Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಟ್ರೋಫಿ ಗೆಲುವಿನಲ್ಲಿ ಎಂಎಸ್ ಧೋನಿಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ

ಶನಿವಾರ, ಜೂನ್ 29ರಂದು ಬಾರ್ಬಡೋಸ್‌ನಲ್ಲಿ ನಡೆದ 2024ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ಗಳಿಂದ ಸೋಲಿಸಿ ತಮ್ಮ ಎರಡನೇ ಟಿ20 ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿದೆ.

ಇದೇ ವೇಳೆ ಟೀಮ್ ಇಂಡಿಯಾ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಒಂದು ವಿಶಿಷ್ಟ ಮೈಲಿಗಲ್ಲನ್ನು ಸ್ಥಾಪಿಸಿದರು. ಎಲ್ಲಾ ನಾಲ್ಕು ಐಸಿಸಿ ಪುರುಷರ ವೈಟ್‌ಬಾಲ್ ಟ್ರೋಫಿ ವಿಜೇತ ಆಡುವ 11ರ ತಂಡದ ಭಾಗವಾಗಿರುವ ಏಕೈಕ ಆಟಗಾರ ಎನಿಸಿದರು.

Virat Kohli Creates A Record that Even MS Dhoni Could Not Achieve in Winning the ICC Trophy

ವಿರಾಟ್ ಕೊಹ್ಲಿ 2008ರಲ್ಲಿ ಅಂಡರ್-19 ವಿಶ್ವಕಪ್, 2011ರಲ್ಲಿ ಹಿರಿಯರ ಏಕದಿನ ವಿಶ್ವಕಪ್, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು ಇದೀಗ 2024ರಲ್ಲಿ ಟಿ20 ವಿಶ್ವಕಪ್ ಎತ್ತಿಹಿಡಿದ ಭಾರತ ತಂಡದ ಭಾಗವಾಗಿದ್ದರು.

ವಿಪರ್ಯಾಸವೆಂದರೆ, ಭಾರತ ತಂಡ 2008ರಲ್ಲಿ ಅಂಡರ್-19 ವಿಶ್ವಕಪ್ ಪ್ರಶಸ್ತಿಯನ್ನು ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ಗೆದ್ದಿತ್ತು. ಅದೇ ತಂಡವನ್ನು ಇದೀಗ ಭಾರತ ಟಿ20 ವಿಶ್ವಕಪ್ 2024ರ ಫೈನಲ್‌ನಲ್ಲಿ ಸೋಲಿಸಿದರು.

ಫೈನಲ್‌ನ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಸ್ವೀಕರಿಸಿದ ವಿರಾಟ್ ಕೊಹ್ಲಿ, ಇದು ತಮ್ಮ ಕೊನೆಯ ಟಿ20 ವಿಶ್ವಕಪ್ ಮತ್ತು ಅಂತಾರಾಷ್ಟ್ರೀಯ ಟಿ20 ಪಂದ್ಯ ಎಂದು ದೃಢಪಡಿಸಿದರು.

ವಿರಾಟ್ ಕೊಹ್ಲಿಯ ಅದ್ಭುತ ಟಿ20 ಕ್ರಿಕೆಟ್ ವೃತ್ತಿಜೀವನವು 2010ರಲ್ಲಿ ಪ್ರಾರಂಭವಾಯಿತು. ಅನುಭವಿ ಬ್ಯಾಟರ್ ಈವರೆಗೆ 125 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 48.69ರ ಸರಾಸರಿಯಲ್ಲಿ 4,188 ರನ್ ಗಳಿಸಿದ್ದಾರೆ.

ಭಾರತ ತಂಡದ ಟಿ20 ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನವನ್ನು ಪದೇ ಪದೇ ಪ್ರಶ್ನಿಸಲಾಗುತ್ತಿತ್ತು. ಟಿ20 ವಿಶ್ವಕಪ್ 2024ರ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ-ವಿಜೇತ ಅರ್ಧಶತಕದೊಂದಿಗೆ ತಮ್ಮ ಉಪಸ್ಥಿತಿಯನ್ನು ಸಾಬೀತುಪಡಿಸಿದರು.

ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ ನಿರ್ಣಾಯಕ 76 ರನ್ ಗಳಿಸಿ ಭಾರತ ತಂಡ ಸವಾಲಿನ 176 ರನ್‌ಗಳ ಮೊತ್ತ ದಾಖಲಿಸಿತು. ನಂತರ ರೋಹಿತ್ ಶರ್ಮಾ ಪಡೆ ಯಶಸ್ವಿಯಾಗಿ ರಕ್ಷಿಸಿತು.

Virat Kohli Creates A Record that Even MS Dhoni Could Not Achieve in Winning the ICC Trophy

ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಎತ್ತರ ಏರಿದ ಆಟಗಾರರಲ್ಲಿ ಒಬ್ಬರಾಗಿ ಉಳಿದಿರುವ ವಿರಾಟ್ ಕೊಹ್ಲಿ, ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದರು. ಹೀಗಾಗಿ ಭಾರತದ ಶ್ರೇಷ್ಠ ಕ್ರಿಕೆಟಿಗ ಎಂಎಸ್ ಧೋನಿ ಕೂಡ ಸಾಧಿಸದ ಐಸಿಸಿ ಟ್ರೋಫಿಗಳ ಅನನ್ಯ ಪಟ್ಟಿಯನ್ನು ಪೂರ್ಣಗೊಳಿಸಿದರು.

ಎಲ್ಲಾ ಮೂರು ಐಸಿಸಿ ವೈಟ್-ಬಾಲ್ ಟ್ರೋಫಿಗಳನ್ನು (ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ) ಗೆದ್ದ ಕೆಲವೇ ಆಟಗಾರರಲ್ಲಿ ಎಂಎಸ್ ಧೋನಿ ಒಬ್ಬರಾಗಿ ಉಳಿದಿದ್ದಾರೆ. ಆದರೆ ಅವರು ಅಂಡರ್-19 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿಲ್ಲ.

ಟಿ20 ವಿಶ್ವಕಪ್ ಟ್ರೋಫಿಯನ್ನು ತನ್ನ ಕ್ಯಾಬಿನೆಟ್‌ಗೆ ಸೇರಿಸುವ ಮೂಲಕ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಆಟಗಾರನು ಗೆಲ್ಲಬಹುದಾದ ಎಲ್ಲಾ 4 ವೈಟ್-ಬಾಲ್ ಐಸಿಸಿ ಪ್ರಶಸ್ತಿಗಳನ್ನು ಪಡೆದರು.

ವಿಶ್ವದಲ್ಲಿ ಯುವರಾಜ್ ಸಿಂಗ್ ಮಾತ್ರ ಸ್ವಲ್ಪ ವಿಭಿನ್ನ ರೀತಿಯಲ್ಲಿ ಸಾಧನೆ ಹೊಂದಿದ್ದಾರೆ. ಯುವರಾಜ್ ಸಿಂಗ್ 2000ರಲ್ಲಿ ಅಂಡರ್-19 ವಿಶ್ವಕಪ್, 2002ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ (ಭಾರತವು ಶ್ರೀಲಂಕಾದೊಂದಿಗೆ ಜಂಟಿ ವಿಜೇತರಾಗಿದ್ದರು), 2007ರಲ್ಲಿ ಟಿ20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದರು.

ಆದಾಗ್ಯೂ, ವಿರಾಟ್‌ ಕೊಹ್ಲಿ ಅವರು ಎಲ್ಲಾ ನಾಲ್ಕು ಪ್ರಶಸ್ತಿಗಳನ್ನು ಪೂರ್ಣವಾಗಿ ಗೆಲುವು ಸಾಧಿಸಿದರು. ಆದರೆ ಯುವರಾಜ್ ಸಿಂಗ್ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಹಂಚಿಕೊಂಡಿದ್ದರು.

ಇದೀಗ ವಿರಾಟ್ ಕೊಹ್ಲಿ ಕ್ಯಾಬಿನೆಟ್‌ನಲ್ಲಿ ಕಾಣೆಯಾಗಿರುವ ಏಕೈಕ ಟ್ರೋಫಿ ಎಂದರೆ, ಅದು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್. ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಎರಡು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಳ ಭಾಗವಾಗಿದ್ದಾರೆ. ಆದರೆ ಭಾರತ ಎರಡೂ ಸಂದರ್ಭಗಳಲ್ಲಿ ಸೋಲನ್ನು ಅನುಭವಿಸಿದೆ.

ಟೀಮ್ ಇಂಡಿಯಾ ವೈಟ್ ಜೆರ್ಸಿ ಧರಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಕ್ರಿಕೆಟ್ ವೃತ್ತಿಜೀವನವನ್ನು ಪೂರ್ಣಗೊಳಿಸಲು ಆಶಿಸುತ್ತಾನೆ.

Story first published: Sunday, June 30, 2024, 15:51 [IST]
Other articles published on Jun 30, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+