Virat Kohli: ಐಪಿಎಲ್‌ನಲ್ಲಿ ವಿರಾಟ್ ದಾಖಲೆ: ಮೈದನಾಕ್ಕೆ ನುಗ್ಗಿದ ಅಭಿಮಾನಿ
ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಆವೃತ್ತಿ ಆರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿ ಭರ್ಜರಿ ಕಂ ಬ್ಯಾಕ್ ಮಾಡಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇವರ ಬ್ಯಾಟಿಂಗ್ ಕಂಡ ಅಭಿಮಾನಿಗಳಲ್ಲಿ ಕಪ್ ಗೆಲುವಿನ ಆಸೆ ಚಿಗುರಿದೆ. ಹಾಗಿದ್ರೆ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲಿಸಿದ ರೆಕಾರ್ಡ್‌ಗಳ ಪಟ್ಟಿ ಇಲ್ಲಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಟೀಮ್ ಇಂಡಿಯಾಕ್ಕೆ ಆಧಾರವಾಗಿದ್ದ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲೂ ತಮ್ಮ ಸ್ಥಿರ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಇವರು ಮೊದಲ ಪಂದ್ಯದಲ್ಲಿ ಅಜೇಯ 59 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದ್ದಾರೆ. ಈ ವೇಳೆ 4 ಬೌಂಡರಿ, 3 ಸಿಕ್ಸರ್ ಸಹ ದಾಖಲಾಗಿವೆ. ಈ ಮೂಲಕ ವಿರಾಟ್ ತಮ್ಮ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದ್ದಾರೆ.

1- 400ನೇ ಟಿ20 ಪಂದ್ಯ
ಉದ್ಘಾಟನಾ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂಗಳಕ್ಕೆ ಇಳಿಯುತ್ತಲೇ ದಾಖಲೆ ಬರೆದರು. ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 400 ಪಂದ್ಯಗಳನ್ನು ಆಡಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ರೋಹಿತ್ ಶರ್ಮಾ (448), ದಿನೇಶ್ ಕಾರ್ತಿಕ್ (412) ಮಾತ್ರ ಈ ಸಾಧನೆ ಮಾಡಿದ್ದಾರೆ.
2- 13 ಸಾವಿರ ರನ್ ಹತ್ತಿರ
ಟಿ20 ಕ್ರಿಕೆಟ್‌ನಲ್ಲಿ ವಿರಾಟ್ 13 ಸಾವಿರ ರನ್‌ಗಳನ್ನು ದಾಟುವ ಸನಿಹದಲ್ಲಿ ನಿಂತಿದ್ದಾರೆ. ಇವರು ಈ ಸಾಧನೆ ಮಾಡಲು ಇನ್ನು ಅವರಿಗೆ 55 ರನ್ ಬೇಕಾಗುತ್ತದೆ. ಸದ್ಯ ವಿರಾಟ್ ಖಾತೆಯಲ್ಲಿ 12945 ರನ್‌ಗಳಿವೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಟಾಪ್ 5ನೇ ಸ್ಥಾನಕ್ಕೆ ಎಂಟ್ರಿ ಪಡೆದಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಡೇವಿಡ್ ವಾರ್ನರ್ (12913 ರನ್) ದಾಖಲೆ ಅಳಿಸಿದರು.
3- ಕೆಕೆಆರ್ ವಿರುದ್ಧ ಸಾವಿರ ರನ್
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಅರ್ಧಶತಕ ಬಾರಿಸಿದ್ರು. ಈ ಮೂಲಕ ಕೆಕೆಆರ್ ವಿರುದ್ಧ 1000 ರನ್‌ಗಳನ್ನು ಬಾರಿಸಿದ ಕ್ಲಬ್ ಸೇರಿಕೊಂಡರು. ಈ ಮೊದಲು ಡೇವಿಡ್ ವಾರ್ನರ್ (1093 ರನ್), ರೋಹಿತ್ ಶರ್ಮಾ (1070 ರನ್) ಈ ದಾಖಲೆ ಮಾಡಿದ್ದಾರೆ.

ಮೈದಾನಕ್ಕೆ ನುಗ್ಗಿದ ಫ್ಯಾನ್
ಆರ್‌ಸಿಬಿ ಹಾಗೂ ಕೆಕೆಆರ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಅರ್ಧಶತಕ ಪೂರೈಸಿದ ತಕ್ಷಣ, ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಬಂದಿದ್ದ ಅವರ ಅಭಿಮಾನಿ ಮೈದಾನಕ್ಕೆ ಪ್ರವೇಶಿಸಿ, ಪಿಚ್ ಕಡೆಗೆ ಓಡಿ ಕೊಹ್ಲಿಯ ಪಾದಗಳಿಗೆ ನಮಸ್ಕರಿಸಿದರು. ಕೊಹ್ಲಿ ತಕ್ಷಣ ಅವರನ್ನು ಎತ್ತಿದರು. ಭದ್ರತಾ ಸಿಬ್ಬಂದಿ ಆ ಅಭಿಮಾನಿಯನ್ನು ಮೈದಾನದಿಂದ ಹೊರಗೆ ಕರೆದೊಯ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications