Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಂಗೇಜ್ ಆದ ಬ್ಯಾಡ್‌ಬಾಯ್‌ಗೆ ಕ್ಯಾಪ್ಟನ್ ವಿರಾಟ್‌ ಕೊಹ್ಲಿ ಶುಭಾಶಯ

Virat Kohli Congratulates Hardik Pandya On Engagement With Natasa Stankovic

ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾ ತಮ್ಮ ಪ್ರೇಯಸಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿನ್ನೆ ಸಂಜೆ ಹಾರ್ದಿಕ್ ಪಾಂಡ್ಯಾ ತಮ್ಮ ಪ್ರೇಯಸಿ ನಟಿ ನತಾಶಾ ಸ್ಟಾಂಕೋವಿಕ್ ಅವರಿಗೆ ರಿಂಗ್ ತೊಡಿಸುವ ವೀಡಿಯೋವನ್ನು ಹಂಚಿಕೊಂಡಿದ್ದರು. ಇದಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಂತಸದಿಂದ ಪ್ರತಿಕ್ರಿಯಿಸಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಂಡ್ಯಾ ಅವರ ಪೋಸ್ಟ್‌ಗೆ "ಅಭಿನಂದನೆಗಳು 'H'. ಎಂತಾ ಆಹ್ಲಾದಕರ ಸರ್ಪ್ರೈಸ್. ಉತ್ತಮ ಕ್ಷಣಗಳು ನಿಮ್ಮದಾಗಲಿ, ಒಳಿತಾಗಲಿ " ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿಯಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಂಡ್ಯಾ ಜೋಡಿಗೆ ಶುಭಾಶಯ ಕೋರಿದ್ದಾರೆ.

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಧೋನಿ ಕೂಡ ಹಾರ್ದಿಕ್ ಪಾಂಡ್ಯಾ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಹಾರ್ದಿಕ್ ಪಾಂಡ್ಯಾರ ಟೀಮ್ ಇಂಡಿಯಾದ ಸಹಪಾಠಿಗಳು ಐಪಿಎಲ್‌ನಲ್ಲಿ ಪಾಂಡ್ಯಾ ಪ್ರತಿನಿಧಿಸುವ ಮುಂಬೈ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯಾಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಹಾರ್ದಿಕ್ ಪಾಂಡ್ಯಾ ಆಪ್ತ ಗೆಳೆಯ ಕೆಎಲ್ ರಾಹುಲ್, ಯುಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ ಇನ್ಸ್ಟಾಗ್ರಾಮ್‌ನಲ್ಲಿ ಹಾರ್ದಿಕ್ ಪಾಂಡ್ಯಾಗೆ ಶುಭಾಶಯ ಕೋರಿದ್ದಾರೆ.

ಹರವಾರು ತಿಂಗಳಿನಿಂದ ಕದ್ದುಮುಚ್ಚಿ ಸುತ್ತಾಡಿದ್ದ ಪಾಂಡ್ಯಾ ಜೋಡಿ ಪ್ರೀತಿಯ ವಿಚಾರ ಗುಟ್ಟಾಗೇನು ಉಳಿದಿರಲಿಲ್ಲ. ಆದರೆ ಇದನ್ನು ಪಾಂಡ್ಯಾ ಖಚಿತ ಪಡಿಸಿರಲಿಲ್ಲ. ಹೊಸ ವರ್ಷದ ಮೊದಲ ಪೋಸ್ಟ್‌ನಲ್ಲಿ ಪ್ರೀತಿಯ ವಿಚಾರವನ್ನು ಹಂಚಿಕೊಂಡ ಪಾಂಡ್ಯ ನಿನ್ನೆ ಸಂಜೆಯ ವೇಳೆಗೆ ಎಂಗೇಜ್‌ಮೆಂಟ್ ವೀಡಿಯೋ ಹಂಚಿಕೊಂಡಿದ್ದರು. ಹೀಗೆ ರಿಂಗ್ ತೊಡಿಸುವ ಮೂಲಕ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆಯೊತ್ತಿದ್ದಾರೆ.

Story first published: Thursday, January 2, 2020, 15:19 [IST]
Other articles published on Jan 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+