For Quick Alerts
ALLOW NOTIFICATIONS  
For Daily Alerts
 

Virat Kohli: ಸಚಿನ್-ರೋಹಿತ್ ಮಾಡಲು ಸಾಧ್ಯವಾಗದ ದಾಖಲೆಯನ್ನು ಸೃಷ್ಟಿಸಿದ ವಿರಾಟ್ ಕೊಹ್ಲಿ!

ಜೂನ್‌ 22 ಶನಿವಾರ, 2024ರ ಟಿ20 ವಿಶ್ವಕಪ್‌ನ ಸೂಪರ್‌-8ರ ಹೈವೋಲ್ಟೇಜ್‌ ಪಂದ್ಯದಲ್ಲಿ ಭಾರತದ ಎದುರು ಬಾಂಗ್ಲಾದೇಶದ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಟೀಮ್‌ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 196 ರನ್ ಗಳಿಸಿತು.

ಉಪನಾಯಕ ಹಾರ್ದಿಕ್ ಪಾಂಡ್ಯ 27 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿದರು. ಇವರಲ್ಲದೆ ವಿರಾಟ್ ಕೊಹ್ಲಿ 37 ರನ್, ರಿಷಬ್ ಪಂತ್ 36 ರನ್ ಮತ್ತು ಶಿವಂ ದುಬೆ 34 ರನ್ ಗಳಿಸಿದರು. ಪರಿಣಾಮ ಟೀಮ್‌ ಇಂಡಿಯಾ 5 ನಷ್ಟಕ್ಕೆ 196 ರನ್‌ಗಳ ಬೃಹತ್‌ ಟಾರ್ಗೆಟ್‌ ಗಳಿಸಿತ್ತು.

Virat Kohli created new record in world cricket

ಈ ಪಂದ್ಯದಲ್ಲಿ ಟೀಮ್‌ ಇಂಡಿಯಾ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ 28 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು. ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿ 9ನೇ ಓವರ್‌ನ ಮೊದಲ ಎಸೆತದಲ್ಲಿ ತಂಝಿಮ್ ಹಸನ್ ಸಾಕಿಬ್ ಬೌಲಿಂಗ್‌ ಕ್ಲೀನ್ ಬೌಲ್ಡ್ ಆದರು.

ಕಡಿಮೆ ರನ್‌ಗೆ ಔಟ್‌ ಆದರೂ, ವಿರಾಟ್ ತಮ್ಮ ಇನ್ನಿಂಗ್ಸ್‌ನಲ್ಲಿ ವಿಶಿಷ್ಟ ಸಾಧನೆ ಮಾಡಿದರು. ಏಕದಿನ ವಿಶ್ವಕಪ್ ಮತ್ತು ಟಿ20 ವಿಶ್ವಕಪ್‌ನಲ್ಲಿ ಒಟ್ಟು 3000 ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ವಿರಾಟ್‌ ಕೊಹ್ಲಿ ಪಾತ್ರರಾದರು.

ಏಕದಿನ ವಿಶ್ವಕಪ್‌ನ 37 ಪಂದ್ಯಗಳ 37 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ 1795 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 59.83 ಆಗಿದೆ. ವಿರಾಟ್ 5 ಶತಕ ಹಾಗೂ 12 ಅರ್ಧ ಶತಕ ಸಿಡಿಸಿದ್ದಾರೆ.

ಇನ್ನು ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ 32 ಪಂದ್ಯಗಳ 30 ಇನ್ನಿಂಗ್ಸ್‌ಗಳಲ್ಲಿ 1207 ರನ್ ಗಳಿಸಿದ್ದಾರೆ. 63.52 ಸರಾಸರಿಯಲ್ಲಿ ಮತ್ತು 129.78 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುವ ಮೂಲಕ 14 ಅರ್ಧಶತಕ ಬಾರಿಸಿದ್ದಾರೆ.

ಈ ಮೂಲಕ ಕೊಹ್ಲಿ ಏಕದಿನ ಹಾಗೂ ಟಿ20 ವಿಶ್ವಕಪ್‌ನ 69 ಪಂದ್ಯಗಳಲ್ಲಿ 3002 ರನ್ ಗಳಿಸಿದ್ದಾರೆ. ಈವರೆಗೂ ವಿಶ್ವದ ಯಾವುದೇ ಬ್ಯಾಟರ್‌ಗಳ ಈ ಸಾಧನೆ ಮಾಡಿಲ್ಲ.

Story first published: Saturday, June 22, 2024, 23:23 [IST]
Other articles published on Jun 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+