ಭಾರತ vs ಇಂಗ್ಲೆಂಡ್: ದಾಖಲೆ ಬರೆದ ನಾಯಕ ವಿರಾಟ್ ಕೊಹ್ಲಿ

ಅಹ್ಮದಾಬಾದ್: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ನಾಯಕನಾಗಿ ಟಿ20ಐನಲ್ಲಿ ಅತೀ ಹೆಚ್ಚು 50+ ರನ್ ಬಾರಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಕೊಹ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಕೊಹ್ಲಿ ಈ ಮೈಲಿಗಲ್ಲು ಸ್ಥಾಪಿಸಿದರು.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ (ಮಾರ್ಚ್ 20) ನಡೆದ ಭಾರತ-ಇಂಗ್ಲೆಂಡ್ ಐದನೇ ಮತ್ತು ಕೊನೇಯ ಟಿ20 ಪಂದ್ಯದಲ್ಲಿ ಆರಂಭಿಕರಾಗಿ ಬಂದಿದ್ದ ವಿರಾಟ್ ಕೊಹ್ಲಿ 52 ಎಸೆತಗಳಲ್ಲಿ 80 ರನ್ ಸೇರಿಸಿದರು. ಇದರೊಂದಿಗೆ ಕೊಹ್ಲಿ ಹೆಸರಲ್ಲಿ ದಾಖಲೆ ನಿರ್ಮಾಣವಾಗಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಭಾರತ, ರೋಹಿತ್ ಶರ್ಮಾ 64 (34), ವಿರಾಟ್ ಕೊಹ್ಲಿ 80, ಸೂರ್ಯಕುಮಾರ್ ಯಾದವ್ 32 (17), ಹಾರ್ದಿಕ್ ಪಾಂಡ್ಯ 39 (17) ರನ್‌ನೊಂದಿಗೆ 20 ಓವರ್‌ಗೆ 2 ವಿಕೆಟ್ ಕಳೆದು 224 ರನ್ ಗಳಿಸಿತ್ತು.
ಟಿ20ಐನಲ್ಲಿ ನಾಯಕರಾಗಿ ಅತ್ಯಧಿಕ 50+ ರನ್ ದಾಖಲೆ ಪಟ್ಟಿ
* ವಿರಾಟ್ ಕೊಹ್ಲಿ*, ಭಾರತ, 12 ಸಾರಿ
* ಕೇನ್ ವಿಲಿಯಮ್ಸನ್, ನ್ಯೂಜಿಲೆಂಡ್, 11 ಸಾರಿ
* ಆ್ಯರನ್ ಫಿಂಚ್, ಆಸ್ಟ್ರೇಲಿಯಾ, 10 ಸಾರಿ
* ಇಯಾನ್ ಮಾರ್ಗನ್, ಇಂಗ್ಲೆಂಡ್, 9 ಸಾರಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications