರ್ಸ್ ಖಾತರಿಪಡಿಸಿದ ವಿರಾಟ್ ಕೊಹ್ಲಿ

ಅಹ್ಮದಾಬಾದ್: ಭಾರತಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಮುಗಿಸಿದ್ದು ಮುಂದೆ ಐದು ಪಂದ್ಯಗಳ ಟಿ20ಐನಲ್ಲಿ ಆತಿಥೇಯ ಭಾರತದ ವಿರುದ್ಧ ಆಡಲಿದೆ. ಮಾರ್ಚ್ 12ರ ಶುಕ್ರವಾರದಿಂದ ಕುತೂಹಲಕಾರಿ ಸರಣಿ ಆರಂಭಗೊಳ್ಳಲಿದೆ.
ಟಿ20ಐ ಸರಣಿಯ ಐದೂ ಪಂದ್ಯಗಳೂ ವಿಶ್ವದ ಬೃಹತ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಹ್ಮದಾಬಾದ್‌ನ ನರೇಂದ್ರ ಮೋದಿ (ಹಿಂದಿನ ಮೊಟೆರಾ) ಸ್ಟೇಡಿಯಂನಲ್ಲಿ ನಡೆಯಲಿವೆ. ಸರಣಿಯ ಎಲ್ಲಾ ಐದು ಪಂದ್ಯಗಳು ಭಾರತೀಯ ಕಾಲಮಾನ 7 pmಗೆ ಆರಂಭಗೊಳ್ಳಲಿದೆ.
ಟಿ20ಐ ಸರಣಿಗಾಗಿ ಪ್ರಕಟಿತ ಭಾರತ ತಂಡದಲ್ಲಿ ಒಟ್ಟು 3 ಆರಂಭಿಕ ಬ್ಯಾಟ್ಸ್‌ಮನ್‌ಗಳಿದ್ದರು. ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ಕೆಎಲ್ ರಾಹುಲ್ ಈ ಮೂವರು ಆರಂಭಿಕರಲ್ಲಿ ಯಾರಿಗೆ ಓಪನಿಂಗ್ ಬ್ಯಾಟಿಂಗ್‌ಗೆ ಅವಕಾಶ ಸಿಗಲಿದೆ ಅನ್ನೋದು ಕುತೂಹಲ ಮೂಡಿಸಿತ್ತು. ಆದರೆ ಕೊಹ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಮೊದಲನೇ ಟಿ20ಐ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ಮೊದಲನೇ ಟಿ20ಐಗೆ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಮೊದಲ ಆಯ್ಕೆಯ ಇಬ್ಬರು ಬ್ಯಾಟ್ಸ್‌ಮನ್‌ಗಳಾಗಿರಲಿದ್ದಾರೆ. ಶಿಖರ್ ಧವನ್ 3ನೇ ಆರಂಭಿಕ ಬ್ಯಾಟ್ಸ್‌ಮನ್ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications