ಧೋನಿ, ಅಜರ್, ಗಂಗೂಲಿ ನಾಯಕತ್ವ ದಾಖಲೆ ಧ್ವಂಸಗೊಳಿಸಿದ ಕೊಹ್ಲಿ

ಇಂದೋರ್, ನವೆಂಬರ್ 17: ಇಲ್ಲಿನ ಹೋಳ್ಕರ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ನಾಯಕ ವಿರಾಟ್ ಕೊಹ್ಲಿ ಅವರು ಹೊಸ ದಾಖಲೆ ಬರೆದಿದ್ದಾರೆ.
ಶನಿವಾರ(ನವೆಂಬರ್ 16)ದಂದು ಬಾಂಗ್ಲಾದೇಶ ವಿರುದ್ಧ ಇನ್ನಿಂಗ್ಸ್ ಹಾಗೂ 130 ರನ್ ಗಳಿಂದ ಟೀಂ ಇಂಡಿಯಾ ಜಯ ದಾಖಲಿಸಿದೆ. ಈ ಮೂಲಕ ಕೊಹ್ಲಿ ಅವರು 10ನೇ ಬಾರಿಗೆ ಇನ್ನಿಂಗ್ಸ್ ಜಯ ದಾಖಲಿಸಿದ ನಾಯಕ ಎನಿಸಿಕೊಂಡರು. ಧೋನಿ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದರು.
ಇದಕ್ಕೂ ಮುನ್ನ ಮೊಹಮ್ಮದ್ ಅಜರುದ್ದೀನ್ ಅವರು 8 ಬಾರಿ ಈ ಸಾಧನೆ ಮಾಡಿದ್ದರು. ಸೌರವ್ ಗಂಗೂಲಿ ಅವರು ತಮ್ಮ ನಾಯಕತ್ವದಲ್ಲಿ 7 ಬಾರಿ ಇನ್ನಿಂಗ್ಸ್ ಗೆಲುವು ದಾಖಲಿಸಿದ್ದರು.
ಕೊಹ್ಲಿ ಸಾಧನೆ: ದಕ್ಷಿಣ ಆಫ್ರಿಕಾ ವಿರುದ್ಧ ಪುಣೆ ಹಾಗೂ ರಾಂಚಿಯಲ್ಲಿ ಇನ್ನಿಂಗ್ಸ್ ಗೆಲುವು ದಾಖಲಿಸಿದ ಬಳಿಕ ಇಂದೋರ್ ನಲ್ಲಿ ಬಾಂಗ್ಲಾ ವಿರುದ್ಧ ಇನ್ನಿಂಗ್ಸ್ ಗೆಲುವು ಸಾಧಿಸಿ ಸತತ ಮೂರು ಗೆಲುವು ದಾಖಲಿಸಿದ ಸಾಧನೆ ಕೂಡಾ ಮಾಡಿದ್ದಾರೆ.
ಪುಣೆಯಲ್ಲಿ ಇನ್ನಿಂಗ್ಸ್ ಹಾಗೂ 119 ರನ್ ಹಾಗೂ ರಾಂಚಿಯಲ್ಲಿ ಇನ್ನಿಂಗ್ಸ್ ಹಾಗೂ 202 ರನ್ ಗಳಿಂದ ಜಯ ದಾಖಲಾಗಿತ್ತು. ಕೊಹ್ಲಿ ನಾಯಕತ್ವದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಸತತ 6 ಗೆಲುವು ಸಾಧಿಸಿದೆ. ಈ ಮುಂಚೆ ಧೋನಿ ನಾಯಕತ್ವದಲ್ಲಿ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ 4 ಹಾಗೂ ವೆಸ್ಟ್ ಇಂಡೀಸ್ ವಿರುದ್ಧ 2 ಒತ್ಟು 6 ಬಾರಿ ಜಯ ಸಾಧಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications